ಕೆಲವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಸಾಧಿಸಿರುವುದನ್ನು ನೀವು ನೋಡಿರಬಹುದು. ಮತ್ತೆ ಕೆಲವರು ಇಳಿ ವಯಸ್ಸಿನಲ್ಲಿ ಸಕ್ಸಸ್ ಆಗಿರುವುದನ್ನು ಕೇಳಿರುತ್ತೀರಿ. ಅಂದಹಾಗೆ ನಿಮಗೆ ಈಗಾಗಲೇ ಮೇಲಿನ ಶೀರ್ಷಿಕೆ ನೋಡಿಯೇ ತಿಳಿದಿರುತ್ತದೆ. ನಾವಿಂದು ಯಾವ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು. ಹೌದು, ಒಬ್ಬ ವ್ಯಕ್ತಿಯ ಜಾತಕವನ್ನು ಬಳಸಿ ಅವರು ಯಾವ ವರ್ಷದಲ್ಲಿ ಯಶಸ್ವಿಯಾಗುತ್ತಾರೆ ಅಥವಾ ಗಳಿಸುತ್ತಾರೆ ಎಂದು ನೋಡಬಹುದು.
ಅಷ್ಟೇ ಅಲ್ಲ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಅವರ ಬಗ್ಗೆ ಎಲ್ಲವನ್ನೂ ಹೇಳಬಹುದು. ಒಬ್ಬ ವ್ಯಕ್ತಿಯ ರಾಶಿಯನ್ನು ನಿರ್ಣಯಿಸುವ ಮೂಲಕ, ಆ ವ್ಯಕ್ತಿಯು ಯಾವ ಕ್ಷೇತ್ರದಲ್ಲಿ ಗಳಿಸುತ್ತಾನೆ ಎಂದೂ ತಿಳಿಯಬಹುದು. ಯಾವುದನ್ನು ವೃತ್ತಿಯಾಗಿ ತೆಗೆದುಕೊಂಡರೆ ಅಥವಾ ಜೀವನವು ಯಾವ ವಯಸ್ಸಿನಲ್ಲಿ ಸುಧಾರಿಸುತ್ತದೆ ಎಂಬ ಕಲ್ಪನೆಯನ್ನು ಸಹ ಪಡೆಯಬಹುದಂತೆ. ಹಾಗಾದರೆ ಬನ್ನಿ ಯಾವ ರಾಶಿಚಕ್ರ ಚಿಹ್ನೆಯವರು ಯಾವ ವಯಸ್ಸಿನಲ್ಲಿ ಯಶಸ್ಸು ಪಡೆಯುತ್ತಾರೆ ನೋಡೋಣ…
ಇಲ್ಲಿ ಕೆಲವರಿಗೆ ಚಿಕ್ಕ ವಯಸ್ಸಿಗೆ ಮೊದಲನೆಯ ಅವಕಾಶ ಹುಡುಕಿಕೊಂಡು ಬಂದಿದೆ. ಮತ್ತೆ ಕೆಲವರಿಗೆ ಮಧ್ಯ ವಯಸ್ಸಿನ ನಂತರವೂ ಅದೃಷ್ಟ ಮತ್ತೆ ಹುಡುಕಿಕೊಂಡು ಬಂದಿದೆ. ಹಾಗಾಗಿ ಸುವರ್ಣ ಅವಕಾಶಗಳು ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಿದ್ಧರಾಗಬೇಕು.
ಮೇಷ ರಾಶಿ – ಮೇಷ ರಾಶಿಯ ಜನರ ಜೀವನದಲ್ಲಿ 16, 22, 26, 36 ನೇ ವಯಸ್ಸಿಗೆ ಯಶಸ್ಸು ಸಿಗುತ್ತದೆ.
ವೃಷಭ ರಾಶಿ- 22, 32, 36, 43 ನೇ ವರ್ಷಕ್ಕೆ ವೃಷಭ ರಾಶಿಯವರ ಜೀವನದಲ್ಲಿ ಪ್ರಗತಿಯನ್ನು ನೋಡಬಹುದು.
ಮಿಥುನ ರಾಶಿ– ಮಿಥುನ ರಾಶಿಯವರು 22, 32, 42 ಮತ್ತು 45 ನೇ ವರ್ಷಕ್ಕೆ ಜೀವನದಲ್ಲಿ ಗೆಲುವು ಸಾಧಿಸಬಹುದು.
ಕರ್ಕಾಟಕ ರಾಶಿ– 15, 23, 29 ಮತ್ತು 32 ನೇ ವಯಸ್ಸಿನಲ್ಲಿ ಕರ್ಕ ರಾಶಿಯವರ ಜೀವನದಲ್ಲಿ ಯಶಸ್ಸು ಹುಡುಕಿ ಬರುತ್ತದೆ.
ಸಿಂಹ ರಾಶಿ- ಸಿಂಹ ರಾಶಿಯ ಜನರ ಜೀವನದಲ್ಲಿ ಯಶಸ್ಸಿನ ಸಮಯ 16, 22, 28 ಮತ್ತು 32ನೇ ವರ್ಷ.
ಕನ್ಯಾ ರಾಶಿ – 17, 19, 25, 35, 36 ನೇ ವಯಸ್ಸಿನಲ್ಲಿ ಕನ್ಯಾ ರಾಶಿಯವರ ಜೀವನದಲ್ಲಿ ಯಶಸ್ಸು ಸಿಗುತ್ತದೆ.
ತುಲಾ ರಾಶಿ – ತುಲಾ ರಾಶಿಯವರ ಜೀವನದಲ್ಲಿ ಯಶಸ್ಸು 24, 25, 32, 35 ಮತ್ತು 36 ನೇ ವರ್ಷಕ್ಕೆ ಲಭಿಸುತ್ತದೆ.
ವೃಶ್ಚಿಕ – ಈ ರಾಶಿಯವರ ಜೀವನದಲ್ಲಿ ಯಶಸ್ಸಿನ ವಯಸ್ಸು 22, 24, 28 ಮತ್ತು 41 ನೇ ವರ್ಷ.
ಧನು ರಾಶಿ – 18, 24, 33ನೇ ವಯಸ್ಸಿನಲ್ಲಿ ಧನು ರಾಶಿ ಜನರ ಜೀವನದಲ್ಲಿ ಜಯ ಸಿಗಲಿದೆ.
ಮಕರ ರಾಶಿ – ಮಕರ ರಾಶಿಯ ಜೀವನದಲ್ಲಿ ಯಶಸ್ಸು 27, 33, 35 ಮತ್ತು 37 ನೇ ವರ್ಷಕ್ಕೆ ಬರುತ್ತದೆ.
ಕುಂಭ ರಾಶಿ – ಕುಂಭ ರಾಶಿಯವರಿಗೆ ಜೀವನದಲ್ಲಿ ಕೀರ್ತಿ 26, 29, 36, 39 ನೇ ವರ್ಷಕ್ಕೆ ಬರುತ್ತದೆ.
ಮೀನ ರಾಶಿ– 16, 22, 28, 33 ಮತ್ತು 44 ನೇ ವಯಸ್ಸಿನಲ್ಲಿ ವಿಜಯ ಮೀನ ರಾಶಿಯವರ ಜೀವನದಲ್ಲಿ ಹುಡುಕಿಕೊಂಡು ಬರುತ್ತದೆ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)