ಈ ಹಿರಿಯ ನಟಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಮದುವೆಯಾದ ನಂತರ ಅವರು ಸಿನಿ ಜಗತ್ತಿನಿಂದ ದೂರ ಉಳಿದರು. ಕೆಲವು ವರ್ಷಗಳ ಹಿಂದೆ ಅವರು ಮತ್ತೆ ಹಿರಿತೆರೆಗೆ ಮರಳಿದರು. ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಅನೇಕ ಸೂಪರ್ಸ್ಟಾರ್ಗಳೊಂದಿಗೆ ನಾಯಕಿಯಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಸೂಪರ್ಹಿಟ್ ಚಿತ್ರಗಳನ್ನು ನೀಡಿದರು. ಆದರೆ, 21ನೇ ವಯಸ್ಸಿಗೆ ಹಿಂದಿ ಚಿತ್ರರಂಗದ ರೊಮ್ಯಾಂಟಿಕ್ ಹೀರೋನನ್ನು ಮದುವೆಯಾಗಿ ನಟನೆಗೆ ವಿದಾಯ ಹೇಳಿದರು. ಪ್ರಸ್ತುತ ನಟಿಯ ಮಗ ಮತ್ತು ಸೊಸೆ ಕೂಡ ಬಿ ಟೌನ್ನ ಸೂಪರ್ಸ್ಟಾರ್ ಆಗಿದ್ದಾರೆ. ಇವರು ಯಾರೆಂದು ಬಲ್ಲೀರಾ?.
‘ಸೂರಜ್’ ಮೂಲಕ ನಟನೆಗೆ ಪಾದಾರ್ಪಣೆ
ಈ ಹಿರಿಯ ನಟಿ ಬೇರೆ ಯಾರೂ ಅಲ್ಲ ನೀತು ಕಪೂರ್. ಸೂಪರ್ಸ್ಟಾರ್ ರಿಷಿ ಕಪೂರ್ ಅವರ ಪತ್ನಿ. ನೀತು ಕಪೂರ್ 1970 ಮತ್ತು 1980ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. 1966 ರಲ್ಲಿ ‘ಸೂರಜ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 1970 ರ ದಶಕದಲ್ಲಿ, ‘ದೀವಾರ್’, ‘ಖೇಲ್ ಖೇಲ್ ಮೇ’, ‘ಕಭಿ-ಕಭಿ’, ‘ಧರಮ್ ವೀರ್’, ‘ಅಮರ್ ಅಕ್ಬರ್ ಆಂಥೋನಿ’ ಮತ್ತು ‘ಕಾಲಾ ಪತ್ತರ್’ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು.
Also Read: ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್
ಕಪೂರ್ ಕುಟುಂಬದ ಸೊಸೆ
1980 ರಲ್ಲಿ ನೀತು ಕಪೂರ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಆದರೂ ಈ ಸಮಯದಲ್ಲಿ ಅವರು ರಿಷಿ ಕಪೂರ್ ಅವರನ್ನು ವಿವಾಹವಾದರು. ನೀತು ಕಪೂರ್, ರಿಷಿ ಕಪೂರ್ ಅವರನ್ನು ಮದುವೆಯಾದ ನಂತರ ಬಾಲಿವುಡ್ನ ಕಪೂರ್ ಕುಟುಂಬಕ್ಕೆ ಸೊಸೆಯಾದರು. ಇವರಿಗೆ ರಣಬೀರ್ ಕಪೂರ್ ಮತ್ತು ರಿದ್ಧಿಮಾ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ. ನೀತು ಕಪೂರ್ ರಿಷಿ ಕಪೂರ್ ಅವರನ್ನು ಮದುವೆಯಾದಾಗ, ಆಕೆಗೆ ಕೇವಲ 21 ವರ್ಷ. ಮದುವೆಯ ನಂತರ ಅವರು ನಟನೆಯಿಂದ ದೂರ ಉಳಿದರು. 1983 ರಲ್ಲಿ ಬಿಡುಗಡೆಯಾದ ‘ಗಂಗಾ ಮೇರಿ ಮಾ’ ದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
Also Read: ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?
ಚಿಕ್ಕ ವಯಸ್ಸಿಗೆ ಬಾಲಿವುಡ್ ತೊರೆದದ್ದೇಕೆ?
ಕರಣ್ ಜೋಹರ್ ಅವರ ಟಾಕ್ ಶೋನಲ್ಲಿ ನೀತು ಕಪೂರ್ ಕೇವಲ 20-21 ನೇ ವಯಸ್ಸಿನಲ್ಲಿ ಬಾಲಿವುಡ್ ತೊರೆದ ಬಗ್ಗೆ ಹೀಗೆ ಹೇಳಿದ್ದರು “ನಾನು 5 ನೇ ವಯಸ್ಸಿಗೆ ಕೆಲಸ ಮಾಡಲು ಪ್ರಾರಂಭಿಸಿದೆ. ಎಲ್ಲರೂ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ನನ್ನ ವೃತ್ತಿಜೀವನದ ಆರಂಭದಲ್ಲಿಯೇ ಖ್ಯಾತಿಯನ್ನು ಗಳಿಸಿದೆ. ಇದು ನಾನು ನಿರೀಕ್ಷಿಸಿದ ವಿಷಯವಲ್ಲ. 5 ರಿಂದ 21 ವರ್ಷದ ತನಕ ನಾನು ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಸುಮಾರು 70-80 ಚಿತ್ರಗಳಲ್ಲಿ ನಟಿಸಿದ್ದೇನೆ. 15 ವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದರೆ ಖಂಡಿತ ನೀವು ಸುಸ್ತಾಗುತ್ತೀರಿ.
ಮಕ್ಕಳಾದ ನಂತರ ಸಂಪೂರ್ಣವಾಗಿ ಮನೆಯವರನ್ನು ನೋಡಿಕೊಳ್ಳಲು ಬಯಸಿದೆ. ನನ್ನ ಪತಿ ತುಂಬಾ ಪಾಸಿಟಿವ್ ಆಗಿದ್ದರು. ನಾನು ಯಾವಾಗಲೂ ಅವರ ಜೊತೆಗೆ ಇರಬೇಕೆಂದು ಬಯಸಿದರು. ಹೀಗೆ ನನ್ನ ಜೀವನ ಸಂತೋಷದಿಂದ ಸಾಗುತ್ತಿತ್ತು. ನಾನು ತುಂಬಾ ಖುಷಿಯಾಗಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಕುಟುಂಬವನ್ನು ಹೊಂದಿದ್ದೆ. ಎಲ್ಲರೂ ತುಂಬಾ ಪ್ರೀತಿಸುತ್ತಿದ್ದರು. ನನ್ನ ಅತ್ತೆ ತುಂಬಾ ಒಳ್ಳೆಯವರು. ಮಾವ ಕೂಡ ಅದ್ಭುತ. ನಾವು ಸಂತೋಷವಾಗಿದ್ದೆವು, ತುಂಬಾ ಮೋಜು ಮಾಡಿದ್ದೇವೆ. ನಾನು ಚೆಂಬೂರಿನ ಡಿಯೋನಾರ್ ಕಾಟೇಜ್ನಲ್ಲಿ ವಾಸವಾಗಿದ್ದ ವರ್ಷಗಳು ಅತ್ಯುತ್ತಮವೆಂದೇ ಹೇಳಬಹುದು”.
ಬಾಲಿವುಡ್ಗೆ ಪುನರಾಗಮನ
ಹಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದರೂ, ನೀತು ಕಪೂರ್ ‘ಲವ್ ಆಜ್ ಕಲ್’, ‘ದೋ ದೂನಿ ಚಾರ್’ ಮತ್ತು ‘ಬೇಷರಂ’ ಚಿತ್ರಗಳ ಮೂಲಕ ಚಿತ್ರೋದ್ಯಮಕ್ಕೆ ಮರಳಿದರು. ಆದರೆ ಪೋಷಕ ಪಾತ್ರಗಳಲ್ಲಿ ಮಾತ್ರ ನಟಿಸಿದರು. ನೀತು ಕಪೂರ್ ಸಿನಿ ಇಂಡಸ್ಟ್ರಿಗೆ ಪುನರಾಗಮನದ ನಂತರ ನಟಿಸಿದ ಇತ್ತೀಚಿನ ಚಿತ್ರ ‘ಜಗ್ ಜಗ್ ಜೀಯೋ’. ಈ ಚಿತ್ರದಲ್ಲಿ, ಅವರು ಅನಿಲ್ ಕಪೂರ್, ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ನೀತು ‘ಲೆಟರ್ಸ್ ಟು ಮಿ.ಖನ್ನಾ’ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.
ನೀತು ಕಪೂರ್ ಅವರ ಮಗ ರಣಬೀರ್ ಕಪೂರ್ ಸಹ ಸೂಪರ್ ಸ್ಟಾರ್. ಅವರ ಸೊಸೆ ಆಲಿಯಾ ಭಟ್ ಕೂಡ ಸ್ಟಾರ್ ನಟಿ. ನೀತು ಈಗ ರಣಬೀರ್ ಮತ್ತು ಆಲಿಯಾ ಅವರ ಮಗಳು ರಾಹಾಗೆ ಮುದ್ದಿನ ಅಜ್ಜಿಯಾಗಿದ್ದಾರೆ.