ಬೇಸಿಗೆಯಲ್ಲಿ ಜನರು ಹೆಚ್ಚಾಗಿ ತಣ್ಣಗಿರುವ ಪಾನೀಯ ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲೂ ಹೆಚ್ಚಿನ ಜನರ ಆಯ್ಕೆ ಎಳನೀರು ಅಥವಾ ನಿಂಬೆ ಹಣ್ಣಿನ ನೀರು. ಆದರೆ ಈ ಎರಡರಲ್ಲಿ ಯಾವುದು ಬೇಸಿಗೆಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದಲ್ಲಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿ…
ಬೇಸಿಗೆ ಬಂದಾಯ್ತು. ಈ ಸಮಯದಲ್ಲಿ ದೇಹವನ್ನು ಹೈಡ್ರೀಕರಿಸಿ ತಂಪಾಗಿಡುವುದು ಮುಖ್ಯ. ಪ್ರಖರವಾದ ಸೂರ್ಯನ ಬೆಳಕು ಮತ್ತು ಶಾಖವು ದೇಹದಿಂದ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಜನರು ಇಂತಹ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಳನೀರು ಮತ್ತು ನಿಂಬೆ ಹಣ್ಣಿನ ನೀರನ್ನು ಕುಡಿಯುವುದು ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ.
ಅಷ್ಟೇ ಅಲ್ಲ, ಈ ಎರಡೂ ಪಾನೀಯಗಳು ಬಾಯಾರಿಕೆಯನ್ನು ನೀಗಿಸುವುದಲ್ಲದೆ, ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಆದರೆ ಬೇಸಿಗೆಯಲ್ಲಿ ಯಾವ ಪಾನೀಯವು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ ಇವೆರೆಡರಲ್ಲಿ ಯಾವುದು ಉತ್ತಮ ಎಂದು ನೋಡೋಣ ಬನ್ನಿ…
ಎಳನೀರಿನ ಪ್ರಯೋಜನಗಳು
ಸಮೃದ್ಧವಾಗಿದೆ ನೈಸರ್ಗಿಕ ಎಲೆಕ್ಟ್ರೋಲೈಟ್ಸ್
ಎಳನೀರಿನಲ್ಲಿ ಪೊಟ್ಯಾಶಿಯಂ, ಸೋಡಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂನಂತಹ ನೈಸರ್ಗಿಕ ಎಲೆಕ್ಟ್ರೋಲೈಟ್ಗಳಿವೆ, ಇದು ದೇಹವನ್ನು ತಕ್ಷಣವೇ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು ರಹಿತ
ಇದರಲ್ಲಿ ಕಡಿಮೆ ಕ್ಯಾಲೋರಿಯಿದೆ ಮತ್ತು ಕೊಬ್ಬು ರಹಿತವಾಗಿದ್ದು, ತೂಕ ನಿರ್ವಹಣೆಗೆ ಸಹಾಯಕವಾಗಿದೆ.
ಹೃದಯಕ್ಕೆ ಪ್ರಯೋಜನಕಾರಿ
ಎಳನೀರು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
ಜೀರ್ಣಕ್ರಿಯೆಗೆ ಸಹಾಯಕ
ಇದರಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಗ್ಯಾಸ್, ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ತ್ವಚೆಗೆ ಸಹಕಾರಿ
ಎಳನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.
ನಿಂಬೆ ಹಣ್ಣಿನ ನೀರಿನ ಪ್ರಯೋಜನಗಳು
ಸಮೃದ್ಧವಾಗಿದೆ ವಿಟಮಿನ್ ಸಿ
ನಿಂಬೆ ಹಣ್ಣಿನ ನೀರಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಡಿಟಾಕ್ಸ್ ಮಾಡಲಿದೆ
ನಿಂಬೆ ಹಣ್ಣಿನ ನೀರು ದೇಹದಿಂದ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿಡುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ನಿಂಬೆ ಹಣ್ಣಿನ ನೀರು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಹೆಚ್ಚಲಿದೆ ತಾಜಾತನ ಮತ್ತು ಶಕ್ತಿ
ಇದು ದಿನವಿಡೀ ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದ ಉಂಟಾಗುವ ಆಯಾಸವನ್ನು ನಿವಾರಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ನಿಂಬೆ ಹಣ್ಣಿನ ನೀರು ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಯಾವುದು ಉತ್ತಮ?
ನಿಮ್ಮ ದೇಹವನ್ನು ತಕ್ಷಣವೇ ಹೈಡ್ರೇಟ್ ಮಾಡಲು ಮತ್ತು ನೈಸರ್ಗಿಕ ಎಲೆಕ್ಟ್ರೋಲೈಟ್ಗಳು ಬೇಕಾದರೆ, ಎಳನೀರು ಉತ್ತಮ ಆಯ್ಕೆಯಾಗಿದೆ. ಅತಿಯಾದ ಶಾಖ ಅಥವಾ ವ್ಯಾಯಾಮದಿಂದಾಗಿ ಬೆವರಿನ ಮೂಲಕ ಎಲೆಕ್ಟ್ರೋಲೈಟ್ಗಳನ್ನು ಕಳೆದುಕೊಳ್ಳುವ ಜನರಿಗೆ ಇದು ವಿಶೇಷವಾಗಿ ಒಳ್ಳೆಯದು.
ಹಾಗೆಯೇ ತೂಕ ಇಳಿಸಿಕೊಳ್ಳಲು, ಜೀರ್ಣಕ್ರಿಯೆ ಸುಧಾರಣೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ಗುರಿಯಾಗಿದ್ದರೆ, ನಿಂಬೆ ಹಣ್ಣಿನ ನೀರು ನಿಮಗೆ ಒಳ್ಳೆಯದು. ಇದು ದೇಹವನ್ನು ಡಿಟಾಕ್ಸ್ ಮಾಡಲಿದೆ ಮತ್ತು ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಅನ್ನು ಒದಗಿಸುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಯಾವುದು ಉತ್ತಮ ಎಂಬುದನ್ನು ನೀವೇ ನಿರ್ಧರಿಸಿ.