Coffee Side Effects: ಬಹುತೇಕರು ಒಂದು ಕಪ್ ಕಾಫಿ ಸೇವಿಸಿಯೇ ತಮ್ಮ ದಿನವನ್ನು ಪ್ರಾರಂಭಿಸುವುದು. ಕಾಫಿ ಒತ್ತಡವನ್ನು ನಿವಾರಿಸಲು, ನಿಮ್ಮನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ಆದರೂ ಕಾಫಿ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯೇ?, ನೀವು ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯಬಹುದು? ಈ ಬಗ್ಗೆ ಗಮನ ಹರಿಸುವುದು ಮುಖ್ಯ. ಮೊದಲನೆಯದಾಗಿ ನೀವು ದಿನಕ್ಕೆ ಎಷ್ಟು ಕಾಫಿ ಕುಡಿಯುತ್ತೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಎರಡನೆಯದು ಕಾಫಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬಹುದಾದರೂ, ಅತಿಯಾದ ಕಾಫಿ ಸೇವನೆಯು ಹಾನಿಕಾರಕವಾಗಿದೆ. ಆದ್ದರಿಂದ ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಸರಿ? ಹೆಚ್ಚು ಕಾಫಿ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು? ನೋಡೋಣ ಬನ್ನಿ…
ಪ್ರಯೋಜನಗಳೇನು?
ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಕ್ಯಾಲೊರಿಗಳನ್ನು ಸುಡುವಲ್ಲಿ ಸಹಕಾರಿ.
ಪಿತ್ತಗಲ್ಲು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಅನಾನುಕೂಲಗಳೇನು?
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಅಧಿಕ ರಕ್ತದೊತ್ತಡದ ಸಮಸ್ಯೆ ಬರಬಹುದು.
ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು.
ಗರ್ಭಾವಸ್ಥೆಯಲ್ಲಿ ಇದು ತುಂಬಾ ಹಾನಿಕಾರಕವಾಗಿದೆ.
ಅತಿಯಾದ ಒತ್ತಡ ಅಥವಾ ಆತಂಕದ ಸಮಸ್ಯೆ ಬರಬಹುದು.
ಅಧಿಕ ಆಮ್ಲೀಯತೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ.
Read Also: Side Effects of Tea: ನೀವೂ ಈ ರೀತಿ ಟೀ ಕುಡಿಯುತ್ತಿದ್ದರೆ ಕ್ಯಾನ್ಸರ್ ಉಂಟಾಗುವ ಸಂಭವ ಹೆಚ್ಚು!
ಅಧ್ಯಯನಗಳು ಹೇಳುವುದೇನು?
ಹೆಚ್ಚಿನ ಕಾಫಿ ಸೇವನೆಯು ಅನೇಕ ವಿಧಗಳಲ್ಲಿ ಹಾನಿಕಾರಕವಾಗಬಹುದು. ಅದು ನಿಮಗೆ ತಕ್ಷಣವೇ ತಿಳಿಯುವುದಿಲ್ಲ. ಆದರೆ ನಿಮ್ಮ ದೈನಂದಿನ ಅಭ್ಯಾಸದಲ್ಲಿ ಹೆಚ್ಚು ಕಾಫಿಯನ್ನು ಸೇರಿಸುತ್ತಾ ಹೋದಂತೆ ವರ್ಷಗಳ ನಂತರ ಅದರ ಅಡ್ಡ ಪರಿಣಾಮಗಳನ್ನು ತೋರಿಸುತ್ತದೆ. ಹೆಚ್ಚು ಕಾಫಿ ಸೇವನೆ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದರಲ್ಲಿ ವರದಿಯಾಗಿದೆ. ವಯಸ್ಸಾದಂತೆ ಅಧಿಕ ಕಾಫಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಅಷ್ಟೇ ಅಲ್ಲ, ಅಧಿಕ ರಕ್ತದೊತ್ತಡದ ಅಪಾಯವೂ ಹೆಚ್ಚಾಗುತ್ತದೆ.
ಒಬ್ಬರು ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯಬೇಕು?
ನೀವು ಕಾಫಿ ಪ್ರಿಯರಾಗಿದ್ದರೆ ದಿನಕ್ಕೆ 2 ರಿಂದ 3 ಕಪ್ ಕಾಫಿ ಸೇವಿಸಬಹುದು. ಆದರೆ 4 ಕಪ್ಗಿಂತ ಹೆಚ್ಚು ಕಾಫಿ ಕುಡಿಯುವುದು ಹಾನಿಕಾರಕವಾಗಿದೆ. ಸಂಶೋಧಕರ ಪ್ರಕಾರ, ಕಾಫಿಯಲ್ಲಿ ಕೆಫೀನ್ ಇದ್ದು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.