ಚಲನಚಿತ್ರಗಳ ಬಗ್ಗೆ ಮಾತನಾಡುವಾಗಲೆಲ್ಲಾ ನಮಗೆ ಮೊದಲು ನೆನಪಾಗುವುದು ಪ್ರಪಂಚದಾದ್ಯಂತ ದೊಡ್ಡ ಬ್ಲಾಕ್ಬಸ್ಟರ್ಗಳಾಗಿ ಅಪಾರ ಹಣವನ್ನು ಗಳಿಸಿದ ಸಿನಿಮಾಗಳು. ಇಂತಹ ಸಿನಿಮಾಗಳನ್ನು ನೋಡಲು ಎಲ್ಲರೂ ಇಷ್ಟಪಡುತ್ತೇವೆ ಏಕೆಂದರೆ ಅವುಗಳ ಕಥೆ ತುಂಬಾ ಚೆನ್ನಾಗಿರುತ್ತದೆ ಮತ್ತು ಬಹಳ ಅದ್ಭುತವಾದ ರೀತಿಯಲ್ಲಿ ನಿರ್ಮಿಸಲಾಗಿರುತ್ತದೆ. ಆದರೆ ಅತಿ ದೊಡ್ಡ ಫ್ಲಾಪ್ ಸಿನಿಮಾಗಳೂ ಇರುತ್ತವೆ. ಒಂದು ವೇಳೆ ಈ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಈ ಲೇಖನದಲ್ಲಿ ನಾವು ಆ ಚಿತ್ರದ ಬಗ್ಗೆ ಹೇಳಲಿದ್ದೇವೆ…
ಬಹುಶಃ ಈ ಸಿನಿಮಾದಲ್ಲಿ ಅನುಭವಿ ಕಲಾವಿದರು ಅಭಿನಯಿಸಿಲ್ಲ ಅದಕ್ಕೆ ಮಕಾಡೆ ಮಲಗಿರಬೇಕು ಎಂದು ನೀವು ಭಾವಿಸುತ್ತಿದ್ದರೆ, ವಿಷಯ ಹಾಗಿಲ್ಲ. ಬದಲಾಗಿ, ಜನರ ನೆಚ್ಚಿನ ತಾರೆಯರು ಇದರಲ್ಲಿ ನಟಿಸಿದ್ದರು. ಆದರೆ ಚಿತ್ರದ ಕಥೆ ಮತ್ತು ನಿರ್ದೇಶನ ತುಂಬಾ ಕಳಪೆಯಾಗಿದ್ದರಿಂದ ಸಿನಿಮಾ ಸೋತಿತು.
Also Read: ಮೊದಲ ಸಿನಿಮಾದಲ್ಲೇ ಹೃತಿಕ್ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?
ಅದು ಯಾವ ಸಿನಿಮಾ?
ಈ ಸಿನಿಮಾ ಮತ್ತಾವುದೋ ಅಲ್ಲ, ಬಾಲಿವುಡ್ನ ದಿ ಲೇಡಿ ಕಿಲ್ಲರ್. ಇದರಲ್ಲಿ ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ನಟಿಸಿದ್ದರು. ಆದರೆ ಸಿನಿಮಾ ನಿರ್ದೇಶನ ಮಾತ್ರ ಹೇಳಿಕೊಳ್ಳುವಂತಿರಲಿಲ್ಲ. ಜನರಿಗೆ ಇದು ಇಷ್ಟವಾಗಲಿಲ್ಲ. ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಯಿತು. ಹೀಗಾಗಿ, ಚಿತ್ರಮಂದಿರಗಳಲ್ಲಿ ಶೋಚನೀಯವಾಗಿ ವಿಫಲವಾಯಿತು. ಸಿನಿಮಾ ನಿರ್ಮಾಣಕ್ಕೆ ಒಟ್ಟು 45 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು, ಆದರೆ ಈ ಸಿನಿಮಾ ಕೇವಲ 60,೦೦೦ ರೂಪಾಯಿ ಗಳಿಸಿದೆ ಎಂದು ತಿಳಿದರೆ ಶಾಕ್ ಆಗಬಹುದು. ಅಂದಹಾಗೆ ಇದು 2023 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಅತಿ ದೊಡ್ಡ ಫ್ಲಾಪ್ ಚಿತ್ರ
ಈ ಸಿನಿಮಾವನ್ನು ಇದುವರೆಗಿನ ಭಾರತೀಯ ಚಿತ್ರರಂಗದ ಅತಿದೊಡ್ಡ ಸೋಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಚಿತ್ರದಿಂದ ನಿರ್ದೇಶಕರು ಕೇವಲ 0.0001% ಮಾತ್ರ ಗಳಿಸಿದ್ದಾರೆಂದು ಹೇಳಲಾಗಿದೆ. ದಿ ಲೇಡಿ ಕಿಲ್ಲರ್ ಅಜಯ್ ಬಹ್ಲ್ ನಿರ್ದೇಶಿಸಿದ್ದರೆ, ಚಿತ್ರದ ಕಥೆಯನ್ನು ಪವನ್ ಸೋನಿ ಮತ್ತು ಮಯಾಂಕ್ ತಿವಾರಿ ಜಂಟಿಯಾಗಿ ಬರೆದಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಗಳಿಕೆಯನ್ನೂ ಮಾಡಲಿಲ್ಲ. ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಅವರ ವೃತ್ತಿಜೀವನದ ಅತಿದೊಡ್ಡ ಫ್ಲಾಪ್ ಚಿತ್ರವಾಗಿ ಉಳಿಯಿತು. ಈ ಇಬ್ಬರೂ ನಟರನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟರಾದರೂ, ಜನರಿಗೆ ಚಿತ್ರ ಇಷ್ಟವಾಗಲಿಲ್ಲ. ಕೇವಲ 293 ಟಿಕೆಟ್ಗಳು ಭಾರತದಲ್ಲಿ ಮಾರಾಟವಾದವು.