1980ರ ದಶಕದಲ್ಲಿ ಹೇಮಾ ಮಾಲಿನಿ ಮತ್ತು ರೇಖಾ ಅವರ ವೃತ್ತಿಜೀವನ ಏರುಪೇರು ಕಾಣಲು ಶುರುವಾಯ್ತು. ಈ ಮಧ್ಯೆ ಜಯಲಲಿತಾ ಮತ್ತು ಜಯಾ ಬಚ್ಚನ್ ಚಿತ್ರರಂಗದಿಂದ ಆದಾಗಲೇ ನಿಧಾನವಾಗಿ ದೂರ ಸರಿಯಲು ಆರಂಭಿಸಿದರು. ಬಾಲಿವುಡ್ಗೆ ಅನೇಕ ಹೊಸ ನಟಿಯರು ಬಂದರು. ಈ ಸಮಯದಲ್ಲಿ ಶ್ರೀದೇವಿ, ಜಯಪ್ರದಾ ಮತ್ತು ಮಾಧುರಿ ದೀಕ್ಷಿತ್ ಅವರಂತಹ ನಟಿಯರು ಚಿತ್ರರಂಗಕ್ಕೆ ಕಾಲಿಡಲು ಪ್ರಾರಂಭಿಸಿದರು. ಅವರಲ್ಲಿ ಬಾಲನಟಿಯಾಗಿದ್ದವರು ನಟಿಯರಾಗಿದ್ದರು. ಈ ಸಾಲಿನಲ್ಲಿ ಮರಾಠಿ ಚಿತ್ರೋದ್ಯಮದ ಪ್ರಸಿದ್ಧ ನಟಿಯೂ ಇದ್ದರು. ಆ ನಟಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಚಿತ್ರೋದ್ಯಮವನ್ನು ತೊರೆಯುವ ಮೊದಲು ಹಿಂದಿ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದರು. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಅಂತಹವರಿಗೆ ಕಠಿಣ ಸ್ಪರ್ಧೆ ನೀಡಿದ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಈ ನಟಿ ಯಾರೆಂದು ಬಲ್ಲೀರಾ…?
ಯೆಸ್… ಆ ನಟಿ ಬೇರೆ ಯಾರೂ ಅಲ್ಲ, ರೂಪಿಣಿ ಎಂದು ಕರೆಯಲ್ಪಡುವ ಕೋಮಲ್ ಮಹುವಕರ್. ಇವರು ಹೃಷಿಕೇಶ್ ಮುಖರ್ಜಿಯವರ ‘ಮಿಲಿ’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ ಇನ್ನೂ ಎರಡು ಚಿತ್ರಗಳಲ್ಲಿ ನಟಿಸಿದರು. ‘ಪಾಯಲ್ ಕಿ ಜಾಂಕರ್’ ಚಿತ್ರದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ಅವರು ರಿಷಿ ಕಪೂರ್ ಜೊತೆ ‘ಮೇರಿ ಅದಾಲತ್’ ನಲ್ಲಿ ಕಾಣಿಸಿಕೊಂಡರು. ರೂಪಿಣಿಯ ಜನಪ್ರಿಯತೆ ಉತ್ತುಂಗಕ್ಕೇರಿತು. ಆ ನಂತರ ಸಿನಿಪ್ರಿಯರಿಗೆ ಅವರ ಹೆಸರು ಚಿರಪರಿಚಿತವಾಯಿತು. ವೃತ್ತಿಜೀವನದ ಅವಧಿಯಲ್ಲಿ, ಅವರು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಶ್ರೀದೇವಿ, ಮಾಧುರಿ ದೀಕ್ಷಿತ್ ಮತ್ತು ಜಯಪ್ರದಾ ಅವರಂತಹ ಪ್ರಸಿದ್ಧ ನಟಿಯರೂ ಸಹ ಇವರ ಮುಂದೆ ಡಲ್ ಆಗಿ ಕಾಣುತ್ತಿದ್ದರು. ಆದರೆ ಅವರು ತಮ್ಮ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಚಿತ್ರೋದ್ಯಮವನ್ನು ಬಿಡಲು ನಿರ್ಧರಿಸಿದರು.
1995 ರಲ್ಲಿ ಮೋಹನ್ ಕುಮಾರ್ ಅವರನ್ನು ರೂಪಿಣಿ ವಿವಾಹವಾದರು. ಕುಟುಂಬದ ಮೇಲೆ ಗಮನಹರಿಸುವ ಸಲುವಾಗಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡರು. ಆದರೆ ಆಗ ಅವರ ಕೈಯ್ಯಲ್ಲಿ ಅನೇಕ ಚಲನಚಿತ್ರಗಳನ್ನು ಹೊಂದಿದ್ದರು. ಕೊನೆಗೆ ಅವರು ಅವುಗಳನ್ನು ಮುಗಿಸಿಕೊಟ್ಟರು. ನಂತರ ಮುಂಬೈನ ಚೆಂಬೂರ್ನಲ್ಲಿ ವಾಸಿಸಲು ಪ್ರಾರಂಭಿಸಿದರು. ನಟಿಗೆ ಅನಿಶಾ ಎಂಬ ಮಗಳಿದ್ದಾಳೆ. ರೂಪಿಣಿ ಚೆಂಬೂರಿನಲ್ಲಿ ಯೂನಿವರ್ಸಲ್ ಹಾರ್ಟ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆಯನ್ನು ತೆರೆದಿದ್ದಾರೆ.
ಹಲವು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ ರೂಪಿಣಿ “ವೋ ರೆಹ್ನೆ ವಾಲಿ ಮೆಹ್ಲೋನ್ ಕಿ”ನಲ್ಲಿ ಶೀತಲ್ ಆಗಿ ಕಾಣಿಸಿಕೊಂಡರು. 26 ವರ್ಷಗಳ ಅಂತರದ ನಂತರ ಅವರು ‘ಚಿತ್ತಿ 2’ ಮೂಲಕ ಸಿನಿಮಾಗೆ ಕಂ ಬ್ಯಾಕ್ ಮಾಡಿದರು. ಆದರೆ, ಚಿತ್ರ ನೇರವಾಗಿ ಟಿವಿಯಲ್ಲಿ ರಿಲೀಸ್ ಆದ ಕಾರಣ ಅವರನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿಲ್ಲ. ಸದ್ಯ ಈಕೆ ತುಂಬಾ ಬದಲಾಗಿದ್ದಾರೆ. ಜನ ಗುರುತಿಸುವುದೇ ಇಲ್ಲ.