Story of a struggling actress: ಫೋಟೋದಲ್ಲಿ ಕಾಣುತ್ತಿರುವ ಈ ಪುಟ್ಟ ಬಾಲಕಿ ಬಾಲ್ಯದಲ್ಲಿ ತುಂಬಾ ಕಪ್ಪಗಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಗೇಲಿ ಮಾಡಿದ್ದೂ ಉಂಟು. ಆದರೆ ಮುಂದೇ ಇದೇ ಬಾಲಕಿ ಬೆಳೆದು ದೇಶ ವಿದೇಶಗಳಲ್ಲಿ ಸಾಕಷ್ಟು ಹೆಸರು ಗಳಿಸುತ್ತಾಳೆ ಎಂದು ಯಾರಿಗೆ ಗೊತ್ತಿತ್ತು. ಹೌದು, ಇಂದು ಆಕೆ 350 ಕೋಟಿ ರೂ. ಮೌಲ್ಯದ ನೆಕ್ಲೇಸ್ ಧರಿಸುವಷ್ಟು ಶ್ರೀಮಂತೆ. ಈ ಬಾಲಕಿ ಯಾರು ಎಂದು ನಿಮಗೆ ತಿಳಿಯಿತೇ…
ತಿಳಿಯದಿದ್ದರೆ ಉತ್ತರ ನಾವೇ ಹೇಳುತ್ತೇವೆ. ಈ ಫೋಟೋದಲ್ಲಿ ಕಾಣುತ್ತಿರುವ ಬಾಲಕಿ ಬೇರೆ ಯಾರೂ ಅಲ್ಲ ಪ್ರಿಯಾಂಕಾ ಚೋಪ್ರಾ. ಇಂದು ಪ್ರಿಯಾಂಕಾ ವರ್ಲ್ಡ್ ಐಕಾನ್ ಆಗಿದ್ದಾರೆ. ದೇಶ-ವಿದೇಶಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಹುಟ್ಟಿದ್ದು ಜಾರ್ಖಂಡ್ನ ಜಮ್ಶೆಡ್ಪುರ ಜಿಲ್ಲೆಯಲ್ಲಿ. ಕೇವಲ 13 ವರ್ಷದವಳಿದ್ದಾಗ ಬೋಸ್ಟನ್ಗೆ ಓದಲು ಹೋದರು. ಅಲ್ಲಿ ಮೂರು ವರ್ಷಗಳ ಕಾಲ ಓದಿದ ನಂತರ ಪ್ರಿಯಾಂಕಾ ತನ್ನ ದೇಶಕ್ಕೆ ಹಿಂದಿರುಗಿದಾಗ, ಕಪ್ಪು ಬಣ್ಣದ ಕಾರಣಕ್ಕೆ ಆಕೆಯನ್ನು ತುಂಬಾ ನಿಂದಿಸಲಾಯಿತು.
ಬೇರೆ ಯಾರೋ ಯಾಕೆ…ಪ್ರಿಯಾಂಕಾ ಚಿಕ್ಕಮ್ಮ ಕಪ್ಪು ಮೈಬಣ್ಣವನ್ನು ನೋಡಿ ಗೇಲಿ ಮಾಡುತ್ತಿದ್ದರಂತೆ. ಇದರಿಂದ ಪ್ರಿಯಾಂಕಾ ಆತ್ಮವಿಶ್ವಾಸವೂ ಕುಸಿದಿತ್ತು. ಈ ವೇಳೆ ಪ್ರಿಯಾಂಕಾಳ ತಂದೆ ಆಕೆಯನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು.
Read also: ಜೀವನ ಸಾಗಿಸಲು ಮನೆ, ತಾಯಿ ಒಡವೆಗಳನ್ನೂ ಮಾರಿದ ಇವರು ಇಂದು 1700 ಕೋಟಿ ರೂ.ಗಳ ಒಡೆಯ…ನೀವು ಇವರನ್ನು ಗುರುತಿಸುತ್ತೀರಾ?
ಪ್ರಿಯಾಂಕಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ತೆಗೆಸಿಕೊಂಡ ಪಾಸ್ಪೋರ್ಟ್ ಅಳತೆಯ ಛಾಯಾಚಿತ್ರಗಳನ್ನು ಅವರ ತಾಯಿ ಮಿಸ್ ಇಂಡಿಯಾ ಸ್ಪರ್ಧೆಗೆ ಕಳುಹಿಸಿದ್ದರು. ಆ ನಂತರ ಪ್ರಿಯಾಂಕಾ ಚೋಪ್ರಾ ಅವರ ಜೀವನವೇ ಬದಲಾಯಿತು ನೋಡಿ… ಪ್ರಿಯಾಂಕಾ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದರು ಮತ್ತು ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ಇದರ ನಂತರ ಅವರು ವಿಶ್ವ ಸುಂದರಿ ಪ್ರಶಸ್ತಿಯನ್ನು ಸಹ ಗೆದ್ದರು ಅಷ್ಟೇ ಏಕೆ ಸಿನಿಮಾಕ್ಕೂ ಎಂಟ್ರಿ ಕೊಟ್ಟರು.
ಇದಾದ ನಂತರ ಪ್ರಿಯಾಂಕಾ ಹಿಂತಿರುಗಿ ನೋಡಲೇ ಇಲ್ಲ. ಅವರು ಮೇರಿ ಕೋಮ್, ಬರ್ಫಿ, ಫ್ಯಾಷನ್ ಮತ್ತು ಏತ್ರಾಜ್ನಂತಹ ಅನೇಕ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿದರು. ನಟನಾ ಕೌಶಲವನ್ನು ಸಾಬೀತುಪಡಿಸಿದ ನಂತರ ಪ್ರಿಯಾಂಕಾ ಹಾಲಿವುಡ್ ನತ್ತ ಮುಖ ಮಾಡಿ ಅಲ್ಲಿಯೂ ಸಾಕಷ್ಟು ಹೆಸರು ಗಳಿಸಿದರು. ಇಂದು ಪ್ರಿಯಾಂಕಾ ಜಾಗತಿಕ ತಾರೆಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಸಾಕಷ್ಟು ಹೆಸರು, ಖ್ಯಾತಿ ಮತ್ತು ಸಂಪತ್ತನ್ನು ಗಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಇಟಲಿಯಲ್ಲಿ ನಡೆದ ಬಲ್ಗೇರಿಯ 140 ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ಎಲ್ಲರು ಬೆರಗಾಗುವಂತಹ ಉಡುಪನ್ನು ಧರಿಸಿದ್ದರು. ಇದಕ್ಕೆ ಅತ್ಯಂತ ದುಬಾರಿ ಅಂದರೆ 200 ಕ್ಯಾರೆಟ್ ಡೈಮಂಡ್ ನೆಕ್ಲೇಸ್ ಅನ್ನು ಮ್ಯಾಚ್ ಮಾಡಿದ್ದರು.
ಅಂದಹಾಗೆ ಈ ಬಲ್ಗರಿ ಸರ್ಪೆಂಟಿ ಎಟರ್ನಾ ನೆಕ್ಲೇಸ್ ಪೂರ್ಣಗೊಳಿಸಲು 2,800 ಗಂಟೆಗಳನ್ನು ತೆಗೆದುಕೊಳ್ಳಲಾಯಿತಂತೆ. ಇದನ್ನು ಬಲ್ಗೇರಿ ಜ್ಯುವೆಲರ್ಸ್ ಮಾಡಿದ ಅತ್ಯಂತ ಅಮೂಲ್ಯವಾದ ಕಲಾಕೃತಿ ಎಂದು ಪರಿಗಣಿಸಲಾಗಿದೆ. ಪೀಪಲ್ ಮತ್ತು ಗ್ಲಾಮರ್ ಪ್ರಕಾರ, ಪ್ರಿಯಾಂಕಾ ಧರಿಸಿರುವ ಈ ಸುಂದರವಾದ ಡೈಮಂಡ್ ನೆಕ್ಲೇಸ್ ಬೆಲೆ 43 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 358 ಕೋಟಿ ರೂಪಾಯಿ.