ನೀವು ಬಾಲಿವುಡ್ ಚಿತ್ರಗಳನ್ನು ನೋಡುತ್ತಿದ್ದರೆ 2001ರಲ್ಲಿ ತೆರೆಕಂಡ ‘ತುಮ್ ಬಿನ್’ ಸಿನಿಮಾ ಬಗ್ಗೆಯೂ ಗೊತ್ತಿರುತ್ತದೆ. ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮ ಕಥೆಯನ್ನು ತೋರಿಸಲಾಗಿದೆ. ಇದರಲ್ಲಿ ನಟರಾದ ಪ್ರಿಯಾಂಶು ಚಟರ್ಜಿ, ಸಂದಲಿ ಸಿನ್ಹಾ, ರಾಕೇಶ್ ಬಾಪಟ್ ಮತ್ತು ಹಿಮಾಂಶು ಮಲಿಕ್ ಮುಂತಾದ ತಾರೆಯರು ನಟಿಸಿದ್ದಾರೆ. ಈ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ಹಿಮಾಂಶು ಮಲಿಕ್ ತಮ್ಮ ಚಾಕಲೇಟ್ ಲುಕ್‌ನಿಂದ ಫೇಮಸ್ ಆಗಿದ್ದರು. ಅಷ್ಟೇ ಅಲ್ಲ, ಅವರ ವ್ಯಕ್ತಿತ್ವವನ್ನು ಕಂಡು ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಈಗ ಹಿಮಾಂಶು ಮಲಿಕ್ ಹೇಗಿದ್ದಾರೆ ಗೊತ್ತಾ?, ಅವರನ್ನು ನೋಡಿದರೆ ಇವರೇ ಹಿಮಾಂಶು ಮಲಿಕ್ ಎಂದು ನಂಬುವುದಿಲ್ಲ. ಏಕೆಂದರೆ ಈಗ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ.
ಗುರುತಿಸುವುದು ಕಷ್ಟ
ಇತ್ತೀಚೆಗೆ ಹಿಮಾಂಶು ಮಲಿಕ್ ಜಾನ್ವಿ ಕಪೂರ್ ಅವರ ‘ಉಲ್ಜ್’ ಚಿತ್ರದ ವಿಶೇಷ ಪ್ರದರ್ಶನದ ಸಮಯದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಎಲ್ಲರೂ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಹಿಮಾಂಶು ಮಲಿಕ್ ಅವರ ತೂಕ ಈಗ ಸಾಕಷ್ಟು ಹೆಚ್ಚಾಗಿದೆ. ಅವರ ಮುಖದ ಮೇಲೆ ವಯಸ್ಸಿನ ಗೆರೆಗಳ ಜೊತೆಗೆ ತಲೆಗೂದಲು ಕೂಡ ಮಾಯವಾಗಿದೆ. ಹಿಮಾಂಶು ಮಲಿಕ್ ಅವರ ಈ ಲುಕ್ ನೋಡಿ ಜನರು ಆಶ್ಚರ್ಯ ಪಡುತ್ತಿದ್ದರೆ, ಕೆಲವರು ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.
View this post on Instagram
ಹಿಮಾಂಶು ವೃತ್ತಿಜೀವನ
ನಟನಾಗಿ ಹಿಮಾಂಶು ‘ಕಾಮ ಸೂತ್ರ: ಎ ಟೇಲ್ ಆಫ್ ಲವ್’ ನಲ್ಲಿ ನಟಿಸಿದರು. ಮೀರಾ ನಾಯರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಹಿರಿಯ ನಟಿಯರಾದ ರೇಖಾ, ಇಂದಿರಾ ವರ್ಮಾ, ರಾಮನ್ ಟಿಕಾರಾಂ ಮತ್ತು ನವೀನ್ ಆಂಡ್ರ್ಯೂಸ್ ತಾರಗಣದಲ್ಲಿದ್ದರು. ಸಿನಿಮಾ 1996 ರಲ್ಲಿ ಬಿಡುಗಡೆಯಾಯಿತು. ಆದರೆ, ಇದರಲ್ಲಿ ಹಿಮಾಂಶು ಅವರ ಪಾತ್ರವು ತುಂಬಾ ಚಿಕ್ಕದಾಗಿದೆ. ಆದರೆ ಅವರ ವ್ಯಕ್ತಿತ್ವ ನೋಡಿ ಎಲ್ಲರಿಗೂ ಪ್ರೀತಿ ಮೂಡಿತು. ಇದರ ನಂತರ, ಹಿಮಾಂಶು ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಅನುಭವ್ ಸಿನ್ಹಾ ಅವರ ‘ತುಮ್ ಬಿನ್’ ಚಿತ್ರದೊಂದಿಗೆ ಅವರು ಪ್ರಸಿದ್ಧರಾದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. ಈ ಚಿತ್ರದ ಹಾಡುಗಳು ಇಂದಿಗೂ ಪ್ರಸಿದ್ಧವಾಗಿವೆ. ‘ತುಮ್ ಬಿನ್’ ಹಿಟ್ ಆದ ನಂತರ ಹಿಮಾಂಶು ಮಲಿಕ್ ರಾತ್ರೋರಾತ್ರಿ ಸ್ಟಾರ್ ಆದರು.
ಇದಲ್ಲದೇ ಹಿಮಾಂಶು ‘ಎಲ್‌ಒಸಿ ಕಾರ್ಗಿಲ್’, ‘ರಕ್ತ್’, ‘ರೋಗ್’, ‘ಯಮ್ಲಾ ಪಗ್ಲಾ ದೀವಾನಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಪ್ರೇಕ್ಷಕರ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. 2000 ರಲ್ಲಿ ‘ಜಂಗಲ್’ ಚಿತ್ರದಲ್ಲಿ ಕೆಲಸ ಮಾಡಿದರು. ನಟಿ ಮಲ್ಲಿಕಾ ಶೆರಾವತ್ ಜೊತೆ ‘ಖ್ವಾಹಿಶ್’ ನಲ್ಲಿ ಹಿಮಾಂಶು 17 ಬಾರಿ ಚುಂಬಿಸಿ, ಈ ದೃಶ್ಯಗಳಿಗಾಗಿ ಸಾಕಷ್ಟು ಚಪ್ಪಾಳೆಗಳನ್ನು ಸಹ ಪಡೆದರು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಯಿತು. ಇದಾದ ನಂತರ ಹಿಮಾಂಶು ಅವರ ಸ್ಟಾರ್‌ಡಮ್ ಕ್ರಮೇಣ ಕಡಿಮೆಯಾಯಿತು. ಅವರು ಇದ್ದಕ್ಕಿದ್ದಂತೆ ಇಂಡಸ್ಟ್ರಿಯಿಂದ ದೂರಾದರು.