ಬೇಸಿಗೆಯಲ್ಲಿ ಜನರು ಹೈಡ್ರೇಟ್ ಆಗಿರಲು ತಾಜಾ ಹಣ್ಣುಗಳು ಮತ್ತು ಅವುಗಳ ಜ್ಯೂಸ್ ಸೇವಿಸುತ್ತಾರೆ. ಈ ಪಟ್ಟಿಯಲ್ಲಿ ಕಬ್ಬಿನ ಜ್ಯೂಸ್ ಅಗ್ರಸ್ಥಾನದಲ್ಲಿದೆ. ಇನ್ನು ಕಬ್ಬಿನ ಜ್ಯೂಸ್ ಅನ್ನು ಬೇಸಿಗೆಯಲ್ಲಿ ಪ್ರತಿ ಬೀದಿಯಲ್ಲಿಯೂ ಮಾರಾಟ ಮಾಡಲಾಗುತ್ತದೆ. ಹಾಗೆಯೇ ಈ ಜ್ಯೂಸ್ ನ ಬೆಲೆಯೂ ಕಡಿಮೆ. ಅಷ್ಟೇ ಅಲ್ಲ, ಕಬ್ಬಿನ ಜ್ಯೂಸ್ ಹೈಡ್ರೇಟ್ ಆಗಿರಲು ಸಹಾಯ ಮಾಡುವುದಲ್ಲದೆ, ಇದು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಅಂದಹಾಗೆ ಕಬ್ಬಿನ ಜ್ಯೂಸ್ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೆಚ್ಚಿರುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ಕಬ್ಬಿನ ಜ್ಯೂಸ್ ಕುಡಿಯುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ…
ತಜ್ಞರು ಹೇಳುವುದೇನು?
ರಾಜನಗರದ ಖ್ಯಾತ ಆಯುರ್ವೇದ ತಜ್ಞ ಡಾ. ಉಮೇಶ್ ನಗರ್, ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೂತ್ರಪಿಂಡ ಕಾಯಿಲೆ ಇರುವ ಸಂದರ್ಭದಲ್ಲಿ ಈ ಜ್ಯೂಸ್ ಸೇವಿಸಿದರೆ ಒಳಿತು. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಪಿತ್ತರಸವು ಶಾಂತವಾಗುತ್ತದೆ, ಇದು ದೇಹದೊಳಗಿನ ಶಾಖವನ್ನು ತಂಪಾಗಿಸುತ್ತದೆ ಮತ್ತು ಬೇಸಿಗೆಯಲ್ಲಿಯೂ ಸಹ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಆದರೆ ಇದು ಬಹಳ ಸಿಹಿಯಾದ ಜ್ಯೂಸ್. ಅಂದರೆ ಸಕ್ಕರೆಯನ್ನು ಒಳಗೊಂಡಿರುವ ಜ್ಯೂಸ್. ಹಾಗಾಗಿ ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.
Also Read: ಮೊಸರು ಪ್ರಿಯರೇ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ!
ಡಯಾಬಿಟಿಸ್ ರೋಗಿಗಳು ಈ ಜ್ಯೂಸ್ ಕುಡಿಯಬಹುದೇ?
ಮಧುಮೇಹ ಬಂದಾಗ ಸಕ್ಕರೆ ಮಟ್ಟವು ಹೆಚ್ಚುತ್ತಲೇ ಇರುತ್ತದೆ ಮತ್ತು ಕಡಿಮೆಯಾಗುತ್ತಲೇ ಇರುತ್ತದೆ. ಆದ್ದರಿಂದ ಮಧುಮೇಹಿಗಳು ಕಬ್ಬಿನ ಜ್ಯೂಸ್ ಎಚ್ಚರಿಕೆಯಿಂದ ಕುಡಿಯಬೇಕು. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಕಬ್ಬಿನ ಜ್ಯೂಸ್ ಕುಡಿಯಲು ಬಯಸಿದರೆ ಮಾತ್ರ ಮೊದಲು ಆ ದಿನದ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು ಎಂದು ವೈದ್ಯರು ಹೇಳುತ್ತಾರೆ. ನೀವು ಕಬ್ಬಿನ ಜ್ಯೂಸ್ ಕುಡಿಯುತ್ತಿದ್ದರೆ, ಆ ದಿನ ಬೇರೆ ಯಾವುದೇ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ತಾಜಾವಾಗಿದ್ದಾಗ ಮಾತ್ರ ಕುಡಿಯಬೇಕು, ಅಂದರೆ 10 ರಿಂದ 15 ನಿಮಿಷಗಳಲ್ಲಿ ಸೇವಿಸಬೇಕು. ಕೆಲವು ಅಂಗಡಿಯವರು ಕಬ್ಬಿನ ಜ್ಯೂಸ್ಗೆ ಸಕ್ಕರೆ ಸೇರಿಸುತ್ತಾರೆ. ಆದ್ದರಿಂದ ಗುಣಮಟ್ಟದ ಸೆಂಟರ್ನಲ್ಲಿ ಕುಡಿಯಿರಿ. ದಿನಕ್ಕೆ 1 ಗ್ಲಾಸ್ ಗಿಂತ ಹೆಚ್ಚು ಕಬ್ಬಿನ ಜ್ಯೂಸ್ ಕುಡಿಯಬೇಡಿ.