Jio Job Vacancy 2024: ಪ್ರಸಿದ್ಧ ಟೆಲಿಕಾಂ ಕಂಪನಿ ಜಿಯೋ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲಾ ಹುದ್ದೆಗಳಿಗೂ ವಿಭಿನ್ನ ರೀತಿಯ ಅನುಭವವನ್ನು ಕೋರಲಾಗಿದೆ. ಫ್ರೆಶರ್‌ಗಳು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ ಬೆಂಗಳೂರು ಮತ್ತು ಮುಂಬೈ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಫ್ರೆಶರ್‌ಗಳಿಗೆ ಇದು ಸುವರ್ಣಾವಕಾಶವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಜಿಯೋ ಶೀಘ್ರದಲ್ಲೇ AI ಪ್ರಪಂಚಕ್ಕೆ ಕಾಲಿಡಲಿದೆ. ಇದಕ್ಕಾಗಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ನೀವು Jio Career ಅಧಿಕೃತ ವೆಬ್‌ಸೈಟ್ ಪುಟಕ್ಕೆ ಭೇಟಿ ನೀಡಬೇಕು. ಇಲ್ಲಿ Jio Opportunities ಮೇಲೆ ಕ್ಲಿಕ್ ಮಾಡಿ. ಆ ನಂತರ Apply ಬಟನ್ ಒತ್ತಿರಿ ಮತ್ತು ವಿನಂತಿಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಕೊನೆಗೆ Submit ಕ್ಲಿಕ್ ಮಾಡಿ.
ಎಲ್ಲೆಲ್ಲಿ, ಯಾವ ಕೆಲಸ?
ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ (Software Development Engineer)
ಈ ಹುದ್ದೆ ಖಾಲಿಯಿರುವುದು ಬೆಂಗಳೂರಿನಲ್ಲಿ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಟೆಕ್ ಅಥವಾ ಬಿಇ ಓದಿರಬೇಕು. 2-4 ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಮಾಸ್ಟರ್ಸ್ ಮಾಡಿರುವುದು ಅಗತ್ಯ.
ಸೀನಿಯರ್ ಡಿವೈಸ್ ಇಂಜಿನಿಯರ್ (Senior Device Engineer)
ಈ ಹುದ್ದೆ ಕೂಡ ಬೆಂಗಳೂರಿನಲ್ಲಿ ಖಾಲಿಯಿದೆ. ಬಿಇ ಅಥವಾ ಬಿಟೆಕ್ ಜೊತೆಗೆ ಎಂಇ, ಎಂಟೆಕ್ ಮತ್ತು ಎಂಎಸ್ ಪದವಿಯನ್ನು ಪಡೆದಿರುವುದು ಕಡ್ಡಾಯವಾಗಿದೆ. ಫ್ರೆಶರ್ಸ್ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 0-2 ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಾಫ್ಟ್‌ವೇರ್ ಡೆವಲಪರ್ (Software Developer)
ಈ ಹುದ್ದೆ ಇರುವುದು ಬೆಂಗಳೂರಿನಲ್ಲಿಯೇ. ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಇ ಅಥವಾ ಬಿಟೆಕ್ ಪದವಿಯೊಂದಿಗೆ ಎಂಸಿಎ ಮಾಡಿರುವುದು ಕಡ್ಡಾಯವಾಗಿದೆ. ಇದಲ್ಲದೆ, ಅರ್ಜಿದಾರರು 4-12 ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಾಫ್ಟ್‌ವೇರ್ ಇಂಜಿನಿಯರ್ (Software engineer)
ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆ ಮುಂಬೈನಲ್ಲಿ ಖಾಲಿಯಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು BE ಅಥವಾ B.Tech ಪದವಿ ಓದಿರುವುದು ಕಡ್ಡಾಯವಾಗಿದೆ. ಅಲ್ಲದೆ ಎಂಸಿಎ ಪ್ಲಸ್ ಪಾಯಿಂಟ್ ಆಗಬಹುದು. ಅರ್ಜಿದಾರರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ 4-8 ವರ್ಷಗಳ ಅನುಭವವನ್ನು ಹೊಂದಿರಬೇಕು.
DevOps ಇಂಜಿನಿಯರ್ (Devops Engineer )
ಮುಂಬೈನಲ್ಲಿ ಈ ಹುದ್ದೆ ಖಾಲಿಯಿದ್ದು, ಇದಕ್ಕಾಗಿ, ಅರ್ಜಿದಾರರು BE ಅಥವಾ B.Tech ನಲ್ಲಿ ಪದವಿ ಪಡೆದಿರಬೇಕು. ಅಲ್ಲದೆ, M.Tech, ME ಅಥವಾ MBA ಕಡ್ಡಾಯವಾಗಿದೆ. ಅರ್ಜಿದಾರರು 5-8 ವರ್ಷಗಳ ಅನುಭವ ಮತ್ತು DevOps ಬಗ್ಗೆ ಜ್ಞಾನ ಹೊಂದಿರಬೇಕು.