ಬಾಲಿವುಡ್ನಲ್ಲಿ ಸ್ಟಾರ್ ನಾಯಕಿಯರಿಗೇನೂ ಕೊರತೆಯಿಲ್ಲ. ಸೌಂದರ್ಯದ ವಿಷಯದಲ್ಲಿಯೂ ಒಬ್ಬರಿಗಿಂತ ಒಬ್ಬರು ಚೆನ್ನ. ನಟನೆಯಲ್ಲಿಯೂ ಸಹ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಆದರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ತಬ್ಬಿಬ್ಬಾಗುತ್ತಾರೆ. ಈಗ್ಯಾಕೆ ಈ ವಿಷಯ ಅಂತೀರಾ, ಸದ್ಯ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ತಮ್ಮ ನಟನೆ ಮಾತ್ರವಲ್ಲದೆ, ಸೌಂದರ್ಯದಿಂದ ಜನಮನ ಗೆದ್ದಿರುವ ಆಲಿಯಾ ಭಟ್ (Alia Bhatt) ಮತ್ತು ಕರೀನಾ ಕಪೂರ್ (Kareena Kapoor) ಅವರಿಗೆ ಇಂಗ್ಲಿಷ್ ವರ್ಣಮಾಲೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ ಅವರು ಸರಿಯಾಗಿ ಉತ್ತರಿಸಿದ್ರಾ?, ಮುಂದೆ ಓದಿ…
ಆಲಿಯಾ ಈ ಹಿಂದೆ ಕೆಲವು ಪ್ರಶ್ನೆಗಳಿಗೆ ವಿಚಿತ್ರ ಉತ್ತರ ನೀಡಿ ಸಿಕ್ಕಿಹಾಕಿಕೊಂಡ ಹಲವು ಸಂದರ್ಭಗಳಿವೆ. ಆಕೆ ‘ಕಾಫಿ ವಿತ್ ಕರಣ್’ (Koffee With Karan) ಸಂಚಿಕೆಯಲ್ಲಿ ಭಾರತದ ರಾಷ್ಟ್ರಪತಿಯ ಹೆಸರನ್ನು ಹೇಳಲು ಸಾಧ್ಯವಾಗಲಿಲ್ಲ. ತಪ್ಪು ಉತ್ತರ ನೀಡಿ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿಯೂ ಆಲಿಯಾ ತಪ್ಪಾಗಿ ಉತ್ತರಿಸಿದ್ದಾರೆ. ಆದರೆ ಈಗ ಆಲಿಯಾ ಮಾತ್ರವಲ್ಲದೆ, ಕರೀನಾ ಕಪೂರ್ ಅವರ ವಿಡಿಯೋ ಕಾಣಿಸಿಕೊಂಡಿದೆ. ಇದರಲ್ಲಿ ಇಬ್ಬರೂ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರಿಂದ ಟ್ರೋಲ್ ಆಗಿದ್ದಾರೆ.
ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ನಟಿಯರು
ಕೆಲವು ಸಮಯದ ಹಿಂದೆ, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಕೋಮಲ್ ನಹತಾಗೆ ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ಕೋಮಲ್ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ಇಬ್ಬರೂ ನಟಿಯರು ಉತ್ತರಿಸಲು ವಿಫಲರಾದರು. ಹಾಗಾದರೆ ಈ ಪ್ರಶ್ನೆ ಏನು ಮತ್ತು ಅವರು ನೀಡಿದ ಉತ್ತರವೇನು ನೋಡೋಣ.
ವಿಡಿಯೋದಲ್ಲಿ ಕರೀನಾ ಕಪೂರ್ ಅವರಿಗೆ ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ ಎಂದು ಕೇಳಿರುವುದನ್ನು ನೀವು ನೋಡಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಕರೀನಾ ಒಂಬತ್ತು ಎಂದಿದ್ದಾರೆ. ಆದರೆ ಈ ಉತ್ತರವು ತಪ್ಪು. ಇಂಗ್ಲಿಷ್ ಭಾಷೆಯಲ್ಲಿ 21 ವ್ಯಂಜನಗಳಿವೆ. ಆದರೆ ಆಲಿಯಾ ಭಟ್ ಅವರಿಗೆ ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಳಲಾಯಿತು? ಇದಕ್ಕೆ ಉತ್ತರವಾಗಿ ಆಲಿಯಾ ಇಪ್ಪತ್ತರ ಆಸುಪಾಸಿನಲ್ಲಿ…! ಎಂದರು. ಅವರ ಉತ್ತರವೂ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ ಇಂಗ್ಲಿಷ್ನಲ್ಲಿ ಒಟ್ಟು 26 ಅಕ್ಷರಗಳಿವೆ. ಅವುಗಳಲ್ಲಿ 21 ವ್ಯಂಜನಗಳು ಮತ್ತು 5 ಸ್ವರಗಳು.
ನೆಟ್ಟಿಗರ ಪ್ರತಿಕ್ರಿಯೆ
ಈಗ ಈ ವಿಡಿಯೋವನ್ನು ನೋಡಿದ ನಂತರ, ಜನರು ಇಬ್ಬರ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ‘ಅವರ ಸ್ಟೇಟಸ್ ಏನು, ಸೀರಿಯಸ್ ಆಗಿದ್ದಾರಾ, ಎಂದಿಗೂ ಶಾಲೆಗೆ ಹೋಗಲಿಲ್ಲವೇ?ʼ ಹೀಗೆ ಹತ್ತು ಹಲವು ಪ್ರಶ್ನೆಗಳಿಂದ ಟ್ರೋಲ್ಗಳಿಂದ ತುಂಬಿ ಹೋಗಿದೆ ಕಾಮೆಂಟ್ ವಿಭಾಗ.
ಮುಂದಿನ ಪ್ರಾಜೆಕ್ಟ್
ಕರೀನಾ ಕಪೂರ್ ಅವರು ಶೀಘ್ರದಲ್ಲೇ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ (The Buckingham Murders) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರ ಪಟ್ಟಿಯಲ್ಲಿ ‘ಸಿಂಗಮ್ ಎಗೇನ್’ (Singham Again) ಕೂಡ ಸೇರಿದೆ. ಎರಡೂ ಚಿತ್ರಗಳ ಅವರ ಲುಕ್ ರಿವೀಲ್ ಆಗಿದೆ. ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಮರ್ಡರ್ ಮಿಸ್ಟರಿ ಆಗಿದ್ದರೆ, ‘ಸಿಂಗಮ್ ಎಗೇನ್’ ನಲ್ಲಿ ಅವರ ಆಕ್ಷನ್ ಅವತಾರವನ್ನು ನೋಡಬಹುದು. ಇದಕ್ಕೂ ಮುನ್ನ ಕರೀನಾ ಕಪೂರ್ ‘ಕ್ರೂ’ (Crew) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕರೀನಾ ಕಪೂರ್ ಫ್ಲೈಟ್ ಅಟೆಂಡೆಂಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ ಅವರ ‘ಜಾನೆ ಜಾನ್’ (Jaane Jaan) ಪಾತ್ರವೂ ವೀಕ್ಷಕರಿಗೆ ತುಂಬಾ ಇಷ್ಟವಾಯಿತು.
ಆಲಿಯಾ ಭಟ್ ಕೂಡ ಒಂದರ ಹಿಂದೆ ಒಂದರಂತೆ ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಲಿಯಾ ಕೈಯ್ಯಲ್ಲಿ ಅನೇಕ ಚಿತ್ರಗಳಿವೆ. ಆಲಿಯಾ ಭಟ್ ಈ ವರ್ಷ ‘ಜಿಗ್ರಾ’ (Jigra) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೇದಾಂಗ್ ರೈನಾ ಈ ಚಿತ್ರದಲ್ಲಿ ನಟಿಯೊಂದಿಗೆ ಇದ್ದಾರೆ. ಇದಲ್ಲದೆ, ಅವರ ಖಾತೆಯಲ್ಲಿ ‘ಲವ್ ಅಂಡ್ ವಾರ್’ (Love & War) ಇದೆ. ಇದರಲ್ಲಿ ಮತ್ತೊಮ್ಮೆ ಅವರು ರಣಬೀರ್ ಕಪೂರ್ (Ranbir Kapoor) ಅವರೊಂದಿಗೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ (Vicky Kaushal) ಕೂಡ ಕಾಣಿಸಿಕೊಳ್ಳಲಿದ್ದಾರೆ.