Lemon And Mirchi: ದುಷ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಭಾರತದಲ್ಲಿ ಇಂದಿಗೂ ಹಲವಾರು ಸಂಪ್ರದಾಯಗಳು ಅಥವಾ ಆಚರಣೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವು ಮಾತ್ರ ವೈಜ್ಞಾನಿಕ ತಳಹದಿ ಮೇಲೆ ನಿಂತಿವೆ ಎಂದರೆ ತಪ್ಪಾಗಲಾರದು. ಅದೇನೇ ಇರಲಿ ಜನರು ಒಟ್ಟಾರೆ ವಿವಿಧ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆ, ಮನದ ನೆಮ್ಮದಿ ಕಾಪಾಡಿಕೊಳ್ಳುತ್ತಾರೆ. ಕೆಲವರು ಇಂತಹ ವಿಚಾರಗಳಿಗೆ ತಂತ್ರಿಗಳ ಸಹಾಯವನ್ನು ತೆಗೆದುಕೊಳ್ಳುವುದು ಉಂಟು.
ಮತ್ತೆ ಕೆಲವರು ಅವರ ಕುಟುಂಬದ ಸದಸ್ಯರು ದುಷ್ಟ ಕಣ್ಣಿನಿಂದ ಪ್ರಭಾವಿತರಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅದೇನಪ್ಪಾ ಅಂದ್ರೆ… ಮನೆಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ನೇತು ಹಾಕುವುದು. ನೀವು ಈ ಟ್ರಿಕ್ಸ್ ಅನ್ನು ಖಂಡಿತ ಅಲ್ಲಲ್ಲಿ ನೋಡಿರುತ್ತೀರಿ. ಹಿರಿಯರ ಪ್ರಕಾರ, ಮನೆಯ ಮುಖ್ಯ ದ್ವಾರದ ಮೇಲೆ ಹೀಗೆ ಮಾಡಿ ಇಡುವುದರಿಂದ ಪಾಸಿಟಿವ್ ಎನರ್ಜಿ ಮಾತ್ರ ಮನೆಗೆ ನುಗ್ಗಿ ನೆಗೆಟಿವ್ ಎನರ್ಜಿ ಮನೆಯಿಂದ ದೂರ ಉಳಿಯುತ್ತದೆ.
ಸಾಮಾನ್ಯವಾಗಿ ಹೊಸ ಅಥವಾ ಹಳೆಯ ಮನೆ, ಅಂಗಡಿ, ಕಾರು ಅಥವಾ ಕೆಲವೊಮ್ಮೆ ಬೈಸಿಕಲ್ ಆಗಿರಲಿ, ಜನರು ನಿಂಬೆ ಮತ್ತು ಮೆಣಸಿನಕಾಯಿಯ ಈ ಪರಿಹಾರವನ್ನು ಅಳವಡಿಸಿಕೊಳ್ಳುತ್ತಾರೆ. ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪರಿಹಾರವನ್ನು ಅವರು ನಂಬುತ್ತಾರೆ. ಇದು ವಾಸ್ತು ದೋಷಗಳಿಗೆ ಪರಿಹಾರವೆಂದು ಪರಿಗಣಿಸಲಾಗಿದೆ.
Read Also: ಸೆಪ್ಟೆಂಬರ್ನಲ್ಲಿ ಗ್ರಹಗಳ ಬದಲಾವಣೆಯಿಂದ ಈ 5 ರಾಶಿಯವರು ಬಯಸಿದ್ದನ್ನು ಪಡೆಯುತ್ತೀರಿ
ಇದು ಮೂಢನಂಬಿಕೆಯಲ್ಲ
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿಂಬೆ ರುಚಿಯಲ್ಲಿ ಹುಳಿ ಮತ್ತು ಮೆಣಸಿನಕಾಯಿ ರುಚಿಯಲ್ಲಿ ಖಾರ ಎಂದು ತಿಳಿದಿದೆ. ಈ ಎರಡರ ಮಿಶ್ರಣವು ಸಾಕಷ್ಟು ಪ್ರಬಲವಾಗಿದೆ. ಅಂದರೆ ದುಷ್ಟ ಕಣ್ಣುಗಳುಳ್ಳವರು ತಮ್ಮ ಮೇಲೆ ಕಣ್ಣು ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಅಂಗಡಿಯಲ್ಲಿ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುವುದು ವೈಜ್ಞಾನಿಕ ಸತ್ಯವೆಂದು ಪರಿಗಣಿಸಲಾಗಿದೆ. ಹೌದು, ವಿಜ್ಞಾನಿಗಳ ಪ್ರಕಾರ, ಇದನ್ನು ಮನೆಯ ಹೊರಗೆ ನೇತು ಹಾಕುವುದರಿಂದ ಹೊರಗಿನಿಂದ ಬರುವ ಎಲ್ಲಾ ರೋಗಾಣುಗಳನ್ನು ತೆಗೆದುಹಾಕುತ್ತದೆ ಎಂದು ಕೆಲವರು ನಂಬುತ್ತಾರೆ. ಅದಕ್ಕಾಗಿಯೇ ಜನರು ಅದನ್ನು ತಮ್ಮ ವಾಹನಗಳಲ್ಲಿ, ಅಂಗಡಿಗಳಲ್ಲಿ ಅಥವಾ ಮನೆಯಲ್ಲಿ ಕಟ್ಟುತ್ತಾರೆ.
ವಾಸ್ತು ಪ್ರಕಾರ…
ಇನ್ನು ವಾಸ್ತು ಪ್ರಕಾರ, ನಿಂಬೆ ಮತ್ತು ಮೆಣಸಿನಕಾಯಿಯನ್ನು ಮನೆಯಲ್ಲಿ ನೇತು ಹಾಕುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಆದ್ದರಿಂದ, ನಿಂಬೆ ಮತ್ತು ಮೆಣಸಿನಕಾಯಿ ಪರಿಹಾರವನ್ನು ಯಾವಾಗಲೂ ಮನೆಯಲ್ಲಿ ಅಳವಡಿಸಿಕೊಳ್ಳಬೇಕು. ನಿಂಬೆ ಮತ್ತು ಮೆಣಸಿನಕಾಯಿಯ ಪರಿಹಾರವು ಪ್ರಗತಿಯ ನೀಲನಕ್ಷೆಯಾಗಿಯೂ ಕಂಡುಬರುತ್ತದೆ.