Health: ನೀವು ಶಾಪಿಂಗ್ ಮಾಲ್, ವಿಮಾನ ನಿಲ್ದಾಣ ಅಥವಾ ಯಾವುದೇ ಹೋಟೆಲ್ಗೆ ಹೋದಾಗ ಅಲ್ಲಿ ಲಿಫ್ಟ್ ಹತ್ತಿದ ತಕ್ಷಣ ನರ್ವಸ್ ಆಗುತ್ತೀರಾ…?. ಕ್ಲಾಸ್ಟ್ರೋಫೋಬಿಯಾ ಅಥವಾ ಕ್ಲಿಥ್ರೋಫೋಬಿಯಾ ಎಂಬ ಫೋಬಿಯಾ ಹೊಂದಿರುವ ಜನರಿಗೆ ಹೀಗಾಗುವುದು ಸಹಜ. ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಈ ಭಯವನ್ನು ಎದುರಿಸಿದ್ದಾರೆ. ಹಾಗಾದರೆ ಕ್ಲಾಸ್ಟ್ರೋಫೋಬಿಯಾ ಅಥವಾ ಕ್ಲಿಥ್ರೋಫೋಬಿಯಾ ಎಂದರೇನು?, ಯಾವಾಗ, ಯಾರಿಗೆ, ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ…
ಸೋನಂ ಕಪೂರ್ನಂತಹ ಅನೇಕ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಎಲಿವೇಟರ್ ಫೋಬಿಯಾವನ್ನು ಎದುರಿಸಿರುವುದನ್ನು ನೀವೆಲ್ಲ ಕೇಳಿರಬೇಕು ಅಥವಾ ಓದಿರಬೇಕು. ಇದನ್ನು ಕ್ಲಾಸ್ಟ್ರೋಫೋಬಿಯಾದ ಒಂದು ರೂಪ ಎಂದೂ ಕರೆಯಬಹುದು. ಕ್ಲೋಸ್ ಅಥವಾ ಮುಚ್ಚಿದ ಜಾಗಕ್ಕೆ ಹೋಗುವಾಗ ಕೆಲವರು ನರ್ವಸ್ ಅಗುತ್ತಾರೆ, ಒಂದು ರೀತಿ ಕಸಿವಿಸಿ ಅನುಭವಿಸುತ್ತಾರೆ. ವಿಶೇಷವಾಗಿ ಎಲಿವೇಟರ್ ಅಥವಾ ಲಿಫ್ಟ್ ಅನ್ನು ಬಳಸುವಾಗಲಂತೂ ಅವರ ಹೃದಯ ಬಡಿತ ಹೆಚ್ಚಾದಂತೆ ಫೀಲ್ ಆಗುತ್ತದೆ. ಬೆವರುವುದು ಮತ್ತು ಅಂಟಿಕೊಂಡಂತೆ ಭಾವನೆ ಉಂಟಾಗುತ್ತದೆ.
ಏನಿದು ಕ್ಲಿಥ್ರೋಫೋಬಿಯಾ ಮತ್ತು ಕ್ಲಾಸ್ಟ್ರೋಫೋಬಿಯಾ?
ಬಾಲಿವುಡ್ ನಟಿ ಸೋನಂ ಕಪೂರ್ ಎಲಿವೇಟರ್ಗಳಿಗೆ ಹೆದರುತ್ತಾರೆ. ಇದು ಅವರ ಕ್ಲಿಥ್ರೋಫೋಬಿಯಾ ಮತ್ತು ಕ್ಲಾಸ್ಟ್ರೋಫೋಬಿಯಾದಿಂದ ಉಂಟಾಗುತ್ತದೆ. ಕ್ಲಿಥ್ರೋಫೋಬಿಯಾ ಎನ್ನುವುದು ಮಾನಸಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆಯಿರುವ ವ್ಯಕ್ತಿಯು ಲಿಫ್ಟ್ ಅಥವಾ ಎಲಿವೇಟರ್ ಇರುವೆಡೆ ಹೋದಾಗ ತಾನು ಸಿಕ್ಕಿಬಿದ್ದಿದ್ದೇನೆ ಅಥವಾ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ತೀವ್ರ ಭಯವನ್ನು ಅನುಭವಿಸುತ್ತಾನೆ. ಇದು ಅನೇಕ ರೋಗಲಕ್ಷಣಗಳನ್ನು ಹೊಂದಿದೆ. ಉದಾಹರಣೆಗೆ ಹೆದರಿಕೆ, ಕ್ಷಿಪ್ರ ಹೃದಯ ಬಡಿತ, ಬೆವರುವುದು, ವಾಕರಿಕೆ ಭಾವನೆ, ಉಸಿರಾಟದ ತೊಂದರೆ ಮತ್ತು ಸೀಮಿತ ಜಾಗದಿಂದ ಹೊರಬರಲು ಬಲವಾದ ಬಯಕೆ. ಈ ಫೋಬಿಯಾ ಬಾಲ್ಯದಲ್ಲಾದ ಕೆಟ್ಟ ಅನುಭವ, ಅಪಘಾತ, ಇತರ ಮಾನಸಿಕ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಲೂ ಉಂಟಾಗಬಹುದು.
ಇನ್ನು ಕ್ಲಾಸ್ಟ್ರೋಫೋಬಿಯಾದಲ್ಲಿ, ಮುಚ್ಚಿದ ಮತ್ತು ಬಿಗಿಯಾದ ಸ್ಥಳಗಳಿಗೆ ಹೋದಾಗ ಹೆದರಿಕೆ ಮತ್ತು ಚಡಪಡಿಕೆ ಇರುತ್ತದೆ. ಸೋನಂ ಅವರಂತಹ ಅನೇಕ ಜನರು ಈ ಭಯವನ್ನು ಎದುರಿಸುತ್ತಾರೆ ಮತ್ತು ಅವರಿಗೆ ಲಿಫ್ಟ್ ಅಥವಾ ಇತರ ಬಿಗಿಯಾದ ಜಾಗದಲ್ಲಿ ಹೋಗುವುದು ಸವಾಲಾಗಿರುತ್ತದೆ. ಈ ಮೊದಲೇ ಹೇಳಿದ ಹಾಗೆ ಇದೊಂದು ರೀತಿಯ ಫೋಬಿಯಾ, ಇದು ವ್ಯಕ್ತಿಯ ದೈನಂದಿನ ಜೀವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲೂಬಹುದು.
ಔಷಧಿ ಇಲ್ಲವೇ?
ಚಿಕಿತ್ಸೆಗಾಗಿ CBT, ಎಕ್ಸ್ಪೋಸರ್ ಥೆರಪಿ ಮತ್ತು ಕೆಲವು ಔಷಧಿಗಳನ್ನು ವೈದ್ಯರು ಸೂಚಿಸಬಹುದು. ಇದರೊಂದಿಗೆ ಯೋಗ, ವ್ಯಾಯಾಮ, ಧ್ಯಾನ, ಸ್ವಸಹಾಯ ಗುಂಪುಗಳ (self-help groups) ಸಹಾಯವೂ ಇದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.