Free Places of India: ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ, ಯಾವುದಾದರೊಂದು ಕುಂಟು ನೆಪ ಸಿಕ್ಕರೂ ಪ್ರಯಾಣಿಸಲು ರೆಡಿಯಾಗುತ್ತೇವೆ. ತಿರುಗಾಡುವುದು ತಪ್ಪಲ್ಲ. ಮೈಂಡ್ ರಿಫ್ರೆಶ್ ಆಗಲು ಪ್ರವಾಸ ಸಹಕಾರಿ. ಆದರೆ ಬಹುತೇಕರು ಟೂರ್ ಪ್ಲಾನ್ ಮಾಡಿಕೊಂಡರೂ, ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ಕಾರಣ ಆ ಸ್ಥಳದಲ್ಲಿ ಉಳಿದುಕೊಳ್ಳಲು ಹೋಟೆಲ್, ಆಹಾರದ ವೆಚ್ಚ ಎಲ್ಲವನ್ನೂ ಲೆಕ್ಕ ಹಾಕಿದರೆ ಬಹಳ ದುಬಾರಿ. ಒಂದು ವೇಳೆ ನೀವು ಈ ರೀತಿ ಪ್ರವಾಸ ಹೋಗಬೇಕೆಂದು ಯೋಚಿಸಿ, ಕೊನೆಯಲ್ಲಿ ನಿಮ್ಮ ಯೋಜನೆಯನ್ನು ರದ್ದುಗೊಳಿಸಿದರೆ ನಾವಿಲ್ಲಿ ಉತ್ತಮ ಆಪ್ಷನ್ ಕೊಟ್ಟಿದ್ದೇವೆ.
ನಾವಂದುಕೊಂಡ ಹಾಗೆ ಫ್ರೆಂಡ್ಲಿ ಬಜೆಟ್ ಪ್ರವಾಸ ಮಾಡಿ ತಿನ್ನುವುದು, ಕುಡಿಯುವುದು ಸಾಧ್ಯವಾದರೆ ಅದು ಬೇರೆ ವಿಷಯ. ನೀವು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ ಭಾರತದಲ್ಲಿ ಕೆಲವು ಸ್ಥಳಗಳಿವೆ. ನಿಮಗಿಲ್ಲಿ ವಸತಿ ಸಂಪೂರ್ಣವಾಗಿ ಉಚಿತವಾಗಿದೆ. ಇದರ ಹೊರತಾಗಿ ಇಲ್ಲಿ ಆಹಾರ ಮತ್ತು ಪಾನೀಯಗಳಿಗೂ ಯಾವುದೇ ವೆಚ್ಚ ಇರುವುದಿಲ್ಲ. ಹಾಗಾದರೆ ಬನ್ನಿ ಆ ಸ್ಥಳಗಳು ಯಾವುವು ತಿಳಿಯೋಣ…
ಮಣಿಕರಣ್ ಸಾಹಿಬ್ (Manikaran Sahib)
ಹಿಮಾಚಲ ಪ್ರದೇಶ ಪ್ರತಿಯೊಬ್ಬ ಭಾರತೀಯನ ನೆಚ್ಚಿನ ಪ್ರವಾಸಿ ತಾಣ. ಇಲ್ಲಿಗೆ ಸ್ಥಳೀಯರ ಜತೆಗೆ ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸ್ಥಳವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅಂದಹಾಗೆ ನೀವು ಹಿಮಾಚಲಕ್ಕೆ ತೆರಳುವುದಾದರೆ ಗುರುದ್ವಾರ ಮಣಿಕರಣ್ ಸಾಹಿಬ್ಗೆ ಭೇಟಿ ನೀಡಬೇಕು. ಇಲ್ಲಿ ನೀವು ವಸತಿ ಮತ್ತು ಆಹಾರಕ್ಕಾಗಿ ಉತ್ತಮ ಸೌಲಭ್ಯಗಳನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ನೀವು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
ಭಾರತ್ ಹೆರಿಟೇಜ್ ಸರ್ವೀಸಸ್ (Bharat Heritage Services)
ಭಾರತ್ ಹೆರಿಟೇಜ್ ಸರ್ವಿಸಸ್ ಅನ್ನು ಋಷಿಕೇಶದ ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಶಾಂತಿಯುತ ವಾತಾವರಣದಲ್ಲಿ ಸಮಯ ಕಳೆಯಲು ಜನರು ಇಲ್ಲಿಗೆ ಬರುತ್ತಾರೆ. ವಿಶೇಷವೆಂದರೆ ಇಲ್ಲಿ ಉಳಿದುಕೊಳ್ಳುವುದು ಮತ್ತು ತಿನ್ನುವುದು ಸಂಪೂರ್ಣವಾಗಿ ಉಚಿತವಾಗಿದೆ. ಆದರೆ ಪ್ರತಿಯಾಗಿ ನೀವು ಕೆಲವು ಸ್ವಯಂಸೇವಕ ಕೆಲಸವನ್ನು ಮಾಡಬೇಕಾಗುತ್ತದೆ. ಇಲ್ಲಿ ನೀವು ಋಷಿಕೇಶದ ಕೆಲವು ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.
ಪರಮಾರ್ಥ ನಿಕೇತನ (Parmarth Niketan)
ಋಷಿಕೇಶದ ಸುಂದರ ಆಶ್ರಮಗಳಲ್ಲಿ ಪರಮಾರ್ಥ ನಿಕೇತನವೂ ಒಂದೆಂದು ಪರಿಗಣಿಸಲಾಗಿದೆ. ಈ ಸ್ಥಳವು ಗಂಗಾ ಆರತಿಗೆ ಹೆಸರುವಾಸಿಯಾಗಿದೆ. ನೀವು ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ಇಲ್ಲಿಗೆ ಬಂದರೆ ನೀವು ಉಚಿತವಾಗಿ ಉಳಿಯಬಹುದು. ಇಲ್ಲಿ ನೀವು ಆಹಾರ ಮತ್ತು ಪಾನೀಯಗಳಿಗೆ ಸಹ ಪಾವತಿಸಬೇಕಾಗಿಲ್ಲ.
ರಮಣಾಶ್ರಮ (Sri Ramanasramam)
ನೀವು ತಮಿಳುನಾಡಿಗೆ ಹೋಗುತ್ತಿದ್ದರೆ ರಮಣಾಶ್ರಮಕ್ಕೆ ಭೇಟಿ ನೀಡಿ. ಇಲ್ಲಿ ನಿಮ್ಮ ವಾಸ್ತವ್ಯ ಮತ್ತು ಆಹಾರವು ಸಂಪೂರ್ಣವಾಗಿ ಉಚಿತವಾಗಿರುತ್ತದೆ.