ಮುದ್ದಾದ ಮಗುವನ್ನು ಕಂಡೊಡನೆ ಮುತ್ತಿಡುವುದು ಸಾಮಾನ್ಯ. ಇದು ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವೂ ಹೌದು. ಆದರೆ ನಾವು ಮಕ್ಕಳಿಗೆ ಮುತ್ತು ಕೊಡುವುದರಿಂದ ಅಥವಾ ಚುಂಬಿಸುವುದರಿಂದ ಕೆಲವು ಅಡ್ಡಪರಿಣಾಮಗಳೂ ಇವೆ ಎನ್ನುತ್ತಾರೆ ತಜ್ಞರು. ಏಕೆಂದರೆ ಪೋಷಕರು ಅಥವಾ ಇತರ ಕುಟುಂಬ ಸದಸ್ಯರು ತಿಳಿಯದೆಯೇ ಈ ಮೂಲಕ ಸೋಂಕನ್ನು ಚಿಕ್ಕ ಮಗುವಿಗೆ ಹರಡುತ್ತಾರೆ. ನಮಗೆಲ್ಲರಿಗೂ ತಿಳಿದಿರುವಂತೆ ನಾವು ನಮ್ಮ ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದೇ ಕಾರಣಕ್ಕೆ ಅವರನ್ನು ರೋಗಗಳಿಂದ ರಕ್ಷಿಸಲು ಹೆಚ್ಚು ಸಮಯ ಆಚೆ ಬಿಡದೆ ಮನೆಯೊಳಗೆ ಆಟವಾಡಿಸುತ್ತೇವೆ (ವಿಶೇಷವಾಗಿ ನಗರವಾಸಿಗಳು). ಧೂಳು ಮತ್ತು ಕೊಳಕಿನಿಂದ ರಕ್ಷಿಸುತ್ತೇವೆ. ಆದರೆ ನಾವು ಮುತ್ತಿಡುವಾಗ ಈ ಬಗ್ಗೆ ಗಮನ ಹರಿಸುವುದಿಲ್ಲ. ಇದರ ಬಗ್ಗೆ ತಜ್ಞರ ಅಭಿಪ್ರಾಯವೇನೆಂದು ತಿಳಿಯೋಣ ಬನ್ನಿ…
ತಜ್ಞರು ಹೇಳುವುದೇನು?
ಮಕ್ಕಳ ತಜ್ಞರು ಹೇಳುವ ಪ್ರಕಾರ, ಮಗುವಿಗೆ ಮುತ್ತು ಕೊಡುವುದು ಅನೇಕರಿಗೆ ಇಷ್ಟವಾಗಬಹುದು. ಆದರೆ ಚಿಕ್ಕ ಮಗುವಿಗೆ ಅದು ಅತ್ಯಂತ ಕಿರಿಕಿರಿ ಉಂಟುಮಾಡುವ ವಿಷಯವಾಗಿದೆ. ಪೋಷಕರು ತಮ್ಮ ಮಗುವನ್ನು ಪದೇ ಪದೇ ಚುಂಬಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈಗಾಗಲೇ ಹೇಳಿದ ಹಾಗೆ ಚುಂಬನದ ಮೂಲಕ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಹರಡುತ್ತವೆ. ಇದು ಮಗುವಿಗೆ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ.
Also Read: ಬೆಳಗ್ಗೆ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಕಣ್ರೀ…!
ಇವರಿಂದ ಮಗುವಿಗೂ ಸೋಂಕು…
ವೈದ್ಯರು ಹೇಳುವಂತೆ ಜನರು ಹೆಚ್ಚಾಗಿ ತಮ್ಮ ಮಗುವಿನ ಕೆನ್ನೆ ಮತ್ತು ಮುಖದ ಮೇಲೆ ಚುಂಬಿಸುತ್ತಾರೆ. ಇದು ಅತ್ಯಂತ ಸೂಕ್ಷ್ಮ ಸ್ಥಳವಾಗಿದೆ. ಏಕೆಂದರೆ ಇಲ್ಲಿಂದ ಸೋಂಕುಗಳು ಅಥವಾ ಸೂಕ್ಷ್ಮಜೀವಿಗಳು ಕಣ್ಣು, ಬಾಯಿ ಮತ್ತು ಮೂಗಿನ ಮೂಲಕ ಅವರ ದೇಹವನ್ನು ಪ್ರವೇಶಿಸಬಹುದು. ಇದರಿಂದಾಗಿ, ಶೀತ ಬರುವುದು ಸಾಮಾನ್ಯ ಸೋಂಕು. ಆದರೆ ಕೆಲವೊಮ್ಮೆ ಚುಂಬನದ ಮೂಲಕ, ಮಗುವಿಗೆ ನವಜಾತ ಶಿಶುವಿನ ಜೀರ್ಣಕ್ರಿಯೆಯನ್ನು ಹಾಳುಮಾಡುವ, ಅವರ ರಕ್ತಕ್ಕೆ ಸೋಂಕು ತರುವ ಕಿಣ್ವಗಳು ಸಹ ಸಿಗುತ್ತವೆ. ಅಲ್ಲದೆ, ಯಾರಿಗಾದರೂ ಚರ್ಮದ ಸೋಂಕು ಇದ್ದರೆ, ಚುಂಬಿಸುವುದರಿಂದ ಮಗುವಿಗೂ ಸೋಂಕು ಹರಡಬಹುದು.
ಯಾರು ಚುಂಬಿಸಬಾರದು?
ಮನೆಗೆ ಬರುವ ಯಾವುದೇ ವ್ಯಕ್ತಿಗೆ ಮಗುವನ್ನು ಚುಂಬಿಸಲು ಬಿಡಬಾರದು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಅವರು ತನ್ನೊಂದಿಗೆ ಇತರ ಅನೇಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತರಬಹುದು, ಅವು ಮಗುವಿಗೆ ಹರಡಬಹುದು. ಪೋಷಕರು ಮುತ್ತಿಡುತ್ತಿದ್ದರೆ, ಹಣೆಯ ಮೇಲೆ ಮುತ್ತಿಡುವುದು ಸ್ವಲ್ಪ ಮಟ್ಟಿಗೆ ಸರಿ. ಆದರೆ ತುಟಿಗಳ ಸುತ್ತಲೂ ಮುತ್ತಿಡಲೇಬಾರದು.