By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: Rhea Singha: ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದ ಗೆದ್ದ 19 ವರ್ಷದ ರಿಯಾ ಸಿಂಘಾ ಯಾರು?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | Rhea Singha: ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದ ಗೆದ್ದ 19 ವರ್ಷದ ರಿಯಾ ಸಿಂಘಾ ಯಾರು?

Homeಲೈಫ್ ಸ್ಟೈಲ್

Rhea Singha: ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದ ಗೆದ್ದ 19 ವರ್ಷದ ರಿಯಾ ಸಿಂಘಾ ಯಾರು?

Sky Kannada News
Last updated: September 23, 2024 11:29 am
By Sky Kannada News
8 months ago
Share
2 Min Read
SHARE

Miss Universe India 2024: ಸೆಪ್ಟೆಂಬರ್ 22 ರಂದು ರಾಜಸ್ಥಾನದ ಜೈಪುರದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರ ಅದ್ಭುತ ಸಮಾರಂಭ ನಡೆಯಿತು. 19 ವರ್ಷದ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024ರ ಕಿರೀಟವನ್ನು ತನ್ನದಾಗಿಸಿಕೊಂಡರು. ಈ ಕಿರೀಟವನ್ನು 2015 ರ ಮಿಸ್ ಯೂನಿವರ್ಸ್ ಇಂಡಿಯಾ ಮತ್ತು ಪ್ರಸಿದ್ಧ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ವೇದಿಕೆಯಲ್ಲಿ ರಿಯಾ ಸಿಂಘಾಗೆ ​​ನೀಡಿದರು.

ಅಂದಹಾಗೆ ಭಾರತದ 51 ಸ್ಪರ್ಧಿಗಳು ಈ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದರು. ಆದರೆ ಅವರನ್ನೆಲ್ಲಾ ಸೋಲಿಸಿ ಗುಜರಾತ್ ನಿವಾಸಿ 19 ವರ್ಷದ ರಿಯಾ ಸಿಂಘಾ ಗೆದ್ದು ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇನ್ನು ರಿಯಾ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜೇತೆಯಾಗಿ ಹೊರಹೊಮ್ಮಿದ ರಿಯಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸ್ಪರ್ಧೆಯಲ್ಲಿ ಪ್ರಾಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಮತ್ತು ಛವಿ ಎರಡನೇ ರನ್ನರ್ ಅಪ್ ಆದರು. ಸುಶ್ಮಿತಾ ರಾಯ್ ಮತ್ತು ರುಫುಜಾನೊ ವಿಸೊ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡರು.

ಗೆದ್ದ ನಂತರ ತನ್ನ ಸಂತೋಷವನ್ನು ವ್ಯಕ್ತಪಡಿಸಿದ ರಿಯಾ, “ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024ರ ಪ್ರಶಸ್ತಿಯನ್ನು ಗೆದ್ದಿದ್ದು, ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟವನ್ನು ತಲುಪಲು ಸಾಕಷ್ಟು ಶ್ರಮಿಸಿದ್ದು, ಕಿರೀಟಕ್ಕೆ ಅರ್ಹಳೆಂದು ಭಾವಿಸುತ್ತೇನೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ” ಎಂದು ತಿಳಿಸಿದರು.

ರಿಯಾ ಸಿಂಘಾ ಯಾರು?

ಮಿಸ್ ಯೂನಿವರ್ಸ್ ಇಂಡಿಯಾ 2024 ರ ಕಿರೀಟವನ್ನು ಗೆದ್ದ ರಿಯಾ ಸಿಂಘಾಗೆ 19 ವರ್ಷ ವಯಸ್ಸು. ಗುಜರಾತ್ ನಿವಾಸಿಯಾಗಿದ್ದಾರೆ. ಪ್ರಸಿದ್ಧ ರೂಪದರ್ಶಿ. ಇವರ ತಾಯಿ ರೀಟಾ ಸಿಂಘಾ. ತಂದೆ ಬ್ರಿಜೇಶ್ ಸಿಂಘಾ ಇಸ್ಟೋರ್ ಫ್ಯಾಕ್ಟರಿಯ ಉದ್ಯಮಿ ಮತ್ತು ನಿರ್ದೇಶಕರಾಗಿದ್ದಾರೆ. ರಿಯಾ ಕೇವಲ 16 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಮಿಸ್ ಟೀನ್ ಗುಜರಾತ್ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.  ಈಗ ಅವರು ಮೆಕ್ಸಿಕೋದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. Instagram ನಲ್ಲಿ 47 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

You Might Also Like

6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ  

Myopia: ಮಕ್ಕಳಲ್ಲಿ ವೇಗವಾಗಿ ಹೆಚ್ಚುತ್ತಿದೆ ಸಮೀಪದೃಷ್ಟಿ ದೋಷ… ಈ ಅಪಾಯದಿಂದ ಅವರನ್ನು ರಕ್ಷಿಸುವುದು ಹೇಗೆ?; ಇಲ್ಲಿದೆ ತಜ್ಞರ ಸಲಹೆ

ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…

ಬೆಳಗ್ಗೆ ನೆನೆಸಿದ ಕಡಲೆ ಕಾಳು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಕಣ್ರೀ…!

ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಗಡ್ಡ ಬಿಡೋದಾ, ಆದ್ರೆ ಸಂಶೋಧನೆಗಳು ಹೇಳೋದೇನು ಗೊತ್ತಾ?

TAGGED:LifestyleRhea Singhaskykannadaರಿಯಾ ಸಿಂಘಾ
Share This Article
Facebook Email Print
Share
Previous Article ಎಷ್ಟು ಗಂಟೆ ನಿದ್ರೆ ಮಾಡಬೇಕು…ಅತಿಯಾದ ನಿದ್ರೆ, ನಿದ್ರಾಹೀನತೆಗೆ ಕಾರಣಗಳೇನು?; ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ  
Next Article ಭಾರತದ ಈ ಸ್ಥಳಗಳಲ್ಲಿ ಆಹಾರ, ವಸತಿಗೆ ದುಡ್ಡು ಕೊಡಬೇಕಿಲ್ಲ…ಸಂಪೂರ್ಣ ಉಚಿತ!
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮಗುವಿನ ಕೆನ್ನೆ ಅಥವಾ ತುಟಿಗೆ ಮುತ್ತಿಡುವುದು ಸರಿಯೋ, ತಪ್ಪೋ…?; ಇಲ್ಲಿದೆ ತಜ್ಞರ ಅಭಿಪ್ರಾಯ

ಟಾಯ್ಲೆಟ್ ಸೀಟ್‌ನಿಂದ ಹಿಡಿದು ಟೂತ್ ಬ್ರಶ್ ತನಕ…ಸ್ನಾನಗೃಹ-ಶೌಚಾಲಯಕ್ಕೆ ಸಂಬಂಧಿಸಿದ 7 ಇಂಟ್ರೆಸ್ಟಿಂಗ್ ಸಂಗತಿಗಳು..!

31 ವರ್ಷಗಳ ನಂತರ ದಿವ್ಯಾ ಭಾರತಿ ಸಾ*ವಿನ ರಹಸ್ಯ ಬಯಲು.. ಸಂದರ್ಶನದಲ್ಲಿ ರಿವೀಲ್‌ ಮಾಡಿದ ಬಾಲಿವುಡ್ ನಟಿ!  

ನಾಯಕಿಗೆ ಚಿನ್ನದ ಸರ ಹಾಕಲು ಈ ಸುಪ್ರಸಿದ್ಧ ನಟ ಹೆದರಿದ್ದೇಕೆ, ಮೊದಲ ಶಾಟ್‌ನಲ್ಲೇ ಖಳನಾಯಕನ ಕಾಲು ಮುರಿದಿದ್ದೇಕೆ?

Sarkari Udyoga: ಈ ನಿರ್ದಿಷ್ಟ ವಿಷಯ ಅಧ್ಯಯನ ಮಾಡಿದವರು ಈಗಲೇ ಅರ್ಜಿ ಸಲ್ಲಿಸಿ, 1.5 ಲಕ್ಷಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತೀರಿ…   

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?