ಸುಂದರವಾಗಿ ಕಾಣಬೇಕು ಎಂಬ ವ್ಯಾಮೋಹದಿಂದ ಪದೇ ಪದೇ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಖರ್ಚು ಮಾಡುವವರು ಇದ್ದಾರೆ. ಹಾಗೆಯೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಮುಖ ಕೆಡಿಸಿಕೊಂಡವರೂ ಇದ್ದಾರೆ. ಆದರೆ ಇಲ್ಲೊಬ್ಬಾಕೆಗೆ ಸುಂದರವಾಗಿ ಕಾಣಬೇಕೆಂಬ ಗೀಳು ಎಷ್ಟರಮಟ್ಟಿಗೆ ಇದೆಯೆಂದರೆ ಆಕೆ ತನ್ನ ಮಗಳಿಗಿಂತ ಚಿಕ್ಕವಳಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಕೋಟ್ಯಂತರ ರೂ.ಖರ್ಚು ಮಾಡಿದ್ದಾಳೆ.
ಆಕೆಯ ಹೆಸರು ಸಾರಾ ಬರ್ಗೆ. ವಯಸ್ಸು 63. ಮೂಲತಃ ಸ್ಪೇನ್‌ನವರು. ಸುಂದರವಾಗಿ ಕಾಣಲು ಆಗಾಗ ಬ್ಯೂಟಿ ಪಾರ್ಲರ್‌ಗಳಿಗೆ ಮಾತ್ರ ಹೋಗುವುದಲ್ಲದೆ, ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಸಾರಾ ಸದ್ಯ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾಳೆ. ಆದರೆ ಮಗಳ ಸೌಂದರ್ಯ ನೋಡಿ ಎಂದೂ ಹೊಟ್ಟೆಕಿಚ್ಚು ಪಡುವುದಿಲ್ಲ. ಆದರೆ ಮಗಳಿಗಿಂತ ಹೆಚ್ಚು ಸುಂದರವಾಗಿ ಕಾಣಬೇಕೆಂಬ ಆಸೆ ಇದೆ ಎನ್ನುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಐದು ಕೋಟಿ ರೂ.ಗೂ ಹೆಚ್ಚು ಖರ್ಚಾಗಿದೆ ಎಂದು ಸಾರಾ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ವ್ಯಸನಿಯಾಗಿರುವ ಮಹಿಳೆ
ನಾನು ಶಸ್ತ್ರಚಿಕಿತ್ಸೆಗೆ ವ್ಯಸನಿಯಾಗಿದ್ದೇನೆ ಎಂದು ಹೇಳುವ ಸಾರಾ, ನಿಮ್ಮ ಲುಕ್ ಅನ್ನು ಸುಧಾರಿಸುವ ಅಭ್ಯಾಸವನ್ನು ಒಮ್ಮೆ ಮಾಡಿಕೊಂಡರೆ ಅದನ್ನು ನಿಲ್ಲಿಸಲು ಬಯಸುವುದಿಲ್ಲ ಎನ್ನುತ್ತಾರೆ. ಸಾರಾ ಅವರು ಪ್ರತಿ 15 ದಿನಗಳಿಗೊಮ್ಮೆ ಬೊಟೊಕ್ಸ್ ಅಥವಾ ಫಿಲ್ಲರ್ ಅನ್ನು ಇಂಜೆಕ್ಟ್ ಮಾಡುತ್ತಾರೆ.
ಈ 63 ವರ್ಷದ ಮಹಿಳೆ ಹೇಳುವಂತೆ ಸ್ತನ ಲಿಫ್ಟ್, ಹಿಪ್ ಇಂಪ್ಲಾಂಟ್‌ಗಳಿಂದ ಹಿಡಿದು ಫೇಸ್ ಲಿಫ್ಟ್‌ಗಳವರೆಗೆ ಎಲ್ಲವನ್ನೂ ಮಾಡಿಸಿದ್ದಾರೆ. ತನ್ನ ಶವಪೆಟ್ಟಿಗೆಗೆ ಮೊಳೆ ಹೊಡೆಯುವವರೆಗೂ ಈ ಚೆಲುವು ಮುಂದುವರಿಯುತ್ತದೆ ಎಂದು ಸಾರಾ ಸ್ಪಷ್ಟಪಡಿಸಿದ್ದಾರೆ. ಜನರು ಸುಂದರವಾಗಿ ಕಾಣಲು ವಿವಿಧ ಫಿಲ್ಟರ್‌ಗಳನ್ನು ಬಳಸುತ್ತಾರೆ ನಾನು ಯಾವುದೇ ರೀತಿಯ ಫಿಲ್ಟರ್ ಅನ್ನು ಬಳಸುವುದಿಲ್ಲ, ನಾನು ಇದ್ದಂತೆ ತೋರಿಸುತ್ತೇನೆ ಎಂದು ತಿಳಿಸಿದ್ದಾರೆ ಸಾರಾ.