ಉತ್ತರ ಪ್ರದೇಶದ ಗಾಜಿಯಾಬಾದ್ನ ರೇಣು ಶರ್ಮಾ ತಮ್ಮ ಶಿಕ್ಷಕ ವೃತ್ತಿಯನ್ನು ಹೊರೆದು 'ಸಿಯಾ ಕಿಚನ್ ಮತ್ತು ಕೆಫೆ'ಯನ್ನು ಪ್ರಾರಂಭಿಸಿದರು. ಅವರು ತಮ್ಮ ಮಗಳ ಪಾಲನೆಗಾಗಿ ಈ ನಿರ್ಧಾರವನ್ನು ತೆಗೆದುಕೊಂಡರು. ಈಗ ಅವರ ನವೋದ್ಯಮವು ಯಶಸ್ವಿ ವ್ಯವಹಾರವಾಗಿ ಮಾರ್ಪಟ್ಟಿದ್ದು, ಇಂದು ಅವರ ಸ್ಪೂರ್ತಿದಾಯಕ ಕಥೆಯನ್ನು ತಿಳಿಯೋಣ…
ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಶಿಕ್ಷಕಿಯಾಗಿದ್ದ ರೇಣು ಶರ್ಮಾ ತಮ್ಮ ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಇಂದು ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಶಿಕ್ಷಕ ವೃತ್ತಿಯನ್ನು ತೊರೆದು ತಮ್ಮದೇ ಆದ ‘ಸಿಯಾ ಕಿಚನ್ ಮತ್ತು ಕೆಫೆ’ ಎಂಬ ನವೋದ್ಯಮವನ್ನು ಪ್ರಾರಂಭಿಸಿದರು. ಆದರೆ ಈ ಪ್ರಯಾಣ ಎಲ್ಲರಂದುಕೊಂಡಷ್ಟು ಸುಲಭವಾಗಿರಲಿಲ್ಲ, ಆದರೆ ಇಂದು ಅವರು ಯಶಸ್ವಿ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ.
ಮಗಳಿಗಾಗಿ ಕೆಲಸ ಬಿಟ್ಟ ರೇಣು ಶರ್ಮಾ
ರೇಣು ಶರ್ಮಾ ಶಾಲಾ ಶಿಕ್ಷಕಿಯಾಗಿದ್ದರು. ಆದರೆ ಲಾಕ್ಡೌನ್ ಸಮಯದಲ್ಲಿ ಅವರ ಜೀವನ ಬದಲಾಯಿತು. ತಮ್ಮ ಮಗಳು ಸಿಯಾಗೆ ಜನ್ಮ ನೀಡಿದಾಗ, ಮನೆ ಕೆಲಸ ಮತ್ತು ಶಿಕ್ಷಕ ವೃತ್ತಿ ಎರಡೂ ಬ್ಯಾಲೆನ್ಸ್ ಮಾಡುವುದು ಮತ್ತು ಮಗಳನ್ನು ಬೆಳೆಸುವುದು ಬಹಳ ಕಷ್ಟವಾಯಿತು. ಈ ಸಮಯದಲ್ಲಿ ಅವರು ತಮ್ಮ ಮಗಳಿಗೆ ಪೂರ್ಣ ಸಮಯ ನೀಡಲು ತಮ್ಮ ಕೆಲಸವನ್ನು ಬಿಡಲು ನಿರ್ಧರಿಸಿದರು. ಆದರೆ ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ನಿರ್ಧರಿಸಿದರು. ಈ ಆಲೋಚನೆಯೊಂದಿಗೆ, ಅವರು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿ, “ಸಿಯಾ ಕಿಚನ್ ಮತ್ತು ಕೆಫೆ”ಗೆ ಅಡಿಪಾಯ ಹಾಕಿದರು.
Also Read: ಸರ್ಕಾರಿ ನೌಕರಿ ಬಿಟ್ಟು ಬ್ಯುಸಿನೆಸ್ಗೆ ಕೈ ಹಾಕಿದ ದಿಟ್ಟೆ ಕಾಮಿನಿ.. ವಾರ್ಷಿಕ ₹2 ಕೋಟಿ ವಹಿವಾಟು
ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ
ಆರಂಭಿಕ ಹಂತದಲ್ಲಿ ರೇಣು ಶರ್ಮಾ ತನ್ನ ಕುಟುಂಬ ಮತ್ತು ಸಮಾಜದಿಂದ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ವ್ಯವಹಾರವನ್ನು ಯಶಸ್ವಿಗೊಳಿಸಲು ಅವರು ಪ್ರತಿದಿನ 14 ರಿಂದ 16 ಗಂಟೆಗಳ ಕಾಲ ಕೆಲಸ ಮಾಡಿದರು. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು ಮತ್ತು ಕ್ರಮೇಣ ಅವರ ಕೆಫೆ ಜನರಲ್ಲಿ ಪ್ರಸಿದ್ಧವಾಗಲು ಪ್ರಾರಂಭಿಸಿತು. ಇಂದು, ಸಿಯಾ ಕಿಚನ್ & ರೆಫೆ 4*9 ರೇಟಿಂಗ್ ಪಡೆದು ಗಾಜಿಯಾಬಾದ್ನಲ್ಲಿ ಜನಪ್ರಿಯ ಸ್ಥಳವಾಗಿದೆ. ಇಲ್ಲಿನ ರುಚಿಕರವಾದ ಪೇಸ್ಟ್ರಿಗಳು, ಕೇಕ್ಗಳು ಮತ್ತು ಇತರ ಖಾದ್ಯಗಳನ್ನು ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಮುಂದೇನು…?
ರೇಣು ಶರ್ಮಾ ತಮ್ಮ ಉದ್ಯಮವನ್ನು ಇಷ್ಟಕ್ಕೆ ಸೀಮಿತಗೊಳಿಸದೆ ವಿಸ್ತರಿಸಲು ಮತ್ತು ಒಂದು ಬ್ರಾಂಡ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದಾರೆ. ಇವರ ಕಥೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.
ರೇಣು ಶರ್ಮಾ ಯಶಸ್ಸಿನ ಮಂತ್ರ
ನಿಮ್ಮಲ್ಲಿ ಉತ್ಸಾಹ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಇಚ್ಛಾ ಶಕ್ತಿ ಇದ್ದರೆ, ಯಾವುದೇ ಕನಸು ಅಸಾಧ್ಯವಲ್ಲ ಎಂಬುದಕ್ಕೆ ರೇಣು ಶರ್ಮಾ ಅವರ ಕಥೆ ಸಾಕ್ಷಿಯಾಗಿದೆ. ಕೆಲಸದ ಬದಲು ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಕನಸು ಕಾಣುವ ಮಹಿಳೆಯರಿಗೆ ಇವರ ಯಶಸ್ಸು ಸ್ಫೂರ್ತಿಯಾಗಿದೆ.