By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ

Homeಲೈಫ್ ಸ್ಟೈಲ್

Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ

Sky Kannada News
Last updated: October 7, 2024 11:57 am
By Sky Kannada News
7 months ago
Share
2 Min Read
SHARE

ಕಳೆದ ಕೆಲವು ವರ್ಷಗಳಿಂದ ಆಹಾರದ ಗುಣಮಟ್ಟ ಮತ್ತು ಪೋಷಣೆ (Nutrition) ಯ ಬಗ್ಗೆ ಅರಿವು ಗಮನಾರ್ಹವಾಗಿ ಹೆಚ್ಚಾಗಿದೆ.  ಅದಕ್ಕಾಗಿಯೇ ಮಾರುಕಟ್ಟೆಯಲ್ಲಿಯೂ ‘ಆರೋಗ್ಯಕರ ಆಹಾರ’ ಎಂದು ಟ್ಯಾಗ್ ಮಾಡಲಾದ ಪದಾರ್ಥಗಳ ಮಾರಾಟ ವೇಗವಾಗಿ ಬೆಳೆಯುತ್ತಿದೆ. ಆದರೆ ಹೆಲ್ತಿ ಫುಡ್‌ ಎಂದು ಹೇಳಲಾಗುವ ಪ್ರತಿಯೊಂದು ಆಹಾರ ಉತ್ಪನ್ನವು ನಿಜವಾಗಿಯೂ ಆರೋಗ್ಯಕರವೇ?, ಅದಕ್ಕೆ ತಜ್ಞರು ಕೊಡುವ ಉತ್ತರ ʼಇಲ್ಲʼ. ನಮ್ಮ ಮನೆಗಳಲ್ಲಿ ನಾವು ದಿನನಿತ್ಯ ಅಂಗಡಿಯಿಂದ ತಂದು ಬಳಸುವ ಅನೇಕ ಆಹಾರ ಉತ್ಪನ್ನಗಳು ಆರೋಗ್ಯಕರವಾಗಿ ಕಾಣಿಸಬಹುದು, ಆದರೆ ಅವುಗಳ ಗುಣಮಟ್ಟ ಮತ್ತು ಪೋಷಣೆ ನಾವು ಯೋಚಿಸಿದಷ್ಟು ಪ್ರಯೋಜನಕಾರಿಯಾಗಿರುವುದಿಲ್ಲ, ಹೇಗೆ ಅಂತೀರಾ?, ಮುಂದೆ ಓದಿ…

ಪ್ಯಾಕೇಜ್ ಮಾಡಿದ ಹಣ್ಣಿನ ರಸ

ಎಷ್ಟೋ ಬಾರಿ ನಿಶಕ್ತಿಯಾದಾಗ ಮತ್ತು ಆರೋಗ್ಯಕ್ಕಾಗಿ ನಾವು ಆಯ್ಕೆಮಾಡುವ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್‌ಗಳು ಹೆಚ್ಚಾಗಿ ಅಧಿಕ ಪ್ರಮಾಣದ ಸಕ್ಕರೆ ಮತ್ತು ಸಂರಕ್ಷಕಗಳಿಂದ ತುಂಬಿರುತ್ತವೆ. ಆದರೆ ಈ ಜ್ಯೂಸ್‌ ಅನ್ನು ಸಾಮಾನ್ಯವಾಗಿ ಫ್ರೆಶ್ ಹಣ್ಣುಗಳಿಂದ ಮಾಡಲಾಗುವುದಿಲ್ಲ. ಬದಲಿಗೆ ಹಣ್ಣಿನ ರಸ ಮತ್ತು ಇತರ ಕೃತಕ ಪದಾರ್ಥಗಳನ್ನು ಅವುಗಳಿಗೆ ಸೇರಿಸಲಾಗುತ್ತದೆ.

ನಾವೇನು ಮಾಡಬೇಕು?

ಇಂತಹ ಜ್ಯೂಸ್‌ ಬದಲಿಗೆ ನಾವು ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ.  ಏಕೆಂದರೆ ಅವುಗಳಲ್ಲಿನ ನೈಸರ್ಗಿಕ ಫೈಬರ್ ಮತ್ತು ಜೀವಸತ್ವಗಳು ಆರೋಗ್ಯಕ್ಕೆ ಪ್ರಯೋಜನಕಾರಿ.   ‌

ಮಲ್ಟಿಗ್ರೇನ್ ಹಿಟ್ಟು

ಮಲ್ಟಿಗ್ರೇನ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಬ್ರಾಂಡ್‌ಗಳು ಬಾಳಿಕೆ ಬರಲೆಂದು ಇದಕ್ಕೆ ಆರೋಗ್ಯಕ್ಕೆ ಹಾನಿಕಾರಕವಾದ ಸಂರಕ್ಷಕಗಳನ್ನು ಸೇರಿಸುತ್ತವೆ.

ನಾವೇನು ಮಾಡಬೇಕು?

ಬದಲಾಗಿ, ಶುದ್ಧ ಗೋಧಿ ಅಥವಾ ಮನೆಯಲ್ಲೇ ಮಾಡಿದ ಧಾನ್ಯಗಳ ಹಿಟ್ಟನ್ನು ಬಳಸುವುದು ಉತ್ತಮ.

Also Read: ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?

ಕಡಿಮೆ ಕೊಬ್ಬಿನ ತಿಂಡಿಗಳು

ಅನೇಕ ಜನರು ತೂಕವನ್ನು ನಿಯಂತ್ರಿಸಲು ಕಡಿಮೆ ಕೊಬ್ಬಿನ ತಿಂಡಿಗಳನ್ನು ಸೇವಿಸುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚಿನ ತಿಂಡಿಗಳಲ್ಲಿ ರುಚಿಯನ್ನು ಕಾಪಾಡಿಕೊಳ್ಳಲು ಕೃತಕ ಸಕ್ಕರೆ ಮತ್ತು ಇತರ ರಾಸಯನಿಕಗಳನ್ನು ಸೇರಿಸಲಾಗುತ್ತದೆ. ಈ ತಿಂಡಿಗಳು ವಾಸ್ತವವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ನಾವೇನು ಮಾಡಬೇಕು?  

ನೀವು ಬೀಜಗಳು, ಡ್ರೈ ಫ್ರೂಟ್ಸ್‌, ನಟ್ಸ್‌ ಮತ್ತು ತಾಜಾ ಹಣ್ಣುಗಳನ್ನು ಸೇವಿಸಿದರೆ ಉತ್ತಮ. ಇದು ರುಚಿಕರವಾಗಿರುತ್ತದೆ. ಜೊತೆಗೆ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ.

ಡಯಟ್‌ ಸೋಡಾ

ಡಯಟ್‌ ಸೋಡಾ ಸಾಮಾನ್ಯವಾಗಿ ಸಕ್ಕರೆ ಮತ್ತು ಸಂರಕ್ಷಕಗಳಿಂದ ಕೂಡಿರುತ್ತವೆ. ಈ ಉತ್ಪನ್ನಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ.

ನೀವೇನು ಮಾಡಬೇಕು?

ನಮ್ಮ ಆಹಾರವನ್ನು ಆಯ್ಕೆಮಾಡುವಲ್ಲಿ ಜಾಗರೂಕರಾಗಿರಬೇಕು. ನಾವು ಆರೋಗ್ಯಕರವೆಂದು ಪರಿಗಣಿಸುವ ಆಹಾರಗಳ ಅಂಶಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ತಾಜಾ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ನಟ್ಸ್ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಆಹಾರದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಆರೋಗ್ಯಕರ ಜೀವನವನ್ನು ನಡೆಸಬಹುದು. ಆಹಾರ ಉತ್ಪನ್ನಗಳ ಲೇಬಲ್‌ಗಳನ್ನು ಓದಿ. ಪ್ಯಾಕೇಜ್ ಮಾಡಿದ ಆಹಾರಗಳು ಪ್ರಮಾಣೀಕರಿಸದ ಹೊರತು ಅವುಗಳಿಂದ ದೂರವಿರಿ.

You Might Also Like

ತುಪ್ಪ ಮತ್ತು ಆಲಿವ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು?

ನಿಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದೀರಾ… ಹಾಗಾದರೆ ಈ ಲೇಖನ ಖಂಡಿತ ಓದಲೇಬೇಕು   

ಈ ಕ್ರಿಕೆಟಿಗರು ಮೊಟ್ಟೆ ಪ್ರಿಯರು, ಇವರಲ್ಲಿ ಓರ್ವ ಬೌಲರ್ ಮಾತ್ರ ಒಂದು ದಿನಕ್ಕೆ 24 ಮೊಟ್ಟೆಗಳನ್ನು ತಿನ್ನುತ್ತಾರೆ!

ನಿಮಗೆ ಗೊತ್ತಾ…ಕಡಿಮೆ ಮಾತನಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ!

ಮದುವೆಯಲ್ಲಿ ಅದಿತಿ ರಾವ್ ಹೈದರಿ ಧರಿಸಿದ್ದ ಮಹೇಶ್ವರಿ ಟಿಶ್ಯೂ ಲೆಹೆಂಗಾ, ಸುಂದರವಾದ ವಜ್ರಾಭರಣಗಳ ಸ್ಪೆಷಾಲಿಟಿಯೇನು ಗೊತ್ತಾ?

TAGGED:foodHealthLifestylePackaged foodskykannadaunhealthy foodಆರೋಗ್ಯಆಹಾರಲೈಫ್‌ಸ್ಟೈಲ್‌ಸ್ಕೈ ಕನ್ನಡ
Share This Article
Facebook Email Print
Share
Previous Article ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   
Next Article ಟ್ರೆಂಡ್‌ ಆಯ್ತು ಎದೆ ಹಾಲಿನ ಆಭರಣ…ತಯಾರಿಕೆ, ಆರೈಕೆ, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Health Tips: ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟನಾ…ಇದರ ಅನುಕೂಲ-ಅನಾನುಕೂಲಗಳೇನು ಗೊತ್ತಾ?

ಬೀಟ್‌ರೂಟ್‌ ಸಲಾಡ್ ಸೇವಿಸುವುದರಿಂದ ಸಿಗಲಿದೆ 5 ಪ್ರಯೋಜನಗಳು!

ಒಣಗಿದ ಹೂವನ್ನು ಎಸೆಯಬೇಡಿ….ಅದು ಈ ರೀತಿಯೂ ಉಪಯೋಗವಾಗಲಿದೆ!

ಮೈಬಣ್ಣ ಕಪ್ಪು ಎನ್ನುವ ಒಂದೇ ಕಾರಣಕ್ಕೆ ಎಲ್ಲರಿಂದಲೂ ಟೀಕೆಗೊಳಗಾಗಿದ್ದ ಈಕೆ ಇಂದು ಸ್ಟಾರ್‌ ನಟಿ…ಇವರು ಧರಿಸುವ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತಾ?  

ಶಾರುಖ್ ಧರಿಸಿರುವ ಈ ಜೀನ್ಸ್‌ ಪ್ಯಾಂಟ್ ಬೆಲೆ ಕೇಳಿ ಹೌಹಾರಿದ ನೆಟ್ಟಿಗರು..”ಕಿಂಗ್ ಈಸ್‌ ಆಲ್‌ವೇಸ್‌ ಕಿಂಗ್‌” ಎಂದ ಫ್ಯಾನ್ಸ್‌

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?