ಐಪಿಎಲ್ 2025 : ಕ್ರಿಕೆಟಿಗರು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನೆಲ್ಲಾ ತಿಂತಾರೆ ಎಂಬ ಕುತೂಹಲ ನಿಮಗಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…
ಐಪಿಎಲ್ 2025ರ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಪ್ರತಿ ಪಂದ್ಯದಲ್ಲೂ ಕ್ರಿಕೆಟಿಗರು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ತಮ್ಮ ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈ ಕ್ರಿಕೆಟಿಗರು ಸೇವಿಸುವ ಆಹಾರ ಹೇಗಿರುತ್ತದೆ ತಿಳಿದಿದೆಯೇ? ಬಿರುಬಿಸಿಲನ್ನೂ ಲೆಕ್ಕಿಸದೇ ಮೈದಾನದಲ್ಲಿ ಸೆಣೆಸುವ ಕ್ರಿಕೆಟಿಗರು ಬೆಳಗಿನ ಉಪಹಾರ, ಮಧ್ಯಾಹ್ನ, ರಾತ್ರಿ ಊಟಕ್ಕೆ ಸೇವಿಸುವ ಆಹಾರ ಎಂತಹದಿರುತ್ತದೆ ಎಂಬ ಬಗೆಗಿನ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಐಪಿಎಲ್ ತಂಡದ ಆಹಾರ ಮೆನು ಸಿದ್ಧಪಡಿಸುವಾಗ, ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ತಂಡದ ಆಟಗಾರರ ಮಾಧ್ಯಮ ಸಂದರ್ಶನಗಳನ್ನು ಆಧರಿಸಿ ChatGPT ಈ ಮೌಲ್ಯಮಾಪನಗಳನ್ನು ಮಾಡಿದೆ. ಇತ್ತೀಚೆಗೆ, ಇಂಡಿಯನ್ ಎಕ್ಸ್ಪ್ರೆಸ್ ಜೊತೆಗಿನ ಸಂಭಾಷಣೆಯಲ್ಲಿ, ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ನಂತಹ ತಂಡಗಳಿಗೆ ಆಹಾರ ಅಡುಗೆ ಸೇವೆಗಳನ್ನು ಒದಗಿಸುವ ಅಶಯ್ ದೇಸಾಯಿ ಕೂಡ ಇದನ್ನು ಹೇಳಿದ್ದಾರೆ.
ಇದರ ಆಧಾರದ ಮೇಲೆ ತಯಾರಿಸಲಾಗುತ್ತೆ ಐಪಿಎಲ್ ತಂಡದ ಫುಡ್ ಮೆನು
ಲೀನ್ ಪ್ರೋಟೀನ್
ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್
ಆರೋಗ್ಯಕರ ಕೊಬ್ಬು
ಸೂಪರ್ಫುಡ್ಸ್
ಗ್ರೀನ್ ಸಲಾಡ್
ಎಲೆಕ್ಟ್ರೋಲೈಟ್ಗಳಲ್ಲಿ ಸಮೃದ್ಧವಾಗಿರುವ ಪಾನೀಯಗಳು
ಉಪಾಹಾರಕ್ಕಾಗಿ ಏನು ಸೇವಿಸುತ್ತಾರೆ?
ಅಂದಹಾಗೆ ಉಪಾಹಾರ ಆಟಗಾರನಿಂದ ಆಟಗಾರನಿಗೆ ಬದಲಾಗುತ್ತದೆ. ಆಟಗಾರರು ತಮ್ಮ ಆಯ್ಕೆಯ ಪ್ರಕಾರ ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ರೋಹಿತ್ ಶರ್ಮಾ ಓಟ್ಸ್, ಮೊಟ್ಟೆಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಎಳನೀರಿನಿಂದ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ರಿಷಭ್ ಪಂತ್ ಕಡಲೆ ಹಿಟ್ಟಿನ ಚಿಲ್ಲಾ( Besan chilla), ಮೊಟ್ಟೆಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಅನೇಕ ಆಟಗಾರರು ABC ಜ್ಯೂಸ್ (ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್) ಇಷ್ಟಪಡುತ್ತಾರೆ.
ಕ್ರಿಕೆಟಿಗರಿಗೆ ಬೇಕೆ ಬೇಕು ಸೂಪರ್ಫುಡ್
ಆವಕಾಡೊ ಮತ್ತು ಅಗಸೆ ಬೀಜಗಳಂತಹ ಸೂಪರ್ಫುಡ್ಗಳ ಹೊರತಾಗಿ, ಅನೇಕ ಕ್ರಿಕೆಟಿಗರು ಎಳನೀರಿನೊಂದಿಗೆ ಚಿಯಾ ಬೀಜಗಳನ್ನು ಸಹ ಸೇವಿಸುತ್ತಾರೆ. ಇದಲ್ಲದೆ, ಆಹಾರ ತಜ್ಞರ ಸಲಹೆಯ ಮೇರೆಗೆ ಅವರು ತಮ್ಮ ಆಹಾರದಲ್ಲಿ ಸೂಪರ್ಫುಡ್ಗಳನ್ನು ಸಹ ಸೇರಿಸಿಕೊಳ್ಳುತ್ತಾರೆ.
ಐಪಿಎಲ್ ಪಂದ್ಯಕ್ಕೂ ಮುನ್ನ ಆಟಗಾರರು ತಿನ್ನುವುದು ಇದನ್ನೇ!
ಅಶಾಯ್ ದೇಸಾಯಿ ಹೇಳುವಂತೆ, ಡ್ರೆಸ್ಸಿಂಗ್ ಕೋಣೆಯಲ್ಲಿ ನಿಂಬೆ ನೀರು ಮತ್ತು ಎಳನೀರಿನ ನಂತರ ಸಲಾಡ್, ಮಲ್ಟಿಗ್ರೇನ್ ಸ್ಯಾಂಡ್ವಿಚ್, ಗೋಧಿ ಪಾಸ್ತಾ ಇತ್ಯಾದಿಗಳನ್ನು ನೀಡಲಾಗುತ್ತದೆ. ಇದಲ್ಲದೆ, ಅನೇಕ ಆಟಗಾರರು ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ.
ಇಂತಹ ಪಾನೀಯಗಳನ್ನು ಜಾಸ್ತಿ ಸೇವನೆ ಮಾಡ್ತಾರೆ…
ಕ್ರಿಕೆಟಿಗರು ಗ್ರೀನ್ ಟೀ, ನಿಂಬೆ ಪಾನಕ, ಎಳನೀರು ಅಥವಾ ಎನರ್ಜಿ ಡ್ರಿಂಕ್ಸ್ ಕುಡಿಯುತ್ತಾರೆ. ಅತಿಯಾಗಿ ಬೆವರುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ಗಳ ಅಗತ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಅವರಿಗೆ ಎಲೆಕ್ಟ್ರೋಲೈಟ್ಗಳಲ್ಲಿ ಸಮೃದ್ಧವಾಗಿರುವ ಪಾನೀಯಗಳನ್ನು ನೀಡಲಾಗುತ್ತದೆ.
ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟ ಹೇಗಿರುತ್ತದೆ?
ಕ್ರಿಕೆಟಿಗರ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವು ಕಡಿಮೆ ಕೊಬ್ಬಿನ ಪ್ರೋಟೀನ್ಗಳು (ಕೋಳಿ, ಮೀನು, ತೋಫು, ಸೋಯಾ ಚಾಪ್), ಆರೋಗ್ಯಕರ ಕೊಬ್ಬು, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿದೆ. ಹೆಚ್ಚಿನ ಆಟಗಾರರು ಕೋಳಿ ಮಾಂಸ ತಿನ್ನಲು ಇಷ್ಟಪಡುತ್ತಾರೆ. ಇದರೊಂದಿಗೆ ಗ್ಲುಟನ್ ಮುಕ್ತ ಹಿಟ್ಟಿನ ರೋಟಿ ಅಥವಾ ಪರಾಠ, ಕಂದು ಅನ್ನ ಇತ್ಯಾದಿ ಇರುತ್ತದೆ. ಅವರ ಆಹಾರವನ್ನು ಕಡಿಮೆ ಎಣ್ಣೆ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಮನೆಯ ಶೈಲಿಯ ಚಿಕನ್ ಕರಿ, ಸ್ಟಿರ್ ಫ್ರೈ ತರಕಾರಿಗಳು, ಮಟನ್, ಕೀಮಾ, ಮೀನು ಇತ್ಯಾದಿಗಳು ಮೆನುವಿನಲ್ಲಿವೆ.
LPG ಇಲ್ಲದೆ ಬೇಯಿಸಲಾಗುತ್ತೆ ಆಹಾರ
ಎಲ್ಪಿಜಿಗೆ ಅನುಮತಿ ಇಲ್ಲದ ಕಾರಣ, ಅದನ್ನು ಅಡುಗೆಗೆ ಬಳಸಲಾಗುವುದಿಲ್ಲ ಎಂದು ಅಶಯ್ ದೇಸಾಯಿ ಹೇಳಿದ್ದಾರೆ. ಅದಕ್ಕಾಗಿಯೇ ತಂಡದ ಆಹಾರ ಟ್ರಕ್ LPG ಇಲ್ಲದೆ ಚಲಿಸುತ್ತದೆ. ಆಟಗಾರರ ಆಹಾರವನ್ನು ಇಂಡಕ್ಷನ್ ಮೇಲೆ ಬೇಯಿಸಲಾಗುತ್ತದೆ.