ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಜಾಮ್ನಗರದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆಕೆಯ ಸರಳತೆ ಎದ್ದು ಕಾಣುತ್ತಿದೆ. ಅಂದಹಾಗೆ ರಾಧಿಕಾ ಸ್ನೇಹಿತರ ಜೊತೆ ಕಾಲ ಕಳೆಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಅಂಬಾನಿ ಅವರ ಕುಟುಂಬದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತವೆಯೋ ಹೊರತು ಕಡಿಮೆಯಂತೂ ಆಗುವುದಿಲ್ಲ. ಅವರ ಬಗ್ಗೆ ಕ್ರೇಜ್ ಕೂಡ ನೆಕ್ಸ್ಟ್ ಲೆವೆಲ್ ನಲ್ಲಿಯೇ ಇದೆ. ಜನರು ಅವರ ಸ್ಟೈಲ್ ಅನ್ನು ಫಾಲೋ ಮಾಡುತ್ತಾರೆ. ಅಂಬಾನಿ ಕುಟುಂಬದ ಸೊಸೆಯಂದಿರು ಮತ್ತು ಮಕ್ಕಳು ಸಹ ಯಾವ ಫ್ಯಾಷನ್ ಐಕಾನ್ಗಳಿಗಿಂತ ಕಡಿಮೆಯೇನಿಲ್ಲ. ಪ್ರತಿ ಬಾರಿ ಅವರನ್ನು ನೋಡಿದಾಗಲೆಲ್ಲಾ ಬಹಳ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ ಬಿಡಿ. ಆದರೆ ಇತ್ತೀಚೆಗೆ ರಾಧಿಕಾ ಅವರ ಸಖತ್ ಸಿಂಪಲ್ ಅವತಾರ ನೋಡಿದ ಮೇಲಂತೂ ಜನರು ಮತ್ತೆ ಮತ್ತೆ ಇಷ್ಟಪಡುತ್ತಿದ್ದಾರೆ. ರಾಧಿಕಾ ಮರ್ಚೆಂಟ್ ಅವರ ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅವರ ಸಿಂಪಲ್ ಲುಕ್ಗೆ ಯಾರಾದರೂ ಫಿದಾ ಆಗದೆ ಇರಲಾರರು.
ಮತ್ತೆ ಮನ ಗೆದ್ದ ರಾಧಿಕಾ
ಅನಂತ್ ಅಂಬಾನಿ ಜಾಮ್ನಗರದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದು ನಿಮಗೆಲ್ಲಾ ಗೊತ್ತಿರುವುದೇ. ರಾಧಿಕಾ ಕೂಡ ಅನಂತ್ ಅಂಬಾನಿಯೊಂದಿಗೆ ವಂತಾರದಿಂದ ಜಾಮ್ನಗರ ಮಾಲ್ನ ಕೆಲಸ ನೋಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಧಿಕಾ ಮರ್ಚೆಂಟ್ ಕೂಡ ಜಾಮ್ನಗರದಲ್ಲಿದ್ದಾರೆ. ಹಾಗಾಗಿ ರಾಧಿಕಾ ತನ್ನ ಸ್ನೇಹಿತರೊಂದಿಗೆ ಜಾಮ್ನಗರ ಮಾಲ್ನಲ್ಲಿ ಸುತ್ತಾಡುತ್ತಿದ್ದರು. ರಾಧಿಕಾ ಮರ್ಚೆಂಟ್ ನೀಲಿ ಬಣ್ಣದ ಡೆನಿಮ್ ಮತ್ತು ಬಿಳಿ ಬಣ್ಣದ ಟಿ-ಶರ್ಟ್ ಜೊತೆಗೆ ಬೀಜ್ ಜಾಕೆಟ್ ಧರಿಸಿದ್ದಾರೆ. ಯಾವುದೇ ಮೇಕಪ್ ಇಲ್ಲದೆಯೂ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈ ಸಮಯದಲ್ಲಿ ಸ್ನೇಹಿತರ ಜೊತೆ ಲವಲವಿಕೆಯಿಂದ ಹರಟೆ ಹೊಡೆಯುವುದನ್ನು ಕಾಣಬಹುದು. ಜೊತೆಗೆ ತನ್ನ ಕೂದಲನ್ನು ಸರಿಮಾಡಿಕೊಳ್ಳುತ್ತಾ ನಡೆಯುತ್ತಿರುವುದು ಕಂಡುಬರುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಸರಳತೆ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟು ದೊಡ್ಡ ಕುಟುಂಬದ ಸೊಸೆಯಾದ ನಂತರವೂ ಆಕೆಯ ಮುಗ್ಧತೆ ಹಾಗೇ ಉಳಿದಿದೆ ಎನ್ನುತ್ತಿದ್ದಾರೆ ಹಲವರು. ಅಷ್ಟೇ ಅಲ್ಲ, ರಾಧಿಕಾ ಅವರ ಈ ಟಾಮ್ ಬಾಯ್ ಲುಕ್ ಅನ್ನು ಅನೇಕರು ಇಷ್ಟಪಡುತ್ತಿದ್ದಾರೆ. ಪಾಶ್ಚಿಮಾತ್ಯ ಅಥವಾ ಭಾರತೀಯ ಡ್ರೆಸ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಧಿಕಾ ಮರ್ಚೆಂಟ್ ಈ ರೀತಿಯ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಸದ್ಯ ರಾಧಿಕಾ ಅವರ ಈ ಲುಕ್ ನೋಡಿದ ಮೇಲೆ ಬಳಕೆದಾರರು ‘ಆಕೆ ಯಾವಾಗಲೂ ಶಾಪಿಂಗ್ ಮತ್ತು ಪಾರ್ಟಿ ಮಾಡುತ್ತಾರೆ’, ‘ವ್ಹಾವ್, ಈ ಲುಕ್ ಸರ್ಪ್ರೈಸಿಂಗ್ ಆಗಿದೆʼ ‘ಇಷ್ಟು ಹಣವಿದ್ದರೂ ಅಷ್ಟು ಸರಳವಾಗಿರುವುದು ಸುಲಭವಲ್ಲ’ , ‘ರಾಧಿಕಾ ಯಾವಾಗಲೂ ತನ್ನ ಸರಳತೆಯಿಂದ ಹೃದಯವನ್ನು ಗೆಲ್ಲುತ್ತಾರೆʼ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.