ರೈಲ್ವೆ ನೇಮಕಾತಿ ಮಂಡಳಿ (RRB) 9970 ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 12 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಯನ್ನು ಇಲ್ಲಿ ಓದಿ.
ಸರ್ಕಾರಿ ಉದ್ಯೋಗ ಪಡೆಯಲು ತಯಾರಿ ನಡೆಸುತ್ತಿರುವ ಯುವಕರಿಗೆ ಇಲ್ಲಿದೆ ಶುಭ ಸುದ್ದಿ. ರೈಲ್ವೆ ನೇಮಕಾತಿ ಮಂಡಳಿ (RRB) ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಬಂಪರ್ ನೇಮಕ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಭಿಯಾನದಡಿಯಲ್ಲಿ, ದೇಶಾದ್ಯಂತ ಒಟ್ಟು 9970 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 12, 2025 ರಂದು ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಆಸಕ್ತ ಅಭ್ಯರ್ಥಿಗಳು ಮೇ 11, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ, ಇದರಿಂದ ನಂತರ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಬಹುದು.
ಅರ್ಹತೆ ಮತ್ತು ವಯಸ್ಸಿನ ಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 10 ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಪದವಿ ಪಡೆದವರು ಸಹ ಇದಕ್ಕೆ ಅರ್ಹರು. ಅರ್ಜಿದಾರರ ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಅರ್ಜಿ ಶುಲ್ಕ ಮಾಹಿತಿ
ಸಾಮಾನ್ಯ ವರ್ಗ (GEN)-500 ರೂ.(ಸಿಬಿಟಿ-1 ಪರೀಕ್ಷೆಗೆ ಹಾಜರಾದರೆ 400 ರೂ. ಮರುಪಾವತಿಸಲಾಗುತ್ತದೆ)
ಒಬಿಸಿ/ಎಸ್ಸಿ/ಎಸ್ಟಿ/ಮಹಿಳೆ/ವಿಶೇಷಚೇತನ –250 ರೂ. (ಸಿಬಿಟಿ-1 ಪರೀಕ್ಷೆಗೆ ಹಾಜರಾದರೆ ಪೂರ್ಣ ಮೊತ್ತವನ್ನು ಮರುಪಾವತಿಸಲಾಗುತ್ತದೆ)
Also Read: “ರೀಲ್ಸ್ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್
ಈ ರೀತಿ ಅಪ್ಲೈ ಮಾಡಿ
- ಅಧಿಕೃತ ವೆಬ್ಸೈಟ್ rrbapply.gov.in ಗೆ ಭೇಟಿ ನೀಡಿ.
- “RRB ALP ನೇಮಕಾತಿ 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ವಿವರಗಳನ್ನು ಸಲ್ಲಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ
- ಅಂತಿಮ ಸಲ್ಲಿಕೆಯ ನಂತರ, ಅರ್ಜಿಯ ಪ್ರತಿಯನ್ನು ಸೇವ್ ಮಾಡಿಕೊಳ್ಳಿ.
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯಡಿಯಲ್ಲಿ ಆಯ್ಕೆಯನ್ನು 5 ಹಂತಗಳಲ್ಲಿ ಮಾಡಲಾಗುತ್ತದೆ.
- CBT-1 (ಪ್ರಾಥಮಿಕ ಪರೀಕ್ಷೆ)
- CBT-2 (ಮುಖ್ಯ ಪರೀಕ್ಷೆ)
- CBAT (ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಈ ಎಲ್ಲಾ ಹಂತಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಸಂಬಳವೆಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 19,900 ರೂ.ಗಳ ಆರಂಭಿಕ ವೇತನ ದೊರೆಯಲಿದ್ದು, ಜೊತೆಗೆ ಇತರ ರೈಲ್ವೆ ಸೌಲಭ್ಯಗಳನ್ನು ಸಹ ನೀಡಲಾಗುವುದು. ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ಗೆ ಆರಂಭದಲ್ಲಿ 7ನೇ ವೇತನ ಆಯೋಗದ ಪ್ರಕಾರ ಲೆವೆಲ್ -2 ಅಡಿಯಲ್ಲಿ ಸಂಬಳ ನೀಡಲಾಗುತ್ತದೆ. ಇದರ ಪ್ರಕಾರ 19000-21000 ರೂ. ವೇತನವನ್ನು ಪಡೆಯುತ್ತಾರೆ. ಟಿಎ, ಡಿಎ, ಎಚ್ಆರ್ಎ ಇವುಗಳನ್ನು ಸೇರಿಸಿದರೆ ಈ ವೇತನವು 25000 ರೂ.ಗಳಿಂದ 30000 ರೂ.ಗಳವರೆಗೆ ಇರುತ್ತದೆ.