ವಿಶೇಷವಾಗಿ ಸೌತ್ ಸ್ಟಾರ್ಸ್ ತಮ್ಮ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಾರೆ. ಅಭಿಮಾನಿಗಳು ಸಹ ಸ್ಟಾರ್ಸ್ಗಳಿಗಾಗಿ ಎಲ್ಲಾ ಮಿತಿಗಳನ್ನು ದಾಟಿರುವುದು ಉಂಟು. ಈಗಾಗಲೇ ನಿಮಗೆಲ್ಲಾ ತಿಳಿದಿರುವ ಹಾಗೆ ದಕ್ಷಿಣ ಭಾರತದ ಹಲವು ತಾರೆಯರ ಹೆಸರಿನಲ್ಲಿ ದೇವಸ್ಥಾನಗಳಿವೆ. ಅಷ್ಟೇ ಏಕೆ ನೆಚ್ಚಿನ ನಾಯಕನ ಸಿನಿಮಾ ಬಿಡುಗಡೆಯಾದಾಗ ಅವರು ತೋರುವ ಉತ್ಸಾಹ ಅಚ್ಚರಿ ಮೂಡಿಸುತ್ತದೆ. ಅಂದಹಾಗೆ ಇಂದು ನಾವು ನಿಮಗೆ ಸೌತ್ ಸ್ಟಾರ್ ಒಬ್ಬರ ಕಥೆಯನ್ನು ಹೇಳುತ್ತೇವೆ. ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅವರು ಅಭಿಮಾನಿಯ ಕುಟುಂಬವನ್ನು ದತ್ತು ಪಡೆದದ್ದು ಆ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ ಸ್ಟಾರ್ ನಟನ ಅಭಿಮಾನಿ ಸಿನಿಮಾವೊಂದರ ಹಾಡು ಬಿಡುಗಡೆ ಸಮಾರಂಭದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಹಾಗಾಗಿ ಅವರು ಅದರ ಜವಾಬ್ದಾರಿಯನ್ನು ತೆಗೆದುಕೊಂಡು ಇಡೀ ಕುಟುಂಬವನ್ನು ದತ್ತು ಪಡೆದರು. ಆ ಸ್ಟಾರ್ ಯಾರೆಂದು ತಿಳಿಯೋಣ ಬನ್ನಿ…
ದಕ್ಷಿಣ ಚಿತ್ರರಂಗದ ತಾರೆಯರು ತಮ್ಮ ಅಭಿಮಾನಿಗಳೊಂದಿಗೆ ಯಾವಾಗಲೂ ಒಡನಾಟ ಹೊಂದಿರುತ್ತಾರೆ. ಅವರು ಆಗಾಗ್ಗೆ ಅವರೊಂದಿಗೆ ಮಾತನಾಡುವುದನ್ನು ಕಾಣಬಹುದು. ಇನ್ನು ಆರ್ಆರ್ಆರ್ ಸ್ಟಾರ್ ಜೂನಿಯರ್ ಎನ್ಟಿಆರ್ಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿ ಬಳಗವಿರುವ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಜೂನಿಯರ್ ಎನ್ಟಿಆರ್ ಅಭಿಮಾನಿಗಳೊಂದಿಗೆ ಸದಾ ಹತ್ತಿರವಾಗಿರುತ್ತಾರೆ. ಜೂನಿಯರ್ ಎನ್ಟಿಆರ್ ಅವರ ಯಾವುದೇ ಸಮಾರಂಭ ಆದರೂ ಅಲ್ಲಿ ಅಭಿಮಾನಿಗಳ ದಂಡೇ ಇರುತ್ತದೆ.
Also Read: ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್
ಅಂತೆಯೇ ಜೂನಿಯರ್ ಎನ್ಟಿಆರ್ ಅಭಿನಯದ ‘ಬಾದ್ಶಾ’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿಯೂ ಪ್ರತಿ ಬಾರಿಯಂತೆ ಅಪಾರ ಜನಸ್ತೋಮ ಆಗಮಿಸಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಅಭಿಮಾನಿಯೊಬ್ಬರು ಸಾವನ್ನಪ್ಪಿದರು. ಈ ಘಟನೆಯ ನಂತರ ಜೂನಿಯರ್ ಎನ್ಟಿಆರ್ ಬಹಳ ನೊಂದುಕೊಂಡರು. ನಂತರ ಅಭಿಮಾನಿಯ ಕುಟುಂಬವನ್ನು ಭೇಟಿ ಮಾಡಿದರು. ಅಷ್ಟೇ ಅಲ್ಲ, 5 ಲಕ್ಷ ರೂಪಾಯಿಗಳನ್ನು ನೀಡಿ, ಅವರ ಇಡೀ ಕುಟುಂಬವನ್ನು ದತ್ತು ಪಡೆದರು. ಇನ್ನೂ ಅವರು ಆ ಕುಟುಂಬದೊಂದಿಗೆ ಇದ್ದಾರೆ. ಇಡೀ ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ.
2004 ರಲ್ಲಿಯೂ ಜೂನಿಯರ್ ಎನ್ಟಿಆರ್ ನಟನೆಯ ‘ಆಂಧ್ರವಾಲ’ ರಿಲೀಸ್ ಆದಾಗ ಈ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ 10 ಲಕ್ಷ ಜನರು ಭಾಗವಹಿಸಿದ್ದರು. ಇದಕ್ಕಾಗಿ ಸರ್ಕಾರವು ವಿಶೇಷ 9 ರೈಲುಗಳನ್ನು ಓಡಿಸಿತ್ತು. ಅಷ್ಟೇ ಅಲ್ಲ, ಎನ್ಟಿಆರ್ ತನ್ನ ಮದುವೆ ಸಮಾರಂಭದಲ್ಲಿ ಸುಮಾರು 12 ಸಾವಿರ ಅಭಿಮಾನಿಗಳನ್ನು ಆಹ್ವಾನಿಸಿದ್ದರು.