Sukanya Samriddhi Yojana Benefits: ಹೆಣ್ಣು ಮಗು ಹುಟ್ಟಿದ ತಕ್ಷಣ ಆಕೆಯ ವಿದ್ಯಾಭ್ಯಾಸ, ಮದುವೆಯ ಖರ್ಚಿನ ಬಗ್ಗೆ ಹೆತ್ತವರು ಚಿಂತಿತರಾಗುವ ಕಾಲವೊಂದಿತ್ತು. ಆದ್ದರಿಂದಲೇ ಹೆಣ್ಣು ಮಕ್ಕಳ ಭವಿಷ್ಯದ ಚಿಂತೆ ಹೋಗಲಾಡಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂತಹ ಒಂದು ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana).
ಇದು ಸಣ್ಣ ಉಳಿತಾಯ ಯೋಜನೆಯಾಗಿದ್ದು, ತೆರಿಗೆ ಉಳಿತಾಯದ ಜೊತೆಗೆ ಒಳ್ಳೆಯ ಲಾಭವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿ ವರ್ಷ 1 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ, ನಿಮ್ಮ ಮಗಳು 21 ವರ್ಷ ವಯಸ್ಸಿಗೆ ಬರುವ ಹೊತ್ತಿಗೆ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ವಿವರಗಳನ್ನು ತಿಳಿಯೋಣ ಬನ್ನಿ…
ಬಡ್ಡಿಯ ಲಾಭ (Sukanya Samriddhi Yojana)
ಸರ್ಕಾರವು ಪ್ರಸ್ತುತ ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿ ಮೇಲೆ ಶೇಕಡ 8.2 ರ ಬಡ್ಡಿದರವನ್ನು ನೀಡುತ್ತಿದೆ. ಇತ್ತೀಚೆಗೆ ಸರ್ಕಾರವು ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆಯಡಿ (SSY) ಪ್ರತಿ ಖಾತೆದಾರರು ವಾರ್ಷಿಕ ಆಧಾರದ ಮೇಲೆ 250 ರೂ.ರಿಂದ ರೂ 1.50 ರೂ. ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ, ಖಾತೆದಾರರು ಠೇವಣಿಗಳ ಮೇಲಿನ ಬಡ್ಡಿ ದರದ ಲಾಭವನ್ನು ಪಡೆಯುತ್ತಾರೆ. ಹುಡುಗಿ ತನ್ನ 15 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬೇಕು. ಇದರ ನಂತರ ಹಣವು 21 ವರ್ಷ ವಯಸ್ಸಿನವರೆಗೆ ಲಾಕ್ ಆಗಿರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ-ನಿಮಗೆ ಎಷ್ಟು ಲಾಭ?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಂತರ 15 ವರ್ಷ ವಯಸ್ಸಿನ ವೇಳೆಗೆ ಹುಡುಗಿಯ ಖಾತೆಯಲ್ಲಿ ಒಟ್ಟು 15 ಲಕ್ಷ ರೂ ಇರುತ್ತದೆ. SSY ಕ್ಯಾಲ್ಕುಲೇಟರ್ ಪ್ರಕಾರ, ಹುಡುಗಿಗೆ 21 ವರ್ಷ ತುಂಬಿದಾಗ, ಆಕೆಗೆ ಒಟ್ಟು 46,18,385 ರೂ. ಸಿಗುತ್ತದೆ. ಅಂದರೆ ಇದರಲ್ಲಿ ಹೂಡಿಕೆ ಮಾಡಿದ್ದು 15 ಲಕ್ಷ ರೂ. ಮತ್ತು 31,18.385 ರೂ.ಗಳನ್ನು ಬಡ್ಡಿಯಾಗಿ ಪಡೆಯಲಾಗುತ್ತದೆ.
ಇತರ ವಿವರಗಳನ್ನು ತಿಳಿಯಿರಿ…
Sukanya Samriddhi Yojana Benefits: ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀವು 1.50 ರೂ. ಲಕ್ಷದವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಇದರೊಂದಿಗೆ ಮೆಚ್ಯೂರಿಟಿಯಲ್ಲಿ ಖಾತೆದಾರರು ಪಡೆಯುವ ದುಡ್ಡು ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರ 2015 ರಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಠೇವಣಿ ಮಾಡಿದ ಮೊತ್ತವನ್ನು ಮುಂಚಿತವಾಗಿ ಹಿಂಪಡೆಯಲು ವಿಶೇಷ ಸಂದರ್ಭಗಳಲ್ಲಿ ಅನುಮತಿ ನೀಡಲಾಗುತ್ತದೆ. ಹುಡುಗಿಗೆ 18 ವರ್ಷ ತುಂಬಿದ ನಂತರ, ತನ್ನ ಅಧ್ಯಯನಕ್ಕಾಗಿ ಖಾತೆಯಿಂದ ಶೇಕಡ 50 ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಖಾತೆ ತೆರೆದ ನಂತರ, ತುರ್ತು ಸಂದರ್ಭದಲ್ಲಿ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.