ಹೇಗಿದ್ದರೂ ಈಗ ಮಳೆಗಾಲ. ಪ್ರತಿ ಮೂಲೆಯಲ್ಲಿ ಸೊಳ್ಳೆಗಳ ಹಿಂಡನ್ನು ನೀವು ಕಾಣಬಹುದು. ಆದರೆ ನೀವು ಎಂದಾದರೂ ಗಮನಿಸಿದ್ದೀರಾ…?, ಅವುಗಳು ಕೆಲವು ಮನುಷ್ಯರನ್ನು ಮಾತ್ರ ಹೆಚ್ಚು ಕಚ್ಚುತ್ತವೆ. ಆಗ ಈ ಜನ ಸೊಳ್ಳೆಗಳನ್ನು ಆಯಸ್ಕಾಂತದಂತೆ ತಮ್ಮೆಡೆಗೆ ಸೆಳೆಯುತ್ತಿದ್ದಾರೆಯೇನೋ ಎನಿಸುತ್ತದೆ. ಈ ವ್ಯಕ್ತಿಗಳು ಯಾರು?, ಇದಕ್ಕೆ ಕಾರಣವೇನೆಂದು ತಿಳಿಯಿರಿ…
O+ ರಕ್ತದ ಗುಂಪಿನ ಜನರು
O+ ರಕ್ತದ ಗುಂಪಿನ ಜನರ ಕಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಏಕೆಂದರೆ ಈ ರಕ್ತದ ಗುಂಪಿನ ಜನರ ಚಯಾಪಚಯ ದರವು ತುಂಬಾ ಹೆಚ್ಚಾಗಿರುತ್ತದೆ. ಅದಲ್ಲದೆ ಸೊಳ್ಳೆಗಳಿಗೂ ತಮ್ಮ ಬೆಳವಣಿಗೆಗೆ ಈ ರಕ್ತ ಬೇಕು.
ಇಂಗಾಲದ ಡೈಆಕ್ಸೈಡ್ ವಾಸನೆ
ರಾತ್ರಿ ಮಲಗಿದಾಗ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಏಕೆಂದರೆ ಈ ಸಮಯದಲ್ಲಿ ಮನುಷ್ಯರು ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಾರೆ. ಇಂಗಾಲದ ಡೈಆಕ್ಸೈಡ್ ವಾಸನೆಯು ಸೊಳ್ಳೆಗಳನ್ನು ವೇಗವಾಗಿ ಆಕರ್ಷಿಸುತ್ತದೆ. ಇದಲ್ಲದೆ, ಸೊಳ್ಳೆಗಳು ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಸಿಡ್ ಮತ್ತು ಅಮೋನಿಯಾದಿಂದ ಕೂಡ ಆಕರ್ಷಿತವಾಗುತ್ತವೆ.
ಗಾಢ ಬಣ್ಣ
ಜನರು ಕಪ್ಪು, ನೀಲಿ ಮತ್ತು ಕಡು ನೀಲಿ ಬಣ್ಣದಂತಹ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಸೊಳ್ಳೆಗಳು ಹೆಚ್ಚಾಗಿ ಆ ಬಣ್ಣದ ಕಡೆಗೆ ಆಕರ್ಷಿತವಾಗುತ್ತವೆ.
ಕಡಿಮೆ ಮಾತನಾಡುವ ಜನರು
ಕಡಿಮೆ ಮಾತನಾಡುವ ಮತ್ತು ಮೌನವಾಗಿರುವ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಏಕೆಂದರೆ ಮೌನವಾಗಿ ಉಳಿಯುವ ಮೂಲಕ ಅವರು ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಾರೆ.
ಅತಿಯಾದ ದೇಹದ ವಾಸನೆ
ದೇಹದ ವಾಸನೆಯಿಂದಾಗಿಯೂ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಅತಿಯಾದ ದೇಹದ ವಾಸನೆಯ ಸಮಸ್ಯೆ ಇರುವವರು ಅಥವಾ ಹೆಚ್ಚು ಸುಗಂಧ ದ್ರವ್ಯವನ್ನು ಬಳಸುವವರೂ ಸೊಳ್ಳೆಗಳಿಂದ ಹೆಚ್ಚು ಕಚ್ಚಿಸಿಕೊಳ್ಳಬಹುದು.
Read Also: ಈ ಹಸಿರು ಎಲೆಗಳು ಸೊಳ್ಳೆಗಳಿಂದ ರಕ್ಷಣೆ ನೀಡುವುದಲ್ಲದೆ ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ
ಹಾಗಾದ್ರೆ ಏನು ಮಾಡಬೇಕು?
ಫುಲ್ ಸ್ಲೀವ್ಸ್ ಬಟ್ಟೆಗಳನ್ನು ಧರಿಸಿ
ಫುಲ್ ಸ್ಲೀವ್ಸ್ ಬಟ್ಟೆಗಳನ್ನು ಧರಿಸುವುದರಿಂದ ಸೊಳ್ಳೆ ಕಡಿತವನ್ನು ತಡೆಯಬಹುದು. ವಿಶೇಷವಾಗಿ ನೀವು ಉದ್ಯಾನವನದಂತಹ ತೆರೆದ ಸ್ಥಳದಲ್ಲಿ ಅಥವಾ ಹೊರಗಿರುವಾಗ.
ನೀರು ನಿಲ್ಲುವುದಕ್ಕೆ ಅವಕಾಶ ನೀಡಬೇಡಿ
ಮಳೆಗಾಲದಲ್ಲಿ ಹೊರ ಭಾಗದಲ್ಲಿರುವ ಖಾಲಿ ಪಾತ್ರೆಗಳು, ಪೆಟ್ಟಿಗೆಗಳು ಅಥವಾ ಮಡಕೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ತುಂಬಿದ್ದರೆ ತಕ್ಷಣ ಖಾಲಿ ಮಾಡಿ.
ಕೂಲರ್ ಸ್ವಚ್ಛಗೊಳಿಸುವುದು
ನಿಮ್ಮ ಮನೆಯಲ್ಲಿ ಕೂಲರ್ ಇದ್ದರೆ ಕಾಲಕಾಲಕ್ಕೆ ಕೂಲರ್ ಅನ್ನು ಸ್ವಚ್ಛಗೊಳಿಸಿ. ಅದರ ನೀರನ್ನು ಬದಲಾಯಿಸುತ್ತಲೇ ಇರಿ ಮತ್ತು ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸುರಕ್ಷಿತಗೊಳಿಸಿ.
ಸೊಳ್ಳೆ ನಿವಾರಕ ಕ್ರೀಮ್ಗಳು
ಇಂತಹ ಹಲವು ಕ್ರೀಮ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೀವು ಹಚ್ಚಿಕೊಂಡು ಹೊರಗೆ ಹೋಗಬಹುದು ಅಥವಾ ಕ್ರೀಮ್ ಅನ್ನು ನೀವೇ ಖರೀದಿಸುವ ಬದಲು ವೈದ್ಯರ ಸಲಹೆಯ ಮೇರೆಗೆ ಬಳಸಲು ಪ್ರಯತ್ನಿಸಿ.
ಸೊಳ್ಳೆ ಕಚ್ಚಿದರೆ ಏನು ಮಾಡಬೇಕು?
ನೀವು ಕೆಲವು ಕಾರಣಗಳಿಂದ ಸೊಳ್ಳೆಯಿಂದ ಕಚ್ಚಿಸಿಕೊಂಡಿದ್ದರೂ ಸಹ, ಕೆಲವು ವಿಷಯಗಳನ್ನು ನೆನಪಿನಲ್ಲಿಡಿ, ಅವುಗಳೆಂದರೆ…
ರೋಗನಿರೋಧಕ ಶಕ್ತಿ
ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ನಟ್ಸ್ ಸೇವಿಸಿ. ಎಲ್ಲಕ್ಕಿಂತ ಮುಖ್ಯವಾಗಿ ನೀವು ಏನೇ ತಿಂದರೂ ಅದನ್ನು ಶುಚಿಯಾಗಿ ಬೇಯಿಸಿ ತೊಳೆದು ತಿನ್ನಿ. ಈ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
ಗಿಡಮೂಲಿಕೆ ಚಹಾ
ನೀವು ಇದನ್ನು ಮನೆಯಲ್ಲಿಯೇ ಮಾಡಬಹುದು. ನೀರಿಗೆ ಶುಂಠಿ, ಕರಿಮೆಣಸು, ಲವಂಗ, ದಾಲ್ಚಿನ್ನಿ ಮತ್ತು ತುಳಸಿ ಎಲೆಗಳನ್ನು ಮಿಶ್ರಣ ಮಾಡಿ, ಚೆನ್ನಾಗಿ ಕುದಿಸಿ. ಕೆಲವು ದಿನಗಳವರೆಗೆ ಪ್ರತಿದಿನ 1 ಕಪ್ ಕುಡಿಯಿರಿ.
ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ತಜ್ಞರಿಂದ ಸಲಹೆ ಪಡೆಯಿರಿ.