By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಪತಿಯ ನಿಧನದ ನಂತರ ಭರವಸೆ ಕಳೆದುಕೊಳ್ಳದ ಮಹಿಳೆ; ಇಂದು ಇವರ ಸಂಪಾದನೆ ತಿಂಗಳಿಗೆ ₹ 30 ಲಕ್ಷ, ಉದ್ಯಮ ಆರಂಭವಾಗಿದ್ದೇ ಈ ಘಟನೆಯ ನಂತರ…!
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಪತಿಯ ನಿಧನದ ನಂತರ ಭರವಸೆ ಕಳೆದುಕೊಳ್ಳದ ಮಹಿಳೆ; ಇಂದು ಇವರ ಸಂಪಾದನೆ ತಿಂಗಳಿಗೆ ₹ 30 ಲಕ್ಷ, ಉದ್ಯಮ ಆರಂಭವಾಗಿದ್ದೇ ಈ ಘಟನೆಯ ನಂತರ…!

Homeಸಾಧಕರ ಕತೆ

ಪತಿಯ ನಿಧನದ ನಂತರ ಭರವಸೆ ಕಳೆದುಕೊಳ್ಳದ ಮಹಿಳೆ; ಇಂದು ಇವರ ಸಂಪಾದನೆ ತಿಂಗಳಿಗೆ ₹ 30 ಲಕ್ಷ, ಉದ್ಯಮ ಆರಂಭವಾಗಿದ್ದೇ ಈ ಘಟನೆಯ ನಂತರ…!

Sky Kannada News
Last updated: February 24, 2025 12:07 pm
By Sky Kannada News
2 months ago
Share
3 Min Read
SHARE

ಸಾಧಕರ ಜೀವನವನ್ನು ನೋಡಿದಾಗ ಅವರು ಅದೆಂಥಾ ಕಷ್ಟದ ಸಂದರ್ಭ ಎದುರಾದಾಗಲೂ ಎದೆಗುಂದದೆ ಸತತವಾಗಿ ಹೋರಾಡುವ ಮೂಲಕ ಸಂಕಷ್ಟದಿಂದ ಹೊರಬಂದು ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಿರುವುದನ್ನು ನಾವೆಲ್ಲಾ ಕೇಳಿದ್ದೇವೆ ಅಥವಾ ನೋಡಿದ್ದೇವೆ ಅಲ್ಲವೇ… ಇದೇ ತರಹ ತಮಿಳುನಾಡಿನ ಮಹಿಳೆಯೊಬ್ಬರು ಪತಿಯ ಮರಣದ ನಂತರ ಕುಟುಂಬದ ಜವಬ್ದಾರಿಯನ್ನು ನೋಡಿಕೊಂಡಿದ್ದು, ಮಾತ್ರವಲ್ಲದೆ ಒಂದೊಳ್ಳೆಯ ಬ್ಯುಸಿನೆಸ್‌ ಪ್ರಾರಂಭಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು ಅವರ ಹೆಸರು ಕೋಕಿಲಾ. ಮೂಲತಃ ತಮಿಳುನಾಡಿನವರು. ಇಂದು ಅವರು ತಾವು ಪ್ರಾರಂಭಿಸಿದ ಉದ್ಯಮದಿಂದ ಪ್ರತಿ ತಿಂಗಳು 20-30 ಲಕ್ಷ ರೂ. ಗಳಿಸುತ್ತಾರೆ. ಹಾಗಾದರೆ ಬನ್ನಿ…ಇಂದು ಅವರ ಸ್ಫೂರ್ತಿದಾಯಕ ಕಥೆಯನ್ನು ತಿಳಿಯೋಣ…

Contents
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೋಕಿಲಾ ಕುಟುಂಬಹಗಲು ರಾತ್ರಿ ಎನ್ನದೆ ದುಡಿದ ಕೋಕಿಲಾತಿರುವು ನೀಡಿದ ಘಟನೆಆರಂಭ ಸಲೀಸಾಗಿ ಇರಲಿಲ್ಲ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೋಕಿಲಾ ಕುಟುಂಬ

ಕೋಕಿಲಾ ಕೆ ಅವರು ತಮಿಳುನಾಡಿನ ವಾಲಾಜಪೇಟೆಯ ನಿವಾಸಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕೋಕಿಲಾ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದು ನಂತರ ಸರ್ಕಾರಿ ಉದ್ಯೋಗವನ್ನು ಪಡೆದರು. ಕೀಟನಾಶಕ ವಿತರಕನನ್ನು ಮದುವೆಯಾಗಿದ್ದ  ಕೋಕಿಲಾ ಮುಂದೆ ತಮ್ಮ ಜೀವನದಲ್ಲಿ ಇಂತಹದೊಂದು ಘಟನೆ ಎದುರಾಗುತ್ತದೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ.  ಏಕೆಂದರೆ ಕೇವಲ 35 ನೇ ವಯಸ್ಸಿಗೆ ಅವರ ಪತಿಗೆ ಶ್ವಾಸಕೋಶದಲ್ಲಿ ಗೆಡ್ಡೆ ಬೆಳೆಯಿತು, ಈ ಗೆಡ್ಡೆಯು ಕೀಟನಾಶಕಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಮತ್ತು ಧೂಮಪಾನದ ಪರಿಣಾಮವಾಗಿ ಸಂಭವಿಸುತ್ತದೆ. ಅವರ ಪತಿಗೆ ಏಳು ವರ್ಷಗಳ ಕಾಲ ಚಿಕಿತ್ಸೆ ನೀಡಲಾಯಿತು. ಕೊನೆಗೆ ಅವರು 42 ನೇ ವಯಸ್ಸಿನಲ್ಲಿ ನಿಧನರಾದರು. ಆಗ ಕೋಕಿಲಾ ಅವರು ಮೂವರು ಗಂಡು ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಈಗಾಗಲೇ ಪತಿಯ ವೈದ್ಯಕೀಯ ವೆಚ್ಚಗಳು ಅವರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ್ದವು.

ಹಗಲು ರಾತ್ರಿ ಎನ್ನದೆ ದುಡಿದ ಕೋಕಿಲಾ

Also Read: 4 ವರ್ಷ ರಾತ್ರಿ ಊಟವಿಲ್ಲ, ಆತ್ಮಹ*ತ್ಯೆಗೆ ಯತ್ನ…ಆದರೀಗ ಮಾಡೆಲಿಂಗ್‌ ಲೋಕದಲ್ಲಿ ಮಿಂಚುತ್ತಿದ್ದಾರೆ ಸಿಗರೇಟ್‌, ತಂಬಾಕು ಮಾರಾಟಗಾರನ ಪುತ್ರಿ

ಪತಿಯ ಮರಣದ ನಂತರ ಕೋಕಿಲಾಗೆ ತನ್ನ ಸರ್ಕಾರಿ ಕೆಲಸದಿಂದ ಬರುತ್ತಿದ್ದ ಸಂಬಳದಿಂದ ಮನೆ ನಡೆಸುವುದು ಕಷ್ಟಕರವಾಗುತ್ತಿತ್ತು. ಅವರು ತಮ್ಮ ಮೂವರು ಗಂಡು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ವೆಚ್ಚಗಳನ್ನು ಪೂರೈಸಲು ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದಿಸಲು ನಿರ್ಧರಿಸಿದರು. ಅವರ ವ್ಯಾಪಾರ ಪ್ರಯಾಣ ಪ್ರಾರಂಭವಾದದ್ದೇ ಇಲ್ಲಿಂದ. ಮರದ ಪೆಟ್ಟಿಗೆಗಳನ್ನು ಪೂರೈಸುವ ಕೆಲಸವನ್ನು ಪ್ರಾರಂಭಿಸಿದರು. ಇದು ಆಕೆಗೆ ಹೊಸತು. ಆದರೇನಂತೆ ಹಗಲು ಮತ್ತು ರಾತ್ರಿ ಕೋಕಿಲಾ ಹೋರಾಟ ಮುಂದುವರೆಯಿತು.

ತಿರುವು ನೀಡಿದ ಘಟನೆ

ಅನೇಕ ವರ್ಷಗಳ ಕಠಿಣ ಪರಿಶ್ರಮದ ನಂತರ ಕೋಕಿಲಾ ಅವರ ಮಗ ದೊಡ್ಡವನಾಗುತ್ತಾ ಬಂದರು. ಮಗ ತನ್ನ ಉತ್ತಮ ಸಂಬಳದ ಕೆಲಸವನ್ನು ತೊರೆದು ಕುಟುಂಬದ ವ್ಯವಹಾರವನ್ನು ಮುಂದುವರಿಸಲು ನಿರ್ಧರಿಸಿದರು. ಇದು ಅವರಿಗೆ ಒಂದು ದೊಡ್ಡ ತಿರುವು ನೀಡಿತು. ಹೇಗೆಂದರೆ ಒಂದು ದಿನ ಕೋಕಿಲಾ ಮಾರುಕಟ್ಟೆಯು ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಆಟಿಕೆಗಳಿಂದ ತುಂಬಿರುವುದನ್ನು ನೋಡಿದರು. ಇದು ಪರಿಸರ ಮತ್ತು ಮಕ್ಕಳ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿ ಅವರು ಮರದ ಆಟಿಕೆಗಳ ವ್ಯಾಪಾರವನ್ನು ಪ್ರಾರಂಭಿಸಲು ನಿರ್ಧರಿಸಿದರು.

ಆರಂಭ ಸಲೀಸಾಗಿ ಇರಲಿಲ್ಲ

ನಮಗೆಲ್ಲ ಗೊತ್ತಿರುವ ಹಾಗೆ ಮರದ ಆಟಿಕೆಗಳನ್ನು ತಯಾರಿಸುವುದು ಸುಲಭವಲ್ಲ. ಜೊತೆಗೆ ಸ್ವಲ್ಪ ದುಬಾರಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಆಟಿಕೆಗಳು ಅಗ್ಗವಾಗಿರುವುದರಿಂದ ಜನರು ಅವುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ ಕೋಕಿಲಾ ಕುಟುಂಬವು ಇದನ್ನೆಲ್ಲಾ ಅಳೆದು ತೂಗಿ ಸಂಪೂರ್ಣವಾಗಿ ವಿಭಿನ್ನವಾದ ತಂತ್ರವನ್ನು ಅಳವಡಿಸಿಕೊಂಡಿತು. ಅದೇನೆಂದರೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಟಿಕೆಗಳ ಮೇಲೆ ಕೇಂದ್ರೀಕರಣ. ಇದು ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಹೀಗೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮೂಲಕ ಸಾಮಾಜಿಕ ಬದಲಾವಣೆ ತರುವತ್ತ ಅಮ್ಮ-ಮಗ ಇಬ್ಬರು ಹೆಜ್ಜೆ ಇಟ್ಟರು. ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಆದರೆ ಕ್ರಮೇಣ ಅವರ ವ್ಯವಹಾರವು ಬೆಳೆಯಿತು.

ಇಂದು ಅವರ WoodBee Toys ಹೆಸರಿನ ಕಂಪನಿ 110 ಕ್ಕೂ ಹೆಚ್ಚು ಬಗೆಯ ಮರದ ಆಟಿಕೆಗಳನ್ನು ತಯಾರಿಸುತ್ತದೆ ಮತ್ತು ಪ್ರತಿ ತಿಂಗಳು 20-30 ಲಕ್ಷ ರೂ.ಗಳ ವಹಿವಾಟು ಹೊಂದಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ವಿಷಕಾರಿಯಲ್ಲದ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸುತ್ತದೆ.

 

 

You Might Also Like

ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್‌ ಹೇಳ್ತಾರೆ ನೋಡಿ…

ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು

ಶಾರುಖ್ ಧರಿಸಿರುವ ಈ ಜೀನ್ಸ್‌ ಪ್ಯಾಂಟ್ ಬೆಲೆ ಕೇಳಿ ಹೌಹಾರಿದ ನೆಟ್ಟಿಗರು..”ಕಿಂಗ್ ಈಸ್‌ ಆಲ್‌ವೇಸ್‌ ಕಿಂಗ್‌” ಎಂದ ಫ್ಯಾನ್ಸ್‌

ಅಷ್ಟಕ್ಕೂ ಹುಡುಗಿಯರು ಮುಖಕ್ಕೆ ಬೆಳ್ಳುಳ್ಳಿ ಉಜ್ಜುತ್ತಿರುವುದೇಕೆ?, ಸೋಶಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಹೊಸ ಟ್ರೆಂಡ್‌  

ನೀವಂದುಕೊಂಡ ಹಾಗೆ ಈ 10 ಫುಡ್‌ಗಳು ಸಸ್ಯಾಹಾರವೇ ಅಲ್ಲ…ಹಾಗಾದ್ರೆ ಏನು?

TAGGED:Motivational StoryskykannadaToysWomanWoodBee Toysಆಟಿಕೆಆಟಿಕೆ ಉದ್ಯಮಪ್ರೇರಣದಾಯಕ ಕಥೆಮಹಿಳೆಸ್ಫೂರ್ತಿದಾಯಕ ಕಥೆ
Share This Article
Facebook Email Print
Share
Previous Article ರಾಮಾಯಣ: ಸೀತಾ ಸ್ವಯಂವರದಲ್ಲಿ ರಾವಣನಿಗೆ ಶಿವನ ಬಿಲ್ಲು ಎತ್ತಲು ಸಾಧ್ಯವಾಗಲಿಲ್ಲ ಏಕೆ?
Next Article Benifits Of Face Steam: ವಾರಕ್ಕೊಮ್ಮೆ ಕೇವಲ ಐದು ನಿಮಿಷ ಸ್ಟೀಮ್‌ ತೆಗೆದುಕೊಂಡ್ರೆ ಸಿಗುತ್ತೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳು..
Leave a Comment

Leave a Reply Cancel reply

Your email address will not be published. Required fields are marked *

You Might Also Like

ನೀವು ಈ ದೇವಸ್ಥಾನಕ್ಕೆ 16 ಪ್ರದಕ್ಷಿಣೆ ಹಾಕಿದರೆ 21 ದಿನಗಳೊಳಗೆ ಶುಭ ಸುದ್ದಿ ಕೇಳುತ್ತೀರಿ…  

Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಜನಿಸಿದ ಜನರು ಶ್ರೀಮಂತರಾಗುತ್ತಾರೆ; ಹೀಗಿರುತ್ತೆ ಇವರ ಯಶಸ್ಸು, ಸ್ವಭಾವ..!

ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

31 ವರ್ಷಗಳ ನಂತರ ದಿವ್ಯಾ ಭಾರತಿ ಸಾ*ವಿನ ರಹಸ್ಯ ಬಯಲು.. ಸಂದರ್ಶನದಲ್ಲಿ ರಿವೀಲ್‌ ಮಾಡಿದ ಬಾಲಿವುಡ್ ನಟಿ!  

ಮಹಿಳೆಯರ ಜೀವನದ ಕುರಿತು ನಿರ್ಮಿಸಲಾದ ಈ ಸಿನಿಮಾಗಳನ್ನು ನೀವೊಮ್ಮೆ ನೋಡಲೇಬೇಕು…

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?