By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಅದಿತಿ ರಾವ್ ಹೈದರಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಮದುವೆಯಾಗುತ್ತಿರುವುದು ಏಕೆ ಗೊತ್ತಾ?, ಇಲ್ಲಿದೆ ನೋಡಿ ದೇಗುಲದ ವಿಶೇಷತೆ
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಅದಿತಿ ರಾವ್ ಹೈದರಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಮದುವೆಯಾಗುತ್ತಿರುವುದು ಏಕೆ ಗೊತ್ತಾ?, ಇಲ್ಲಿದೆ ನೋಡಿ ದೇಗುಲದ ವಿಶೇಷತೆ

Homeಮನರಂಜನೆ

ಅದಿತಿ ರಾವ್ ಹೈದರಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಮದುವೆಯಾಗುತ್ತಿರುವುದು ಏಕೆ ಗೊತ್ತಾ?, ಇಲ್ಲಿದೆ ನೋಡಿ ದೇಗುಲದ ವಿಶೇಷತೆ

Sky Kannada News
Last updated: September 5, 2024 12:04 pm
By Sky Kannada News
8 months ago
Share
2 Min Read
SHARE

Aditi Rao Hydari: ಬಾಲಿವುಡ್‌ನ ಸುಂದರ ನಟಿ ಅದಿತಿ ರಾವ್ ಹೈದರಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದಿತಿ ಸಿದ್ಧಾರ್ಥ್ ಅವರನ್ನು ಮದುವೆಯಾಗಲು ನಿರ್ಧರಿಸಿರುವುದು ಹಳೆಯ ವಿಚಾರ. ಕಳೆದ ವರ್ಷ ಮಾರ್ಚ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಇದೀಗ ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಅದಿತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇದನ್ನು ಕನ್‌ಫರ್ಮ್‌ ಮಾಡಿದ್ದಾರೆ. ಹೊಸ ವಿಚಾರವೆಂದರೆ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿರುವುದು.

ಹೌದು, ಈ ಸುದ್ದಿ ಕೇಳಿದ ನಂತರ ಎಲ್ಲರೂ ಅವರ ಮದುವೆಯ ಸ್ಥಳವನ್ನು ತಿಳಿಯಲು ಕಾತುರರಾಗಿದ್ದಾರೆ. ವಿಶೇಷವೆಂದರೆ ಸೆಲೆಬ್ರಿಟಿಗಳಂತೆ ಈ ಜೋಡಿಯೂ ಡೆಸ್ಟಿನೇಷನ್ ವೆಡ್ಡಿಂಗ್ ಗೊತ್ತು ಮಾಡಿಲ್ಲ, ಬದಲಿಗೆ ಅದಿತಿ ರಾವ್ ಅವರ ಕುಟುಂಬಕ್ಕೆ ಸಂಬಂಧಿಸಿದ 400 ವರ್ಷಗಳಷ್ಟು ಹಳೆಯದಾದ ದೇವಸ್ಥಾನದಲ್ಲಿ ಮದುವೆಯಾಗಲಿದ್ದಾರೆ.  ಹಾಗಾದರೆ ಅದಿತಿ ಮತ್ತು ಸಿದ್ಧಾರ್ಥ್ ಯಾವ ದೇವಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಮತ್ತು ಆ ದೇವಸ್ಥಾನ ಏಕೆ ತುಂಬಾ ವಿಶೇಷವಾಗಿದೆ ಎಂದು ತಿಳಿಯೋಣ ಬನ್ನಿ…

ಸಾಂಪ್ರದಾಯಿಕ ವಿವಾಹ  

ಅದಿತಿ ರಾವ್ ಮತ್ತು ಸಿದ್ಧಾರ್ಥ್ ತಮ್ಮ ಮದುವೆಯನ್ನು ಅತ್ಯಂತ ವೈಯಕ್ತಿಕ ಮತ್ತು ಸಾಂಪ್ರದಾಯಿಕ ಸಮಾರಂಭವನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣದ ವನಪರ್ತಿಯಲ್ಲಿರುವ ಶ್ರೀರಂಗಪುರ ದೇವಸ್ಥಾನವನ್ನು ಮದುವೆಯ ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಳ್ಳುತ್ತಾರೆ. ಆದರೆ ಮದುವೆಯ ದಿನಾಂಕವನ್ನು ಇನ್ನೂ ರಿವೀಲ್‌ ಮಾಡಿಲ್ಲ. ದಂಪತಿಗಳ ಮದುವೆಯ ದಿನಾಂಕ ತಿಳಿಯಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

ಶ್ರೀರಂಗಪುರ ದೇವಾಲಯದ ಮಹತ್ವ

srirangapuram temple wanaparthy

ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರದ ಪುರಾತನ ದೇವಾಲಯವು (Sri Ranganayaka Swamy Temple) ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಇತಿಹಾಸ ಸುಮಾರು 400 ವರ್ಷಗಳಷ್ಟು ಹಳೆಯದು. ದೇವಾಲಯದ ಶಾಂತ ಮತ್ತು ಆಕರ್ಷಕ ವಾತಾವರಣವು ಭಕ್ತರಿಗೆ ತುಂಬಾ ಇಷ್ಟವಾಗುತ್ತದೆ. ವಾಸ್ತವವಾಗಿ ಇಲ್ಲಿನ ಸ್ಥಳೀಯ ಜನರಿಗೆ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ನೂರಾರು ವಿವಾಹಗಳು ಮತ್ತು ಇತರ ಧಾರ್ಮಿಕ ಆಚರಣೆಗಳು ನಡೆಯುತ್ತವೆ ಎಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿ ಮದುವೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ದೂರದೂರುಗಳಿಂದ ಜೋಡಿಗಳು ಇಲ್ಲಿಗೆ ಮದುವೆಯಾಗಲು ಬರುತ್ತಾರೆ.

You Might Also Like

ಕರ್ಪೂರವಿದ್ದರೆ ಹಣದ ಕೊರತೆ ಇರಲ್ಲ; ವಿಶೇಷ, ಅಗ್ಗವಾದ, ಬಹಳ ಸುಲಭವಾದ ಈ ವಿಧಾನ ಅನುಸರಿಸಿ…

ನೀವಂದುಕೊಂಡ ಹಾಗೆ ಈ 10 ಫುಡ್‌ಗಳು ಸಸ್ಯಾಹಾರವೇ ಅಲ್ಲ…ಹಾಗಾದ್ರೆ ಏನು?

ಮೊಸರು ಪ್ರಿಯರೇ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ!

ತಿಂಗಳಿಗೆ 80 ರೂ.ಪಡೆಯುತ್ತಿದ್ದವರು ಇಂದು ಕೋಟ್ಯಾಧಿಪತಿ…ಸತತವಾಗಿ ಸೋಲನ್ನೇ ಕಂಡಿದ್ದ ವ್ಯಕ್ತಿಯ ಲೈಫ್ ಚೇಂಜ್‌ ಆದದ್ದು ಹೀಗೆ!  

ಮನೆಯಲ್ಲಿ ಮನಿ ಪ್ಲಾಂಟ್ ಇದೆಯಾ?, ಈ ತಪ್ಪುಗಳನ್ನು ಮಾಡ್ಬೇಡಿ…ಇಲ್ಲದಿದ್ರೆ ಗಿಡ ಬೆಳೆಯುವ ಮೊದಲೇ ಒಣಗುತ್ತದೆ    

TAGGED:Aditi Rao HydariSiddharthSkyKanndaTempleಅದಿತಿ ರಾವ್ ಹೈದರಿದೇವಸ್ಥಾನಸಿದ್ಧಾರ್ಥ್
Share This Article
Facebook Email Print
Share
Previous Article chandra grahana 2024 Chandra grahan 2024 horoscope: ಚಂದ್ರಗ್ರಹಣದ ಮೊದಲು ಈ ರಾಶಿಚಕ್ರ ಚಿಹ್ನೆಗಳ ಜನರು ಜಾಗರೂಕರಾಗಿರಬೇಕು..ಯಾರು, ಯಾವ ವಿಷ್ಯದಲ್ಲಿ?  
Next Article “ರೀಲ್ಸ್‌ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್‌  
Leave a Comment

Leave a Reply Cancel reply

Your email address will not be published. Required fields are marked *

You Might Also Like

ಟ್ರೆಂಡ್‌ ಆಯ್ತು ಎದೆ ಹಾಲಿನ ಆಭರಣ…ತಯಾರಿಕೆ, ಆರೈಕೆ, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Faith tips: ಪೂಜೆಯ ನಂತರ ಆರತಿ ಮಾಡುವುದು ಏಕೆ?,  ಅದರ ಮಹತ್ವ, ಮಾಡುವ ವಿಧಾನ ತಿಳಿಯೋಣ

ರಾಮಾಯಣ: ಸೀತಾ ಸ್ವಯಂವರದಲ್ಲಿ ರಾವಣನಿಗೆ ಶಿವನ ಬಿಲ್ಲು ಎತ್ತಲು ಸಾಧ್ಯವಾಗಲಿಲ್ಲ ಏಕೆ?

ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮದುವೆಯಾದರು ಈ ಹಿರಿಯ ನಟಿ.. ಇಂದು ಇವರ ಮಗ ಮತ್ತು ಸೊಸೆ ಬಾಲಿವುಡ್ ಸೂಪರ್ ಸ್ಟಾರ್ಸ್‌

ನಿಮ್ಮ ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದೀರಾ… ಹಾಗಾದರೆ ಈ ಲೇಖನ ಖಂಡಿತ ಓದಲೇಬೇಕು   

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?