By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  

HomeOthers

ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  

Sky Kannada News
Last updated: October 21, 2024 2:49 pm
By Sky Kannada News
7 months ago
Share
3 Min Read
SHARE

Personality test: ಸಮಾಜದಲ್ಲಿ ಪ್ರತಿಯೊಬ್ಬರು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಇಷ್ಟ-ಕಷ್ಟಗಳು, ಜೀವನಶೈಲಿ, ಕೆಲಸ ಮಾಡುವ ರೀತಿ, ಅಷ್ಟೇ ಏಕೆ ಮಾತು ಕೂಡ ಫುಲ್‌ ಡಿಫರೆಂಟ್. ವ್ಯಕ್ತಿಯ ಈ ಅಭ್ಯಾಸಗಳೇ ಅವರ ಗುರುತಾಗುತ್ತವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ನಾವು ಅವನ ಕೆಲಸ, ಬಟ್ಟೆ ಅಥವಾ ಮಾತಿನ ಮೂಲಕ ನೆನಪಿಸಿಕೊಳ್ಳುತ್ತೇವೆ. ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೆ ಜೋರು ಎನ್ನುತ್ತೇವೆ. ಹಾಗೆಯೇ ಮೆಲುವಾಗಿ ಮಾತನಾಡುವವರನ್ನು ಸಾಫ್ಟ್ ಎಂದು ಹೇಳುತ್ತೇವೆ ಅಲ್ಲವೇ…ಅಂದರೆ ಯಾವುದೇ ವ್ಯಕ್ತಿಯನ್ನು ಅವರ ಸ್ವಭಾವದ ಆಧಾರದ ಮೇಲೆ ಗುರುತಿಸಲು ಪ್ರಯತ್ನಿಸುತ್ತೇವೆ.  ‌

ಆದರೆ ವ್ಯಕ್ತಿಯ ಮನೋಧರ್ಮವು ಕಾಲಕಾಲಕ್ಕೆ ಬದಲಾಗಬಹುದು. ಅನೇಕ ಬಾರಿ ಒಳ್ಳೆಯ ಜನ ಅನಿಸಿಕೊಂಡವರು ಕೆಟ್ಟವರಾಗಿರುತ್ತಾರೆ. ಆದರೆ ಒಮ್ಮೊಮ್ಮೆ ಕೆಟ್ಟ ಜನರು ತಮ್ಮ ಹಳೆ ಚಾಳಿ ಬಿಟ್ಟು ಉತ್ತಮವಾಗಿ ವರ್ತಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರ ವ್ಯಕ್ತಿತ್ವವನ್ನು ಪರೀಕ್ಷಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗುತ್ತದೆ. ಆದರೆ ಅದಕ್ಕೂ ಒಂದು ಟ್ರಿಕ್ಸ್‌ ಇದೆ.

ಹೌದು, ಒಬ್ಬ ವ್ಯಕ್ತಿಯ ಸ್ವಭಾವವನ್ನು ಬಟ್ಟೆ, ಆಹಾರ ಅಥವಾ ಪ್ರಯಾಣದ ವಿಷಯದಲ್ಲಿ ಮಾತ್ರವಲ್ಲದೆ, ನೆಚ್ಚಿನ ಸೀಸನ್ ಕೂಡ ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡುತ್ತದೆ. ಅಂದರೆ ಅವನು/ಅವಳು ತನ್ನಲ್ಲಿರುವ ಗುಣಗಳಿಗೆ ಅನುಗುಣವಾಗಿ ತನ್ನ ಸುತ್ತಲಿನ ಪರಿಸರವನ್ನು ಇಷ್ಟಪಡುತ್ತಾರೆ. ಹಾಗಾಗಿ ಈ ಬಗ್ಗೆ ಇಂದು ತಿಳಿದುಕೊಳ್ಳೋಣ.

Also Read: ಮಳೆಗಾಲದಲ್ಲಿ ಜಾರುವ ಭಯವೇ… ಈ ರೀತಿಯ ಚಪ್ಪಲಿಗಳನ್ನು ಆಯ್ಕೆ ಮಾಡಿ, ಫುಲ್‌ ಸೇಫ್‌

ಬೇಸಿಗೆ ಕಾಲ

ಬೇಸಿಗೆ ಕಾಲವನ್ನು ಕೆಲವೇ ಜನರು ಇಷ್ಟಪಡುತ್ತಾರೆ. ಏಕೆಂದರೆ ಸುಡುವ ಬಿಸಿಲು, ಬಿಸಿಗಾಳಿ, ಏರುತ್ತಿರುವ ತಾಪಮಾನ ಎಲ್ಲರಿಗೂ ತೊಂದರೆ ಉಂಟು ಮಾಡುತ್ತದೆ. ಆದರೆ ಮಕ್ಕಳಿಗೆಲ್ಲಾ ಬೇಸಿಗೆ ಕಾಲದಲ್ಲಿ ರಜಾದಿನ ಇರುತ್ತದೆ. ಹಾಗಾಗಿ ಮಕ್ಕಳೊಟ್ಟಿಗೆ, ಕುಟುಂಬದೊಟ್ಟಿಗೆ ನಾವು ಸಂತೋಷದಿಂದ ಕಾಲ ಕಳೆಯುಬಹುದಲ್ಲಾ ಎಂಬ ಭಾವ ಅವರಲ್ಲಿ ಇರುತ್ತದೆ. ಇಂತಹ ಜನರು ಎಲ್ಲಿಗೆ ಹೋದರೂ ಯಾವಾಗಲೂ ಸಂತೋಷವಾಗಿರಲು ಇಷ್ಟಪಡುತ್ತಾರೆ. ಬೇಸಿಗೆಯ ಸೂರ್ಯನಂತೆ ಅವರು ಕೂಡ ಎನರ್ಜಿಯಿಂದ ಕೂಡಿರುತ್ತಾರೆ. ತಮ್ಮ ಶಕ್ತಿಯ ಆಧಾರದ ಮೇಲೆ ಜೀವನದ ಪ್ರತಿಯೊಂದು ಸನ್ನಿವೇಶವನ್ನು ಆಶಾವಾದಿ ಚಿಂತನೆಯೊಂದಿಗೆ ಎದುರಿಸುತ್ತಾರೆ.

ಮಳೆಗಾಲ

ಎಲ್ಲರೂ ಮಳೆಯನ್ನು ಇಷ್ಟಪಡುತ್ತಾರೆ.  ಇಷ್ಟಪಡದವರು ವಿರಳ. ಈ ಋತುವಿನಲ್ಲಿ ನೈಸರ್ಗಿಕ ಸೌಂದರ್ಯ ಹೆಚ್ಚುತ್ತದೆ. ಪ್ರಕೃತಿಯಂತೆ ಈ ಋತುವನ್ನು ಇಷ್ಟಪಡುವ ಜನರು ಸಹ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಸುಲಭವಾಗಿ ಸ್ವೀಕರಿಸುತ್ತಾರೆ. ದೊಡ್ಡ ಬದಲಾವಣೆಗಳು ಸಹ ಅವರ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಬದಲಿಗೆ ಅವರು ಎಲ್ಲವನ್ನೂ ಸಾಮಾನ್ಯ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ. ಇತರರ ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿರುತ್ತಾರೆ. ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಸೃಜನಶೀಲ ವ್ಯಕ್ತಿಗಳಾಗಿದ್ದು, ಅವರ ಮನಸ್ಸಿನಲ್ಲಿ ಯಾವಾಗಲೂ ಹೊಸ ಆಲೋಚನೆಗಳು ಬರುತ್ತಿರುತ್ತವೆ.

ಚಳಿಗಾಲ

ಚಳಿಗಾಲದಲ್ಲಿಯೂ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ಕಾಣಬಹುದು. ಶೀತದ ಹವಾಮಾನವನ್ನು ಇಷ್ಟಪಡುವ ಜನರು ಅಂತರ್ಮುಖಿಗಳಾಗಿರುತ್ತಾರೆ. ಅವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ ಮತ್ತು ದೊಡ್ಡ ಗುಂಪಿನಲ್ಲಿ ಹೋಗಲು ಇಷ್ಟಪಡುವುದಿಲ್ಲ. ಆದರೆ ತುಂಬಾ ಬಲಶಾಲಿ ವ್ಯಕ್ತಿ. ಜೀವನದ ಪ್ರತಿ ಕ್ಷಣದಲ್ಲಿ ಅಂಜಿಕೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಹಾಗೆಯೇ ತಮ್ಮ ಆಂತರಿಕ ಧ್ವನಿಯನ್ನು ಆಲಿಸಿದ ನಂತರವಷ್ಟೇ ಯಾವುದೇ ನಿರ್ಧಾರಕ್ಕೆ ಬರುತ್ತಾರೆ.

ವಸಂತ ಕಾಲ

ವಸಂತ ಋತು…ಈ ಹವಾಮಾನವನ್ನು ಇಷ್ಟಪಡುವ ಜನರು ತುಂಬಾ ಆಶಾವಾದಿಗಳು. ತಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸನ್ನಿವೇಶವನ್ನು ಧೈರ್ಯದಿಂದ ಎದುರಿಸುತ್ತಾರೆ. ಎಷ್ಟೇ ಕಠಿಣ ಸವಾಲು ಬಂದರೂ ಅದನ್ನು ಜಯಿಸುತ್ತಾರೆ. ಕಷ್ಟಗಳಿಂದ ತೊಂದರೆಗೊಳಗಾಗುವ ಬದಲು, ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಯಶಸ್ಸನ್ನು ಸಹ ಪಡೆಯುತ್ತಾರೆ. ಕನಸು ಕಾಣಲು ಇಷ್ಟಪಡುತ್ತಾರೆ.

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಬಹುದು. ಅಲ್ಲದೆ, ನೀವು ಈ ಲೇಖನವನ್ನು ಇಷ್ಟಪಟ್ಟರೆ ಶೇರ್‌ ಮಾಡಿ. ಇದೇ ರೀತಿಯ ಇತರ ಲೇಖನಗಳನ್ನು ಓದಲು, ನಿಮ್ಮ ವೆಬ್‌ಸೈಟ್ skykannada ಜೊತೆ ಸಂಪರ್ಕದಲ್ಲಿರಿ.

You Might Also Like

Jio Job Vacancy 2024: ಜಿಯೋದಲ್ಲಿ ಕೆಲಸ ಖಾಲಿ ಇದೆ..ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?  

4 ವರ್ಷ ರಾತ್ರಿ ಊಟವಿಲ್ಲ, ಆತ್ಮಹ*ತ್ಯೆಗೆ ಯತ್ನ…ಆದರೀಗ ಮಾಡೆಲಿಂಗ್‌ ಲೋಕದಲ್ಲಿ ಮಿಂಚುತ್ತಿದ್ದಾರೆ ಸಿಗರೇಟ್‌, ತಂಬಾಕು ಮಾರಾಟಗಾರನ ಪುತ್ರಿ

IPL ತಂಡದ ಫುಡ್ ಮೆನು: ನಿಂಬೆ ಜ್ಯೂಸ್, ಚಿಕನ್, ಮಟನ್, ಅನ್ನ… ಕ್ರಿಕೆಟಿಗರು ಬೆಳಗ್ಗೆಯಿಂದ ರಾತ್ರಿ ತನಕ ಏನೆಲ್ಲಾ ತಿಂತಾರೆ?

Chandra grahan 2024 horoscope: ಚಂದ್ರಗ್ರಹಣದ ಮೊದಲು ಈ ರಾಶಿಚಕ್ರ ಚಿಹ್ನೆಗಳ ಜನರು ಜಾಗರೂಕರಾಗಿರಬೇಕು..ಯಾರು, ಯಾವ ವಿಷ್ಯದಲ್ಲಿ?  

8ನೇ ತರಗತಿ ಪಾಸಾದ ಯುವಕನ ಅದ್ಭುತ ಐಡಿಯಾ…ತಿಂಗಳ ಸಂಪಾದನೆ 6 ಲಕ್ಷ ರೂಪಾಯಿ

TAGGED:LifestylePeople personality testSeasonsskykannadaಕಾಲಗಳುವ್ಯಕ್ತಿತ್ವ ಪರೀಕ್ಷೆಸ್ಕೈ ಕನ್ನಡ
Share This Article
Facebook Email Print
Share
Previous Article ನೀವಂದುಕೊಂಡ ಹಾಗೆ ಈ 10 ಫುಡ್‌ಗಳು ಸಸ್ಯಾಹಾರವೇ ಅಲ್ಲ…ಹಾಗಾದ್ರೆ ಏನು?
Next Article ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಗಣೇಶೋತ್ಸವದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಗಣಪತಿಯನ್ನು ನೋಡಿದರೆ ಅದರ ಅರ್ಥವೇನು?

ಎರಡು ದಿನವಾಗುತ್ತಿದ್ದಂತೆ ಬಾಳೆಹಣ್ಣುಗಳು ಕಪ್ಪಾಗುತ್ತಿವೆಯೇ?,  ಈ ಟಿಪ್ಸ್ ಫಾಲೋ ಮಾಡಿ…ಒಂದು ವಾರ ಫ್ರೆಶ್ ಆಗಿರುತ್ತದೆ!  

ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಈ ಹಣ್ಣನ್ನು ಮನೆಯಲ್ಲಿ ಇಟ್ಟುಹೋಗಿ.. ಇಲ್ಲದಿದ್ದರೆ ಜೈಲು ಪಾಲಾಗುತ್ತೀರಿ, ಇದರ ಹಿಂದಿನ ಕಾರಣವೇನು ಗೊತ್ತಾ?

ನೀವು ಈ ದೇವಸ್ಥಾನಕ್ಕೆ 16 ಪ್ರದಕ್ಷಿಣೆ ಹಾಕಿದರೆ 21 ದಿನಗಳೊಳಗೆ ಶುಭ ಸುದ್ದಿ ಕೇಳುತ್ತೀರಿ…  

ಮಲಬದ್ಧತೆ, ಅಸಿಡಿಟಿಯಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಸೌತೆಕಾಯಿ ಜ್ಯೂಸ್‌ ಉತ್ತಮ ಮನೆಮದ್ದು..!    

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?