Soaked chana Benefits: ನೀವು ಬೆಳಗ್ಗೆ ಎದ್ದ ನಂತರ ನೆನೆಸಿದ ಕಾಳುಗಳನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ನಮ್ಮ ಹಿರಿಯರು ಬೆಳಗ್ಗೆ ಹಲ್ಲುಜ್ಜಿದ ನಂತರ ನೆನೆಸಿದ ಕಾಳುಗಳನ್ನು ತಿನ್ನಲು ಇಷ್ಟಪಡುತ್ತಾರೆ.
ನಂತರವೇ ಏನನ್ನಾದರೂ ತಿನ್ನುತ್ತಾರೆ. ಆದರೆ ಬೆಳಗ್ಗೆ ನೆನೆಸಿದ ಕಡಲೆ ಕಾಳುಗಳನ್ನು (Soaked chana Benefits) ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನೆನೆಸಿದ ಕಡಲೆ ಕಾಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ವಿಟಮಿನ್ ಮುಂತಾದ ಅನೇಕ ಪೋಷಕಾಂಶಗಳಿವೆ.
ಕಡಲೆ ಕಾಳು ತಿನ್ನುವುದರಿಂದ ಆರೋಗ್ಯ ಪ್ರಯೋಜನ (Soaked chana Benefits)
ಮಧುಮೇಹ ಹೆಚ್ಚಾಗುವುದನ್ನು ತಡೆಯಲು
ನಮ್ಮ ದೇಹಕ್ಕೆ ಅತಿ ಮುಖ್ಯವಾದ ನಾರಿನಂಶ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳು ನೆನೆಸಿದ ಕಾಳುಗಳಲ್ಲಿ ಕಂಡುಬರುತ್ತವೆ. ನಿಮಗೆ ಮಧುಮೇಹ ಇದ್ದರೆ ಪ್ರತಿದಿನ ಬೆಳಗ್ಗೆ ಒಂದು ಪ್ಲೇಟ್ ನೆನೆಸಿದ ಕಾಳು ತಿನ್ನಿರಿ. ಏಕೆಂದರೆ ನೆನೆಸಿದ ಕಡಲೆಕಾಳಿನಲ್ಲಿ ಇರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Read Also: Nita Ambani’s Saree Collection : ನೀತಾ ಅಂಬಾನಿ ಬಳಿಯಿರುವ ದೇಸಿ ಶೈಲಿಯ ಸೀರೆ ಸಂಗ್ರಹಗಳಿವು
ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿರಿಸಿಕೊಳ್ಳಿ
ಬೆಳಗಿನ ಜಾವ ನೆನೆಸಿದ ಕಡಲೆಕಾಳು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಯಾವಾಗಲೂ ಬಲವಾಗಿರುತ್ತದೆ. ಇದನ್ನು ನಾವು ಹೇಳುತ್ತಿಲ್ಲ, ಆದರೆ ನೆನೆಸಿದ ಕಾಳುಗಳಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ ಎಂದು ವೈದ್ಯರು ಹೇಳುತ್ತಾರೆ. ನೆನೆಸಿದ ಬೇಳೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಶಾಶ್ವತವಾಗಿ ಪರಿಹಾರ ನೀಡುತ್ತದೆ.
ಬೊಜ್ಜು ಕಡಿಮೆ ಮಾಡಲು
ನೀವು ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಬೆಳಗ್ಗೆ ಒಂದು ಪ್ಲೇಟ್ ನೆನೆಸಿದ ಕಡಲೆ ತಿನ್ನಿರಿ. ಏಕೆಂದರೆ ನೆನೆಸಿದ ಕಡಲೆಯಲ್ಲಿ ಇರುವ ಗುಣಲಕ್ಷಣಗಳು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದಲೇ ನೆನಸಿದ ಕಾಳು ಆರೋಗ್ಯಕ್ಕೆ ನಿಧಿ ಎಂದು ಹೇಳಲಾಗುತ್ತದೆ.
ರಕ್ತಹೀನತೆ ನಿವಾರಿಸುತ್ತದೆ
ಬೆಳಗ್ಗೆ ನೆನೆಸಿದ ಕಡಲೆಕಾಳು ತಿನ್ನುವುದರಿಂದ ರಕ್ತಹೀನತೆ ಎಂದಿಗೂ ಬರುವುದಿಲ್ಲ. ಏಕೆಂದರೆ ಕಡಲೆಕಾಳಿನಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣವು ಕಂಡುಬರುತ್ತದೆ, ಇದು ರಕ್ತದ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೆನೆಸಿಟ್ಟ ಕಾಳುಗಳನ್ನು ಬೆಳಗ್ಗೆ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುವುದಲ್ಲದೆ, ರಕ್ತಹೀನತೆಯ ಸಮಸ್ಯೆ ಎಂದೂ ಕಾಡುವುದಿಲ್ಲ.
ಕೂದಲು ಬಲಪಡಿಸಲು
ನೀವು ಹೊಳೆಯುವ ಮತ್ತು ಬಲವಾದ ಕೂದಲು ಬಯಸಿದರೆ, ಪ್ರತಿದಿನ ಬೆಳಗ್ಗೆ ನೆನೆಸಿದ ಕಡಲೆಕಾಳು ತಿನ್ನಿರಿ. ಇದರಲ್ಲಿ ವಿಟಮಿನ್ ಎ, ಬಿ, ಮತ್ತು ಇ ಇದ್ದು ಇದು ಕೂದಲನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಅವುಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಗರ್ಭಿಣಿ ಮಹಿಳೆಯರಿಗೆ
ಗರ್ಭಿಣಿಯರು ನೆನೆಸಿದ ಕಡಲೆಕಾಳು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ನೆನೆಸಿದ ಕಡಲೆಕಾಳಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಇದು ಮಗುವಿಗೆ ಮತ್ತು ತಾಯಿಗೆ ಸಾಕಷ್ಟು ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಎಲ್ಲಾ ಗರ್ಭಿಣಿಯರು ಬೆಳಗ್ಗೆ ನೆನೆಸಿದ ಕಡಲೆಕಾಳು ಸೇವಿಸಬೇಕು.
Keywords: Soaked chana Benefits , Uses of Chana, Soaked Gram Benefits, ನೆನಸಿದ ಕಡಲೆಕಾಳಿನ ಪ್ರಯೋಜನಗಳು, ಕಡಲೆಕಾಳಿನ ಸೇವನೆಯ ಪ್ರಯೋಜನಗಳು