ಜಯ ಕಿಶೋರಿ ಅವರ ಸ್ಪೂರ್ತಿದಾಯಕ ಮಾತುಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮುಂದೆ ಬರಲು ಪ್ರೇರೇಪಿಸುತ್ತವೆ. ಹಾಗಾಗಿ ಜಯ ಕಿಶೋರಿ ಅವರ ಆಯ್ದ ಕೆಲವು ಸ್ಪೂರ್ತಿದಾಯಕ ಕೋಟ್ಸ್ ಇಲ್ಲಿವೆ.
ಕೇವಲ 29 ವರ್ಷ ವಯಸ್ಸಿನ ಜಯಾ ಕಿಶೋರಿ ಒರ್ವ ಸ್ಪೂರ್ತಿದಾಯಕ ಆಧ್ಯಾತ್ಮಿಕ ವಾಗ್ಮಿ ಮತ್ತು ಕಥೆಗಾರ್ತಿ. ಇವರು ತಮ್ಮ ಕಥೆಗಳು ಮತ್ತು ದತ್ತಿ ಕಾರ್ಯಗಳಿಗಾಗಿ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಮಾತುಗಳು ಮತ್ತು ಸರಳ ಮಾರ್ಗಗಳಿಂದ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಸಮಾಜಕ್ಕೆ ಇವರು ನೀಡಿದ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳಲ್ಲಿ 2016 ರಲ್ಲಿ ಆರ್ಎಸ್ಎಸ್ ಮುಖ್ಯಸ್ಥರಿಂದ ‘ಆದರ್ಶ ಯುವ ಆಧ್ಯಾತ್ಮಿಕ ಗುರು ಪ್ರಶಸ್ತಿ’, ನಾರಾಯಣ ಸೇವಾ ಸಂಸ್ಥಾನದಿಂದ ‘ಸಮಾಜ ರತ್ನ ಪ್ರಶಸ್ತಿ’ ಮತ್ತು ಫೇಮ್ ಇಂಡಿಯಾ ನಿಯತಕಾಲಿಕೆಯಿಂದ ‘ಯಂಗ್ ಸ್ಪಿರಿಚ್ಯುಯಲ್ ಐಕಾನ್’ ಹೀಗೆ ಅನೇಕ ಗೌರವ, ಬಿರುದುಬಾವಲಿಗಳು ಅರಸಿಕೊಂಡು ಬಂದಿವೆ.
ಜುಲೈ 13, 1996 ರಂದು ಕೋಲ್ಕತ್ತಾದಲ್ಲಿ ಜನಿಸಿದ ಜಯಾ ಕಿಶೋರಿ, ಮಹಾದೇವಿ ಬಿರ್ಲಾ ವರ್ಲ್ಡ್ ಅಕಾಡೆಮಿಯಿಂದ ಶಾಲಾ ಶಿಕ್ಷಣ, ಆ ನಂತರ ಬಿ.ಕಾಂ ಪದವಿ ಪಡೆದರು. ಇವರು ಆರಂಭದಿಂದಲೂ ಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದರು ಮತ್ತು ಕೇವಲ ಏಳನೇ ವಯಸ್ಸಿನಲ್ಲಿ ಸಾರ್ವಜನಿಕ ಭಾಷಣ ಮಾಡುವ ಮೂಲಕ ತಮ್ಮ ಜರ್ನಿ ಆರಂಭಿಸಿದರು.
ಜಯ ಕಿಶೋರಿ ಅವರು ತಮ್ಮ ಸ್ಪೂರ್ತಿದಾಯಕ ಮಾತುಗಳು ಮತ್ತು ಭಕ್ತಿಯಿಂದ ಪ್ರತಿಯೊಬ್ಬರ ಹೃದಯವನ್ನು ಮುಟ್ಟುತ್ತಾರೆ. ಅವರ ಮಾತುಗಳು ಜೀವನವನ್ನು ಸರಳ ಮತ್ತು ಸಕಾರಾತ್ಮಕವಾಗಿಸುವುದಲ್ಲದೆ, ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತವೆ. ಅವರ ಮಾರ್ಗದರ್ಶನವು ನಮ್ಮನ್ನು ನಿಜವಾದ ಭಕ್ತಿ, ಜೀವನದ ಹೋರಾಟಗಳನ್ನು ಎದುರಿಸುವ ಶಕ್ತಿ ಮತ್ತು ಸ್ವಯಂ ಕೃಷಿಯ ಕಡೆಗೆ ಪ್ರೇರೇಪಿಸುತ್ತದೆ. ಜಯ ಕಿಶೋರಿಯವರ ಪ್ರೇರಣಾದಾಯಕ ಕೋಟ್ಸ್ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರೇಪಿಸುತ್ತವೆ.. ಹಾಗಾಗಿ ಇಂದು ಜಯ ಕಿಶೋರಿಯವರ ಪ್ರೇರಣಾದಾಯಕ ಮಾತುಗಳು ಇಲ್ಲಿವೆ…
“ನಿಮ್ಮ ಆತ್ಮವಿಶ್ವಾಸವೇ ನಿಮ್ಮ ನಿಜವಾದ ಶಕ್ತಿ, ಅದು ಎಂದಿಗೂ ಕಡಿಮೆಯಾಗಲು ಬಿಡಬಾರದು”
“ನೀವು ದೇವರೊಂದಿಗೆ ಇರುವಾಗ ಯಾವುದೇ ತೊಂದರೆಗೆ ಹೆದರುವ ಅಗತ್ಯವಿಲ್ಲ”
“ನಿಜವಾದ ಸಂತೋಷವು ದೇವರ ಸೇವೆಯಲ್ಲಿ ಅಡಗಿದೆ, ಉಳಿದೆಲ್ಲವೂ ತಾತ್ಕಾಲಿಕ”
“ಮನುಷ್ಯನ ದೊಡ್ಡ ಶತ್ರು ಅವನ ಸ್ವಂತ ಆಲೋಚನೆ ಅದನ್ನು ಸಕಾರಾತ್ಮಕವಾಗಿಸಿ”
“ಆಗಿದ್ದೆಲ್ಲವೂ ನಿಮಗೆ ಒಳ್ಳೆಯದಾಯಿತು, ಏನು ನಡೆಯುತ್ತಿದೆಯೋ ಅದು ನಿಮಗೆ ಒಳ್ಳೆಯದಾಗುತ್ತದೆ ಮತ್ತು ಏನು ನಡೆಯುವುದೋ ಅದು ನಿಮಗೆ ಒಳ್ಳೆಯದಾಗಿರುತ್ತದೆ”
“ನಿಮ್ಮ ಕಾರ್ಯಗಳಿಂದ ಇತರರ ಹೃದಯದಲ್ಲಿ ಸ್ಥಾನ ಪಡೆಯಿರಿ ಇದು ನಿಜವಾದ ಸದ್ಗುಣ”
“ಜೀವನದಲ್ಲಿ ಎಂದಿಗೂ ಬಿಟ್ಟುಕೊಡಬೇಡಿ, ನೀವು ದೃಢನಿಶ್ಚಯ ಹೊಂದಿದ್ದರೆ ದೇವರು ಸಹ ನಿಮಗೆ ಸಹಾಯ ಮಾಡುತ್ತಾನೆ”
“ನಿಜವಾದ ಭಕ್ತಿ ಎಂದರೆ ದೇವರನ್ನು ಮನಸ್ಸು, ಮಾತು ಮತ್ತು ಕಾರ್ಯಗಳಿಂದ ಪ್ರೀತಿಸುವುದು”
“ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಶಕ್ತಿ ಎಂದರೆ ದೇವರ ಮೇಲಿನ ಭಕ್ತಿ, ನೀವು ನಿಮ್ಮ ಹೃದಯದಲ್ಲಿ ದೇವರನ್ನು ಅನುಭವಿಸಿದಾಗ ಯಾವುದೇ ಕಷ್ಟವನ್ನು ಎದುರಿಸುವುದು ಸುಲಭವಾಗುತ್ತದೆ”
“ದೇವರಲ್ಲಿ ತನ್ನನ್ನು ತಾನು ಕಳೆದುಕೊಳ್ಳುವವನೇ ನಿಜವಾದ ಸಂತೋಷ”