ಚಿತ್ರರಂಗದಲ್ಲಿರುವ ಅನೇಕ ಕಲಾವಿದರು ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಲು ನಾ ಮುಂದು ತಾ ಮುಂದು ಎಂದು ಬಯಸುತ್ತಾರೆ. ಕೆಲವರಿಗೆ ಅವಕಾಶ ಸಿಗುವುದೇ ಬಹಳ ಕಡಿಮೆ. ಕಿಂಗ್ ಖಾನ್ ಇಂದು ಇರುವ ಸ್ಥಾನವನ್ನು ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಆದರೆ ನಿಮಗೆ ಗೊತ್ತಾ…ಬಾಲಿವುಡ್ನಲ್ಲಿ ಅನೇಕ ನಟಿಯರು ಅವರೊಂದಿಗೆ ನಟಿಸಲು ನಿರಾಕರಿಸಿದ್ದಾರೆ.
ಈ ನಟಿಯರಿಗೆ ಶಾರುಖ್ ಜೊತೆ ಕೆಲಸ ಮಾಡಲು ಇಷ್ಟವಿರಲಿಲ್ಲ
ಕೆಲವು ಕಾರಣದಿಂದಾಗಿ ನಿರಾಕರಣೆ
ದಕ್ಷಿಣದ ಪ್ರಸಿದ್ಧ ನಟಿಯ ಹೆಸರೂ ಇದರಲ್ಲಿ ಸೇರಿದೆ
Actresses Refuses To Work With SRK: ಶಾರುಖ್ ಖಾನ್ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಪ್ರಂಪಚದ ಮೂಲೆ ಮೂಲೆಯಲ್ಲಿರುವ ಜನರು ಅವರನ್ನು ಕಿಂಗ್ ಖಾನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಅವರ ಒಂದು ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತದೆ. ನಟನಾ ಲೋಕಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ಕಲಾವಿದರೂ ಅವರೊಂದಿಗೆ ಕೆಲಸ ಮಾಡುವ ಕನಸು ಕಾಣುತ್ತಾರೆ.
ನೀವು ಅನೇಕ ಬಾರಿ ಈ ಚಿತ್ರದಿಂದ ಶಾರುಖ್ ಅವರನ್ನು ಬದಲಾಯಿಸಲಾಗಿದೆ ಅಥವಾ ಆ ನಟಿ ಈ ಚಿತ್ರ ಮಾಡಲು ನಿರಾಕರಿಸಿದರು ಎಂದು ಕೇಳಿರಬೇಕು. ಇದೆಲ್ಲಾ ಈಗ್ಯಾಕೆ ಅಂದರೆ ಇಂದು ಶಾರುಖ್ ಅವರೊಂದಿಗೆ ಚಿತ್ರಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ ಆ ಪ್ರಸಿದ್ಧ ನಟಿಯರ ಹೆಸರುಗಳನ್ನು ನಾವು ನಿಮಗೆ ಹೇಳಲಿದ್ದೇವೆ.
ಸೋನಮ್ ಕಪೂರ್
ಇಂದು ಸೋನಮ್ ಕಪೂರ್ ಬೆಳ್ಳಿತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಸಿದ್ಧ ನಿರ್ದೇಶಕರು ಅವರನ್ನು ತಮ್ಮ ಚಿತ್ರಗಳಲ್ಲಿ ನಟಿಸಲು ಬಯಸುತ್ತಿದ್ದ ಕಾಲವೊಂದಿತ್ತು. ಆದರೆ ಶಾರುಖ್ ಜೊತೆಗಿನ ತನ್ನ ಕೆಮಿಸ್ಟ್ರಿ ಜನರಿಗೆ ಇಷ್ಟವಾಗುವುದಿಲ್ಲ ಎಂದು ಸೋನಂ ಭಾವಿಸಿದ್ದರು. ಅದಕ್ಕಾಗಿಯೇ ಆ ನಟಿ ಇಲ್ಲಿಯವರೆಗೆ ಅವರೊಂದಿಗೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಕೆಲವು ಮಾಧ್ಯಮ ವರದಿಗಳು ಮಾತ್ರ ವಯಸ್ಸಿನ ವ್ಯತ್ಯಾಸದಿಂದಾಗಿ ನಟಿ ಅವರೊಂದಿಗೆ ಕೆಲಸ ಮಾಡಲಿಲ್ಲ ಎಂದು ಹೇಳಿಕೊಂಡಿವೆ.
ಹೇಮಾ ಮಾಲಿನಿ
ಹಿಂದಿ ಚಿತ್ರರಂಗದ ಹಿರಿಯ ನಟಿಯರ ಪಟ್ಟಿಯಲ್ಲಿ ಸೇರಿರುವ ಹೇಮಾ ಮಾಲಿನಿ ಕೂಡ ಶಾರುಖ್ ಜೊತೆ ಕೆಲಸ ಮಾಡಲು ನಿರಾಕರಿಸಿದ್ದಾರೆ. ಕೆಲವು ಮಾಧ್ಯಮ ವರದಿಗಳು ಹೇಮಾ ಮಾಲಿನಿ ಶಾರುಖ್ ಅತಿಯಾಗಿ ನಟಿಸುತ್ತಾರೆಂದು ಭಾವಿಸಿದ್ದಾರೆಂದು ಹೇಳಿವೆ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಕಂಗನಾ ರನೌತ್
ತಮ್ಮ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಾಗುವ ಕಂಗನಾ ರನೌತ್ ಕೂಡ ಶಾರುಖ್ ಜೊತೆ ಕೆಲಸ ಮಾಡಲು ಹಿಂದೆ ಸರಿದಿದ್ದಾರೆ. ಎಲ್ಲವನ್ನೂ ಸ್ವಂತ್ರವಾಗಿ ಸಾಧಿಸಿದ್ದೇನೆ ಎಂದು ನಂಬಿದ್ದರು. ಅದಕ್ಕಾಗಿಯೇ ಆಕೆ ಯಾವುದೇ ಖಾನ್ ಜೊತೆ ಕೆಲಸ ಮಾಡಲು ಬಯಸಲಿಲ್ಲ.
ಅಮಿಷಾ ಪಟೇಲ್
ಅಮಿಷಾ ಪಟೇಲ್ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಶಾರುಖ್ ಜೊತೆಗಿನ ತನ್ನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗದಿರಬಹುದು ಎಂದು ನಟಿ ಭಾವಿಸಿದ್ದರು. ಈ ಕಾರಣದಿಂದಾಗಿ, ಅವರು ಆ ನಟನೊಂದಿಗೆ ಯಾವುದೇ ಚಿತ್ರ ಮಾಡಲಿಲ್ಲ. ಅವರು ಕೊನೆಯ ಬಾರಿಗೆ ಸನ್ನಿ ಡಿಯೋಲ್ ಅವರೊಂದಿಗೆ ‘ಗದರ್ 2’ ಚಿತ್ರದಲ್ಲಿ ಕಾಣಿಸಿಕೊಂಡರು.
ಕರಿಷ್ಮಾ ಕಪೂರ್
ಕರಿಷ್ಮಾ ಕಪೂರ್ ಶಾರುಖ್ ಜೊತೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕುಚ್ ಕುಚ್ ಹೋತಾ ಹೈ ಮತ್ತು ಅಶೋಕ ಚಿತ್ರಗಳಲ್ಲಿ ಶಾರುಖ್ ಜೊತೆ ನಟಿಸಲು ಅವರಿಗೆ ಆಫರ್ ಬಂದಿರುವುದನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಹೌದು, ನಟಿ ಈ ಚಿತ್ರಗಳಲ್ಲಿ ಶಾರುಖ್ ಕೆಲಸ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರು.
ಶ್ರೀದೇವಿ
ಶಾರುಖ್ ಅವರ ಡರ್ ಚಿತ್ರಕ್ಕೆ ಮೊದಲು ದಕ್ಷಿಣದ ಖ್ಯಾತ ನಟಿ ಶ್ರೀದೇವಿಗೆ ಅವಕಾಶ ಸಿಕ್ಕಿತ್ತು, ಆದರೆ ಯಾವುದೋ ಕಾರಣಕ್ಕೆ ನಟಿ ಆ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದರು. 1993 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಜೂಹಿ ಚಾವ್ಲಾ ಕಾಣಿಸಿಕೊಂಡರು. ಆದರೆ ಜನರು ಮಾತ್ರ ಡರ್ ಚಿತ್ರದಲ್ಲಿ ಶಾರುಖ್ ಅವರ ನಟನೆಯನ್ನು ಇಷ್ಟಪಟ್ಟರು.