By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: Health Tips: ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟನಾ…ಇದರ ಅನುಕೂಲ-ಅನಾನುಕೂಲಗಳೇನು ಗೊತ್ತಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | Health Tips: ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟನಾ…ಇದರ ಅನುಕೂಲ-ಅನಾನುಕೂಲಗಳೇನು ಗೊತ್ತಾ?

Homeಲೈಫ್ ಸ್ಟೈಲ್

Health Tips: ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟನಾ…ಇದರ ಅನುಕೂಲ-ಅನಾನುಕೂಲಗಳೇನು ಗೊತ್ತಾ?

Sky Kannada News
Last updated: September 30, 2024 12:23 pm
By Sky Kannada News
8 months ago
Share
2 Min Read
SHARE

Is ice cream good for you to eat?: ವಿಶೇಷವಾಗಿ ಬೇಸಿಗೆಯಲ್ಲಿ ಐಸ್ ಕ್ರೀಮ್ ಅನ್ನು ಇಷ್ಟಪಟ್ಟು ತಿನ್ನುವ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೆನೆಸಿಕೊಂಡರೆ ಆನ್‌ ಲೈನ್‌ನಲ್ಲಿ ಬುಕ್‌ ಮಾಡುತ್ತೇವೆ ಅಥವಾ ಹತ್ತಿರದ ಹೋಟೆಲ್‌ಗೆ ಹೋಗುತ್ತೇವೆ. ಅಷ್ಟೇ ಅಲ್ಲ, ಯಾವುದೇ ಪಾರ್ಟಿ, ಫಂಕ್ಷನ್‌ ಇರಲಿ ಅಲ್ಲಿ ನಿಮಗೆ ಕೊನೆಯಲ್ಲಿ ಕೊಡುವುದು ಐಸ್‌ ಕ್ರೀಮ್‌ ಅನ್ನೇ…ಅದೆಲ್ಲಾ ಬಿಡಿ ಯೂಟ್ಯೂಬ್‌ ತೆಗೆದು ನೋಡಿದರೆ ಮನೆಯಲ್ಲಿಯೇ ಹತ್ತು ನಿಮಿಷದಲ್ಲಿ ಐಸ್‌ ಕ್ರೀಮ್‌ ತಯಾರಿಸುವ ವಿಧಾನ ಎಂಬ ನೂರಾರು ವಿಡಿಯೋಗಳನ್ನು ನೋಡಬಹುದು. ಆದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟಪಟ್ಟು ತಿನ್ನುವ ಈ ಐಸ್‌ ಕ್ರೀಮ್‌ ನಿಜಕ್ಕೂ ಒಳ್ಳೆಯದೇ? ಬನ್ನಿ ನೋಡೋಣ…

Contents
ಐಸ್ ಕ್ರೀಮ್ ತಿನ್ನುವುದರಿಂದ ಸಿಗುವ ಪ್ರಯೋಜನಗಳುಐಸ್ ಕ್ರೀಮ್‌ನ ಅನಾನುಕೂಲಗಳು

ಯಾರೇ ಆಗಲಿ ಬಿಸಿಲಿನಲ್ಲಿ ಸ್ವಲ್ಪ ಸಮಯ ಓಡಾಡಿದರೆ ಎಳನೀರಿಗಿಂತ ಹೆಚ್ಚು ಐಸ್ ಕ್ರೀಂ ತಿನ್ನುವ ಆಸೆಯನ್ನು ವ್ಯಕ್ತಪಡಿಸುತ್ತಾರೆ. ನಾವು ಮಾಡುವುದನ್ನೇ ನಮ್ಮ ಮಕ್ಕಳು ಸಹ ಅನುಸರಿಸುತ್ತಾರೆ. ಐಸ್ ಕ್ರೀಮ್ ಶಾಖದಿಂದ ನಮ್ಮನ್ನು ರಕ್ಷಿಸುತ್ತದೆ ಎಂದೇ ಜನರು ನಂಬುತ್ತಾರೆ. ಆದರೆ ನೀವು ಸಂತೋಷದಿಂದ ತಿನ್ನುವ ಐಸ್‌ ಕ್ರೀಂ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?, ಹೌದು, ಐಸ್ ಕ್ರೀಂ ಅನ್ನು ಸಂರಕ್ಷಿಸಲು ಹಲವಾರು ರೀತಿಯ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ಐಸ್ ಕ್ರೀಮ್ ತಿನ್ನುವುದರಿಂದ ಸಿಗುವ ಪ್ರಯೋಜನಗಳು

ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ಫ್ರೆಶ್‌ನೆಸ್‌ ಸಿಗುತ್ತದೆ. ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ. ಮಾಹಿತಿಯ ಪ್ರಕಾರ, ಐಸ್ ಕ್ರೀಮ್ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಇದು ಆಯಾಸವನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಐಸ್ ಕ್ರೀಂನಲ್ಲಿ ಹಲವಾರು ಫ್ಲೇವರ್ಸ್‌ಗಳಿದ್ದು, ಜನರು ತಮ್ಮ ಆಯ್ಕೆಯ ಪ್ರಕಾರ ಸೇವಿಸುತ್ತಾರೆ. ಇದು ವಿಭಿನ್ನ ರುಚಿಯನ್ನು ಹೊಂದಿರುವ ಕಾರಣಕ್ಕಾಗಿಯೇ ಮಕ್ಕಳು ಮತ್ತು ವಯಸ್ಕರಿಗೆ ನೆಚ್ಚಿನ ಸಿಹಿತಿಂಡಿಯಾಗಿದೆ. ಐಸ್ ಕ್ರೀಮ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಹಲವರು ನಂಬುತ್ತಾರೆ. ಇದು ಮೆದುಳಿನಲ್ಲಿ ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

Read Also: ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್‌ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!

ಐಸ್ ಕ್ರೀಮ್‌ನ ಅನಾನುಕೂಲಗಳು

ತೂಕ ಹೆಚ್ಚಳ

ಐಸ್ ಕ್ರೀಂ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು.

ಹಲ್ಲಿನ ಸಮಸ್ಯೆ

ಐಸ್ ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ಹಲ್ಲುಗಳಲ್ಲಿ ಕುಳಿಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಹೃದಯಾಘಾತ ರೋಗಿಗಳು ದೂರವಿರಿ

ಐಸ್ ಕ್ರೀಂನ ಅತಿಯಾದ ಸೇವನೆಯು ಹೃದಯಾಘಾತ ರೋಗಿಗಳಿಗೆ ಹಾನಿಕಾರಕವಾಗಿದೆ. ಏಕೆಂದರೆ ಐಸ್ ಕ್ರೀಂ ಸಂರಕ್ಷಿಸಲು ಇದರಲ್ಲಿ ಅನೇಕ ರೀತಿಯ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಹೃದಯಕ್ಕೆ ತುಂಬಾ ಹಾನಿಕಾರಕವಾಗಿದೆ.

ಜೀರ್ಣಕ್ರಿಯೆ ಸಮಸ್ಯೆ ಇದ್ರೆ ತಿನ್ನಲೇಬೇಡಿ

ಮಾಹಿತಿ ಪ್ರಕಾರ ಐಸ್ ಕ್ರೀಂ ತಿಂದರೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ನೀವು ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಬೇಕು.

You Might Also Like

ಅರೆರೆ ಕಾಫಿ ಪುಡಿಯೊಂದಿದ್ದರೆ ಸಾಕು ಮನೆಯೆಲ್ಲಾ ಸಂಪೂರ್ಣ ಸ್ವಚ್ಛ… ಹೇಗೆ ಗೊತ್ತಾ?  

ಮಲಗುವ ಮುನ್ನ ನೀರು ಕುಡಿಯುತ್ತೀರಾ… ಅನುಕೂಲ ಮತ್ತು ಅನಾನುಕೂಲಗಳೇನು?

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಒಳ್ಳೆಯದು…ಅನುಕೂಲವೆಷ್ಟು, ಅನಾನುಕೂಲವೆಷ್ಟು?

ಟ್ರೆಂಡ್‌ ಆಯ್ತು ಎದೆ ಹಾಲಿನ ಆಭರಣ…ತಯಾರಿಕೆ, ಆರೈಕೆ, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Benifits Of Face Steam: ವಾರಕ್ಕೊಮ್ಮೆ ಕೇವಲ ಐದು ನಿಮಿಷ ಸ್ಟೀಮ್‌ ತೆಗೆದುಕೊಂಡ್ರೆ ಸಿಗುತ್ತೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳು..

TAGGED:Healthhealth benefitsice creamLifestyleಆರೋಗ್ಯಐಸ್‌ ಕ್ರೀಮ್‌ಲೈಫ್‌ಸ್ಟೈಲ್‌ಸ್ಕೈ ಕನ್ನಡ
Share This Article
Facebook Email Print
Share
Previous Article ಎರಡು ದಿನವಾಗುತ್ತಿದ್ದಂತೆ ಬಾಳೆಹಣ್ಣುಗಳು ಕಪ್ಪಾಗುತ್ತಿವೆಯೇ?,  ಈ ಟಿಪ್ಸ್ ಫಾಲೋ ಮಾಡಿ…ಒಂದು ವಾರ ಫ್ರೆಶ್ ಆಗಿರುತ್ತದೆ!  
Next Article ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸ್ತೀರಾ, ನಿಮ್ಮ ಈ ಅಭ್ಯಾಸದಿಂದ ಏನೆಲ್ಲಾ ಅಡ್ಡ ಪರಿಣಾಮ ಉಂಟಾಗುತ್ತೆ ಗೊತ್ತಾ?  

ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್‌ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!

ನೀವಂದುಕೊಂಡ ಹಾಗೆ ಈ 10 ಫುಡ್‌ಗಳು ಸಸ್ಯಾಹಾರವೇ ಅಲ್ಲ…ಹಾಗಾದ್ರೆ ಏನು?

ಸೆಪ್ಟೆಂಬರ್‌ನಲ್ಲಿ ಗ್ರಹಗಳ ಬದಲಾವಣೆಯಿಂದ ಈ 5 ರಾಶಿಯವರು ಬಯಸಿದ್ದನ್ನು ಪಡೆಯುತ್ತೀರಿ   

ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್   

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?