Shaving Cream Uses: ಶೇವಿಂಗ್ ಕ್ರೀಮ್ ಇರುವುದು ಅನಗತ್ಯ ಕೂದಲನ್ನು ತೆಗೆಯುಲು ಎಂದೇ ಅನೇಕರು ಭಾವಿಸಿರುವುದು. ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇಕಾದರೆ ನೀವು ಶೇವಿಂಗ್ ಕ್ರೀಮ್ ಅನ್ನು ಈ ಕೆಳಕಂಡ ರೀತಿಯಲ್ಲಿ ಬಳಸಬಹುದು. ಹೌದು, ನಿಮ್ಮ ಮನೆಯನ್ನು ಶುಚಿಗೊಳಿಸುವುದರಿಂದ ಹಿಡಿದು ಆಭರಣಗಳನ್ನು ಕ್ಲೀನ್ ಮಾಡುವ ತನಕ ಅನೇಕ ವಿಷಯಗಳಲ್ಲಿ ಇದು ಸಹಾಯಕಾರಿಯಾಗಿದೆ. ಶೇವಿಂಗ್ ಕ್ರೀಮ್ ಸಹಾಯದಿಂದ ನೀವು ಮನೆಯ ಅನೇಕ ಸಣ್ಣ ಕೆಲಸಗಳನ್ನು ಸುಲಭಗೊಳಿಸಿಕೊಳ್ಳಬಹುದು. ಹಾಗಾದರೆ ಬನ್ನಿ, ಇಂದು ಈ ಲೇಖನದಲ್ಲಿ ನಾವು ಶೇವಿಂಗ್ ಕ್ರೀಮ್ ಅನ್ನು ಹೇಗೆಲ್ಲಾ ಬಳಸಬಹುದು ಎಂದು ತಿಳಿಯೋಣ…
ಬಟ್ಟೆಗಳ ಮೇಲಿನ ಕಲೆಗಳನ್ನು ತೆಗೆಯಲು
ಶೇವಿಂಗ್ ಕ್ರೀಮ್ ಸಹಾಯದಿಂದ ಕಾರ್ಪೆಟ್ ಮತ್ತು ಬಟ್ಟೆಗಳಿಗೆ ಹತ್ತಿರುವ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಕಾರ್ಪೆಟ್ ಮೇಲಿನ ಕಲೆಗಳನ್ನು ತೆಗೆದುಹಾಕಲು ಮೊದಲಿಗೆ ಶೇವಿಂಗ್ ಕ್ರೀಮ್ ಅನ್ನು ಹಚ್ಚಿ. ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದೇ ರೀತಿ, ಕಾಫಿ, ಟೀ ಅಥವಾ ಆಹಾರದ ಕಲೆಗಳನ್ನು ತೆಗೆದುಹಾಕಲು ಶೇವಿಂಗ್ ಕ್ರೀಮ್ ಅನ್ನು ಹಚ್ಚಿ. ಸ್ವಲ್ಪ ಸಮಯ ಬಿಟ್ಟು ಎಂದಿನಂತೆ ತೊಳೆಯಿರಿ.
ಬಾತ್ ರೂಂ ಸ್ವಚ್ಛಗೊಳಿಸಿ
ಸ್ನಾನಗೃಹದ ಸಿಂಕ್, ಟ್ಯಾಪ್ ಮತ್ತು ಶವರ್ ಮುಂತಾದ ವಿವಿಧ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಶೇವಿಂಗ್ ಕ್ರೀಮ್ ಅನ್ನು ಬಳಸಬಹುದು. ಈ ಸ್ಥಳಗಳಲ್ಲಿ ಸೋಪಿನ ಕಲ್ಮಶಗಳು ಹೆಚ್ಚಾಗಿ ಉಳಿಯುತ್ತವೆ. ಆದರೆ ಶೇವಿಂಗ್ ಕ್ರೀಮ್ ಈ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಹೊಳಪನ್ನು ನೀಡುತ್ತದೆ. ಸ್ನಾನಗೃಹದಲ್ಲಿ ಕನ್ನಡಿಯನ್ನು ಸ್ವಚ್ಛಗೊಳಿಸಲು ಶೇವಿಂಗ್ ಕ್ರೀಮ್ ಅನ್ನು ಸಹ ಬಳಸಬಹುದು.
ಬೆಳ್ಳಿ ಆಭರಣ ಸ್ವಚ್ಛಗೊಳಿಸಲು
ಬೆಳ್ಳಿಯ ಆಭರಣಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಏಕೆಂದರೆ ಅದು ಕಾಲಾನಂತರದಲ್ಲಿ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇಂತಹ ಸಮಯದಲ್ಲಿ ಆಭರಣಗಳನ್ನು ಸ್ವಚ್ಛಗೊಳಿಸಲು ಶೇವಿಂಗ್ ಕ್ರೀಮ್ ಬಳಸಿ. ಇದಕ್ಕಾಗಿ ಆಭರಣದ ಮೇಲೆ ಶೇವಿಂಗ್ ಕ್ರೀಮ್ ಹಚ್ಚಿ, ಸ್ವಲ್ಪ ಸಮಯ ಬಿಡಿ. ಆ ನಂತರ ಅದನ್ನು ನೀರಿನಿಂದ ತೊಳೆಯಿರಿ. ಆಭರಣಗಳು ಒಣಗಿದಾಗ, ಅದನ್ನು ಟಿಶ್ಯೂನಲ್ಲಿ ಒಮ್ಮೆ ಸುತ್ತಿ. ತದನಂತರ ಬೆಳ್ಳಿ ಆಭರಣಗಳು ಮತ್ತೆ ಹೊಸದರಂತೆ ಕಾಣುವುದನ್ನು ನೀವು ನೋಡುತ್ತೀರಿ.