Nadi Astrology: ಜ್ಯೋತಿಷ್ಯಶಾಸ್ತ್ರದಲ್ಲಿ ನಾಡಿ ಜ್ಯೋತಿಷ್ಯವು ಬಹಳ ಪ್ರಾಚೀನ ಕಾಲದ ಶಾಸ್ತ್ರವಾಗಿದೆ. ನಾಡಿ ಶಾಸ್ತ್ರದಲ್ಲಿ ಭೃಗುನಾಡಿ, ಸಪ್ತರ್ಷಿನಾಡಿ, ಸ್ಕಂದನಾಡಿ, ಗರ್ಗನಾಡಿ, ಮುಂತಾದ ನಾಡಿ ಶಾಸ್ತ್ರಗಳು ಲಭ್ಯವಿದೆ. ನಾಡಿ ಶಾಸ್ತ್ರವೆಂದರೆ ಕೈಯ ನಾಡಿ ಹಿಡಿದು ಅದರ ಮಿಡಿತದಿಂದ ಫಲ ಹೇಳುವುದು. ಈ ಹಿಂದೆ ಪ್ರಾಚೀನ ಆಚಾರ್ಯರು ಇದನ್ನು ಮಾಡುತ್ತಿದ್ದರು.
ಈ ಶಾಸ್ತ್ರದಿಂದ ವ್ಯಕ್ತಿಯ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ಆರೋಗ್ಯ, ಸಂಸಾರಿಕ ಜೀವನ, ವೃತ್ತಿಬದುಕು, ಹಣಕಾಸು, ಮಕ್ಕಳ ಭವಿಷ್ಯವನ್ನು ಕರಾರುವಾಕ್ಕಾಗಿ ಹೇಳಬಹುದು. ವ್ಯಕ್ತಿಯ ಕೈಯ ನಾಡಿಯಿಂದ ಪಂಚತತ್ವಗಳ ಸಮತೋಲನವನ್ನು ಅರಿತು ಹೇಳುವ ಈ ಅಂತರ್ ನಾಡಿ ಜ್ಯೋತಿಷ್ಯವನ್ನು ಕೆಲವಾರು ವರ್ಷಗಳಿಂದ ಶ್ರೀ ದಿನೇಶ್ ಆನಂದ್ ಅವರು ಅಭ್ಯಸಿಸುತ್ತಿದ್ದಾರೆ.
ಇವರು ಕೈಯ ನಾಡಿಯನ್ನು ಹಿಡಿದು ಪರೀಕ್ಷಿಸಿದಾಗ, ಎದುರಿಗಿರುವ ವ್ಯಕ್ತಿಯ ಸಂಬಂಧಿತವಾಗಿ, ಭೂತ, ವರ್ತಮಾನ , ಭವಿಷ್ಯದಲ್ಲಿ ನಡೆದಿರುವಂತಹ, ನಡೆಯಲಿರುವಂತಹ ಘಟನೆಗಳು, ಇವರ ಮನಸ್ಸಿನಲ್ಲಿ ಚಿತ್ರವಾಗಿ ಮೂಡುತ್ತದೆ. ಉದಾ; ದೇಹದಲ್ಲಿ ಬೆನ್ನುಮೂಳೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರೆ, ಅಥವಾ ಮುಂದೆ ಬರುವಂತಹ ಸಾಧ್ಯತೆಗಳಿದ್ದರೆ, ಬೆನ್ನುಮೂಳೆಯ ಚಿತ್ರ ಕಾಣಿಸಿಕೊಳ್ಳುತ್ತೆ. ಹಾಗೆಯೇ ಖಿನ್ನತೆ, ಭಯ, ಕೀಳರಿಮೆ ಇಂತಹ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಸಹ ಅದನ್ನು ಸಂಕೇತಿಸುವ ಪ್ರಾಣಿ, ಪಕ್ಷಿ, ಪ್ರಕೃತಿ, ಆಹಾರಕ್ಕೆ ಸಂಬಂಧಿಸಿದ ದೃಶ್ಯಗಳು, ಇವರ ಮನಪಲ್ಲಟದಲ್ಲಿ ಸಿನಿಮಾ ರೀಲ್ಸ್ನ ಹಾಗೆ ಪಟ್ಟಂತ ಕ್ಷಣಾರ್ಧದಲ್ಲಿ ಹಾದು ಹೋಗುತ್ತದೆ. ಪ್ರಶ್ನಾರ್ಥಿಯ ಕೈಯ ನಾಡಿ ನೋಡಿದಾಗ ಈ ಸಂಕೇತಗಳು ವ್ಯಕ್ತಿಯ ಸಮಸ್ಯೆಗಳ ಲಕ್ಷಣವಾಗಿ ಇವರ ಅಂತಃಪ್ರಜ್ಞೆಗೆ(intuition) ಗೋಚರಿಸುತ್ತವೆ.
ನಂತರ ಪ್ರಶ್ನಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ, ಲಕ್ಷಣದ ಹಿನ್ನೆಲೆ, ಕಾರಣ ಕಂಡುಹಿಡಿದು, ಅದಕ್ಕೆ ತಕ್ಕನಾದ ಸಮಾಧಾನ, ಪರಿಹಾರಗಳನ್ನು ಕರಾರುವಕ್ಕಾಗಿ ಸೂಚಿಸುತ್ತಾರೆ. ಅದರಂತೆಯೇ ದೈಹಿಕ ಸಮಸ್ಯೆಗಳಿಗೆ ಪ್ರಕೃತಿಗೆ ಹತ್ತಿರವಾದ ಸರಳ ಔಷಧಿ, ಪರಿಹಾರ ಇತ್ಯಾದಿಗಳನ್ನು ಹೇಳುತ್ತಾರೆ. ಇತ್ತೀಚೆಗೆ ಯಾವುದೇ ಕಾಯಿಲೆ ಕಾಣಿಸಿಕೊಂಡಾಗ ತಮ್ಮ ಸಮಸ್ಯೆಗೆ ಯಾವ ಚಿಕಿತ್ಸಾ ಪದ್ದತಿ ಎನ್ನುವ ಗೊಂದಲ ಸಾಮಾನ್ಯ. ಈ ಅಂತರ್ ನಾಡಿ ಜ್ಯೋತಿಷ್ಯದಲ್ಲಿ ಅಂಥವರಿಗೆ ತಕ್ಷಣವೇ ಮಾರ್ಗದರ್ಶನ ಸಿಗುತ್ತದೆ.
ಇವರನ್ನು ಮುಖತಃ ಭೇಟಿ ಮಾಡಲು ಸಾಧ್ಯವಾಗದವರು, ಭಾವಚಿತ್ರಗಳನ್ನು ವಾಟ್ಸಪ್ ಮುಖಾಂತರ ಕಳಿಸಿ ಕೊಟ್ಟಲ್ಲಿ, ಮುಖ ಚಹರೆಯ ಆಧಾರದ ಮೇಲೆ ಸಮಸ್ಯೆ, ಭವಿಷ್ಯ ಮತ್ತು ಪರಿಹಾರಗಳನ್ನು ಸೂಚಿಸುತ್ತಾರೆ.
ಈ ವಿದ್ಯೆ ಇವರಿಗೆ ತನ್ನಿಂತಾನೇ ಅಂತಃಪ್ರಜ್ಞೆಯಿಂದ ಬಂದಿರುವಂತದ್ದು.
ಶಾಸ್ತ್ರೋಕ್ತ ಜ್ಯೋತಿಷ್ಯಶಾಸ್ತ್ರ
ಇದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿತುಕೊಂಡಿದ್ದು, ಜಾತಕ, ಪ್ರಶ್ನೆಗಳ ಮೂಲಕ ಭವಿಷ್ಯ ಹೇಳುತ್ತಾರೆ. ಜಾತಕ ಸಿದ್ದಪಡಿಸುವುದು, ವಧುವರರ ಜಾತಕದಈ ಹೊಂದಾಣಿಕೆಯನ್ನು ಮಾಡುತ್ತಾರೆ. ಹುಟ್ಟಿದ ದಿನಾಂಕ, ಸಮಯ, ಘಳಿಗೆ ಗೊತ್ತಿಲ್ಲದವರಿಗೂ, ಭಾವಕಾರಕಗಳ ಆಧಾರದ ಮೇಲೆ ಕರಾರುವಕ್ಕಾದ ಜಾತಕವನ್ನು ಸಿದ್ದಪಡಿಸಿಕೊಡುತ್ತಾರೆ.
ಶ್ರೀ ದಿನೇಶ್ ಆನಂದ್ ಪರಿಚಯ
ಇವರು ಮೆಕ್ಯಾನಿಕಲ್ ಇಂಜಿಯರಿಂಗ್ ಪದವೀಧರರಾಗಿದ್ದು, ಪ್ರತಿಷ್ಟಿತ ಕಂಪೆನಿಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಂತರ, ತಮ್ಮ ವೃತ್ತಿ ಜೀವನದಲ್ಲಾದ ಅನಿರೀಕ್ಷಿತ ಸೋಲು, ನೋವಿನಿಂದ ಹೊರಬರಲು, ಮನಃಶಾಂತಿಗೋಸ್ಕರ ಧ್ಯಾನ, ಪ್ರಾಣಾಯಾಮ, ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆಮೇಲೆ ತಮ್ಮ ವೃತ್ತಿಯನ್ನು ಬದಲಿಸಿ ಡಿಸೈನಿಂಗ್ ಕ್ಷೇತ್ರದಲ್ಲಿ ಮುಂದುವರಿದ್ದಾರೆ. ಆರಂಭದಲ್ಲಿ ತಮ್ಮಲ್ಲಿರುವ ಅಂತಃಪ್ರಜ್ಞೆ ಗೋಚರಿಸಿ ಸಂಬಂಧಿಕರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಭವಿಷ್ಯವನ್ನು ಹೇಳುತ್ತಿದ್ದರು. ನಂತರ ಕೆಪಿ ಜ್ಯೋತಿಷ್ಯವನ್ನು ಶಾಸ್ತ್ರೋಕ್ತವಾಗಿ ಬ್ರಹ್ಮವೇದ ಗುರುಕುಲದಲ್ಲಿ ಕಲಿತಿದ್ದಾರೆ. ಎಷ್ಟೋ ಜನರಿಗೆ ಸಂಸಾರಿಕ, ಆರೋಗ್ಯ, ವೃತ್ತಿಜೀವನದ ಸಮಸ್ಯೆಗಳನ್ನು ತಮ್ಮ ಅಂತಃಪ್ರಜ್ಞೆಯ ಮೂಲಕ ಗೊತ್ತುಮಾಡಿ, ಅದಕ್ಕೆ ಸೂಕ್ತ ಪರಿಹಾರವನ್ನು ಕೊಟ್ಟಿರುತ್ತಾರೆ.
ಶ್ರೀ ದಿನೇಶ್ ಆನಂದ್
ಫೋ; 8660433045