Garlic On Face: ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಇನ್‌ಫ್ಲುಯೆನ್ಸರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಅದೇನಪ್ಪಾ ಅಂದ್ರೆ ಬೆಳ್ಳುಳ್ಳಿಯನ್ನು ಮುಖಕ್ಕೆ ಹಚ್ಚಲು ಸಲಹೆ ನೀಡಲಾಗುತ್ತಿದೆ. ಬೆಳ್ಳುಳ್ಳಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆಯೆಂದು ಅವರು ತಿಳಿಸಿದ್ದಾರೆ. ಅನೇಕ ಜನರು ಈ ಟ್ರೆಂಡ್ ಅನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ತಜ್ಞರು ಮಾತ್ರ ಇದು ನೀವಂದುಕೊಂಡಷ್ಟು ಸುರಕ್ಷಿತವಲ್ಲ ಎಂದು ಹೇಳುತ್ತಾರೆ.
ಹೌದು, ಚರ್ಮ ರೋಗ ತಜ್ಞರ ಪ್ರಕಾರ ಬೆಳ್ಳುಳ್ಳಿಯನ್ನು ನೇರವಾಗಿ ಮುಖದ ಮೇಲೆ ಹಚ್ಚುವುದರಿಂದ ಸುಡುವಿಕೆ, ತುರಿಕೆ, ಚರ್ಮದ ಕೆಂಪು ಮತ್ತು ಶಾಶ್ವತ ಕಲೆಗಳು ಉಂಟಾಗಬಹುದು (ವಿಶೇಷವಾಗಿ ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ). ಆದ್ದರಿಂದ ತ್ವಚೆಯ ಮೇಲೆ ಬೆಳ್ಳುಳ್ಳಿಯನ್ನು ಹಚ್ಚುವ ಮೊದಲು ಜಾಗರೂಕರಾಗಿರಬೇಕು ಮತ್ತು ತಜ್ಞರ ಸಲಹೆಯನ್ನು ಪಡೆಯುವುದು ಅವಶ್ಯಕ. ಈ ಲೇಖನದಲ್ಲಿ ಬೆಳ್ಳುಳ್ಳಿಯನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು. ಜೊತೆಗೆ ಅದನ್ನು ಸುರಕ್ಷಿತವಾಗಿ ಬಳಸುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ.
Read Also: Hair Care: ಕೂದಲನ್ನು ವಾರದಲ್ಲಿ ಎಷ್ಟು ಬಾರಿ ತೊಳೆಯಬೇಕು… ಬಹಳ ಬೇಗ ಬೆಳ್ಳಗಾಗುವುದಕ್ಕೆ ಕಾರಣವೇನು ಗೊತ್ತೇ?
ಬೆಳ್ಳುಳ್ಳಿಯ ಗುಣಲಕ್ಷಣಗಳು
ಬೆಳ್ಳುಳ್ಳಿ ಅನೇಕ ನೈಸರ್ಗಿಕ ಗುಣಗಳನ್ನು ಹೊಂದಿದೆ. ಇದನ್ನು ಶತ ಶತಮಾನಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಇದರಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಕಂಡುಬರುತ್ತವೆ. ಇದು ದೇಹವನ್ನು ಒಳಗಿನಿಂದ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ಚರ್ಮಕ್ಕೂ ಪ್ರಯೋಜನಕಾರಿ ಎಂದು ಹಲವರು ನಂಬುತ್ತಾರೆ.
ಬ್ಯೂಟಿ ಇನ್‌ಫ್ಲುಯೆನ್ಸರ್ಸ್ ಹೇಳುವುದೇನು?
“ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳನ್ನು ಕಡಿಮೆ ಮಾಡುತ್ತವೆ. ಇದರ ನಿಯಮಿತ ಬಳಕೆಯು ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬ್ಯೂಟಿ ಇನ್‌ಫ್ಲುಯೆನ್ಸರ್ಸ್ ಹೇಳಿಕೊಳ್ಳುತ್ತಿದ್ದಾರೆ. ಬೆಳ್ಳುಳ್ಳಿ ಪೇಸ್ಟ್ ಮಾಡಿ ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳುವಂತೆ ಸಲಹೆ ನೀಡಿದರೆ, ಮತ್ತೆ ಕೆಲವರು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ರಾತ್ರಿಯಿಡೀ ಹಾಗೆ ಬಿಡುವಂತೆ ಸಲಹೆ ನೀಡುತ್ತಿದ್ದಾರೆ.
ತಜ್ಞರು ಕೊಟ್ಟ ಎಚ್ಚರಿಕೆ
ಚರ್ಮರೋಗ ತಜ್ಞರು ಈ ಟ್ರೆಂಡಿಂಗ್ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದ್ದಾರೆ. ಜನರು ತಮ್ಮ ಮುಖದ ಮೇಲೆ ಬೆಳ್ಳುಳ್ಳಿಯನ್ನು ಹಚ್ಚುವ ಮೊದಲು ಜಾಗರೂಕರಾಗಿರಿ ಎಂದು ಸಲಹೆ ನೀಡುತ್ತಿದ್ದಾರೆ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಅಂಶವಿದ್ದು, ಇದು ಚರ್ಮಕ್ಕೆ ಹಾನಿ ಮಾಡುತ್ತದೆ (ವಿಶೇಷವಾಗಿ ಚರ್ಮವು ಸೂಕ್ಷ್ಮವಾಗಿದ್ದರೆ)
ಬೆಳ್ಳುಳ್ಳಿಯ ಅಡ್ಡಪರಿಣಾಮಗಳು
ಸುಡುವಿಕೆ ಮತ್ತು ತುರಿಕೆ: ಬೆಳ್ಳುಳ್ಳಿಯನ್ನು ನೇರವಾಗಿ ಚರ್ಮದ ಮೇಲೆ ಹಚ್ಚುವುದರಿಂದ ಸುಡುವಿಕೆ ಅಥವಾ ತುರಿಕೆ ಉಂಟಾಗುತ್ತದೆ.
ಚರ್ಮ ಕೆಂಪಾಗುವುದು: ಸೂಕ್ಷ್ಮ ತ್ವಚೆ ಇರುವವರು ಬೆಳ್ಳುಳ್ಳಿಯ ಬಳಕೆ ಮಾಡುವುದರಿಂದ ಚರ್ಮ ಕೆಂಪಗಾಗುವುದು ಮತ್ತು ಊದಿಕೊಳ್ಳುವುದು.
ಗಾಯದ ಗುರುತುಗಳು: ಬೆಳ್ಳುಳ್ಳಿ ಹಚ್ಚಿದ ನಂತರ ಆದ ಗಾಯಗಳು ಕೆಲವು ಸಂದರ್ಭಗಳಲ್ಲಿ ಮುಖದ ಮೇಲೆ ಗುರುತುಗಳನ್ನು ಹಾಗೆಯೇ ಬಿಡಬಹುದು.
ಬೆಳ್ಳುಳ್ಳಿಯನ್ನು ಮುಖಕ್ಕೆ ಹಚ್ಚುವ ಈ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರಬಹುದು, ಆದರೆ ಯೋಚಿಸದೆ ಅದನ್ನು ನಾವು ಅಳವಡಿಸಿಕೊಳ್ಳುವುದು ಅಪಾಯಕಾರಿ. ಬೆಳ್ಳುಳ್ಳಿ ಪ್ರಯೋಜನಗಳನ್ನು ಹೊಂದಿದೆ. ಆದರೆ ತ್ವಚೆಯ ಆರೈಕೆಯಲ್ಲಿ ಯಾವಾಗಲೂ ಜಾಗರೂಕರಾಗಿರಬೇಕು. ಯಾವುದೇ ಹೊಸ ಬ್ಯೂಟಿ ಟ್ರೆಂಡ್ ಅನ್ನು ಅಳವಡಿಸಿಕೊಳ್ಳುವ ಮೊದಲು, ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.