Beard Benefits: ಇತ್ತೀಚಿನ ದಿನಗಳಲ್ಲಿ ಯುವಕರು ಗಡ್ಡ ಬಿಡುವ ಫ್ಯಾಷನ್ ತುಸು ಹೆಚ್ಚೇ ಆಗಿದೆ. ಈಗೀಗ 15-16 ವರ್ಷ ವಯಸ್ಸಿನ ಹುಡುಗರು ಕೂಡ ಗಡ್ಡ ಬಿಡಲು ಪ್ರಾರಂಭಿಸಿದ್ದಾರೆ. ಆದರೆ ಹುಡುಗರು ಗಡ್ಡವನ್ನು ಏಕೆ ಬಿಡುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. “ಹುಡುಗಿಯರು ಗಡ್ಡವನ್ನು ಇಷ್ಟಪಡುತ್ತಾರೆ. ಹುಡುಗರು ಅವರನ್ನು ಮೆಚ್ಚಿಸಲೆಂದೇ ಗಡ್ಡವನ್ನು ಬೆಳೆಸುತ್ತಾರೆ ಎಂದು ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತಾರೆ” ಇದು ಒಂದು ಕಾರಣವಾಗಿರಬಹುದು. ಆದರೆ ಇದೊಂದೆ ಅಲ್ಲ, ಇನ್ನೂ ಅನೇಕ ಕಾರಣಗಳಿವೆ ಎಂದು ಸಂಶೋಧನೆಗಳು ತಿಳಿಸಿವೆ.
ಗಡ್ಡ ಬಿಡುವವರ ಬಗ್ಗೆ ಜನರು ಯೋಚಿಸುವುದೇನು?
ಕೆಲವರು ಗಡ್ಡಧಾರಿ ಹುಡುಗರು ಉತ್ತಮ ನಾಯಕರು, ವಿಶ್ವಾಸಾರ್ಹ ಮತ್ತು ಸ್ನೇಹಪರರು ಎಂದು ಹೇಳುತ್ತಾರೆ. ಮತ್ತೆ ಕೆಲವರು ಗಡ್ಡವಿರುವ ಹುಡುಗರು ಆಕ್ರಮಣಕಾರಿ ಮತ್ತು ಪ್ರಭಾವಶಾಲಿ ಎಂದು ಹೇಳುತ್ತಾರೆ.
Read Also: ಯಾವ ದೇಶದ ಪೊಲೀಸರು ಅತಿ ಹೆಚ್ಚು ಸಂಬಳ ಪಡೆಯುತ್ತಾರೆ ಗೊತ್ತಾ?
ಸಂಶೋಧನೆ ಹೇಳುವುದೇನು?
ಪೋಲೆಂಡ್ನ ಸಿಲೇಸಿಯಾ ವಿಶ್ವವಿದ್ಯಾಲಯ ಮತ್ತು ಇಟಲಿಯ ಪಡುವಾ ವಿಶ್ವವಿದ್ಯಾಲಯವು ಈ ವಿಷಯದ ಕುರಿತು ಸಂಶೋಧನೆ ನಡೆಸಿತು. ಇದರಲ್ಲಿ ಅನೇಕ ಹೊಸ ವಿಷಯಗಳನ್ನು ರಿವೀಲ್ ಮಾಡಲಾಯಿತು. ಈ ಸಂಶೋಧನೆಯು ಗಡ್ಡಧಾರಿ ಪುರುಷರು ನಂಬಲರ್ಹರು, ಉತ್ತಮ ತಂದೆ ಮತ್ತು ಪ್ರತಿಭಾವಂತರು ಎಂದು ಪರಿಗಣಿಸಲಾಗುತ್ತದೆ. ಇನ್ನೂ ಏನೆಲ್ಲಾ ಹೇಳಿದೆ?, ಇಲ್ಲಿದೆ ನೋಡಿ ಮಾಹಿತಿ.
ಸಮಾಜದಲ್ಲಿ ಹೆಚ್ಚಿನ ಗೌರವ
ಗಡ್ಡ ಇರದವರಿಗಿಂತ ಗಡ್ಡ ಇರುವ ಪುರುಷರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ನೀಡಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೆ, ಇಂತಹ ಪುರುಷರನ್ನು ಉತ್ತಮ ತಂದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪುರುಷರು ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಸುಲಭವಾಗಿ ನಂಬುತ್ತಾರೆ ಜನರು
ಗಡ್ಡವಿರುವ ವ್ಯಕ್ತಿಯನ್ನು ಪ್ರಬುದ್ಧ ಎಂದು ಪರಿಗಣಿಸಲಾಗುತ್ತದೆ. ಗಡ್ಡವು ಅವರನ್ನು ವಯಸ್ಸಾದವರಂತೆ ಕಾಣುವಂತೆ ಮಾಡುವುದರಿಂದ ಅಂತಹ ಜನರು ಅನುಭವಿಯಂತೆ ಕಾಣುತ್ತಾರೆ. ಜನರು ಅವರನ್ನು ಸುಲಭವಾಗಿ ನಂಬುತ್ತಾರೆ ಎಂದು ಹೇಳಲಾಗಿದೆ.
ಸುಲಭವಾಗಿ ಆಕರ್ಷಿತರಾಗುತ್ತಾರೆ
ಹುಡುಗರು ಗಡ್ಡವನ್ನು ಬಿಡಲು ಕಾರಣ ಅದು ಎಲ್ಲರ ಮಧ್ಯೆ ಉನ್ನತವಾಗಿ ಕಾಣಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ. ಇದರಿಂದ ಸುಲಭವಾಗಿ ಗಡ್ಡ ಇರುವ ಹುಡುಗರತ್ತ ಆಕರ್ಷಿತರಾಗುತ್ತಾರೆ ಜನರು.
ಆಕರ್ಷಿತವಾಗುವ ಹುಡುಗಿಯರು
ಹುಡುಗರು ಗಡ್ಡ ಬೆಳೆಸಲು ಇನ್ನೊಂದು ಕಾರಣವೆಂದರೆ ಹುಡುಗಿಯರನ್ನು ತಮ್ಮ ಕಡೆಗೆ ಆಕರ್ಷಿಸುವುದು. ಹುಡುಗಿಯರು ಗಡ್ಡವಿರುವ ಹುಡುಗರನ್ನು ಇಷ್ಟಪಡುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಈ ಕಾರಣಕ್ಕಾಗಿ ಹುಡುಗರು ಗಡ್ಡವನ್ನು ಬೆಳೆಸುತ್ತಾರೆ. ಹುಡುಗಿಯರು ಗಡ್ಡವಿಲ್ಲದ ಹುಡುಗರನ್ನು ಸಹ ಇಷ್ಟಪಡುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.