Apple: ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು (“An apple a day keeps the doctor away”) ಎಂಬ ನಾಣ್ಣುಡಿಯನ್ನು ನೀವೆಲ್ಲಾ ಖಂಡಿತ ಕೇಳಿರುತ್ತೀರಿ. ಆದರೆ ಕೆಲವರಿಗಿರುವ ಗೊಂದಲವೆಂದರೆ ಸೇಬಿನ ಹಣ್ಣನ್ನು ತಿನ್ನುವುದು ಉತ್ತಮವೇ ಅಥವಾ ಅದನ್ನು ಜ್ಯೂಸ್ ಆಗಿ ಕುಡಿಯುವುದು ಉತ್ತಮವೇ? ಎಂಬುದು. ಆದರೆ ಈ ಬಗ್ಗೆ ತಜ್ಞರು ಹೇಳುವುದೇನು ತಿಳಿಯೋಣ ಬನ್ನಿ…
ಸೇಬು ಹಣ್ಣಿನಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಸಂಪೂರ್ಣ ಪ್ಯಾಕೇಜ್ ಇದೆ. ಆದರೆ ಇದೇ ಹಣ್ಣಿನ ಜ್ಯೂಸ್ ಮಾಡಿದಾಗ ಅದರಲ್ಲಿನ ಸಕ್ಕರೆ ಮತ್ತು ಕ್ಯಾಲೋರಿಗಳ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸೇಬು ಹಣ್ಣಿನಲ್ಲಿ ಕರಗುವ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಆದರೆ ಜ್ಯೂಸ್ ಮಾಡಿದಾಗ ಈ ನಾರು ನಾಶವಾಗುತ್ತದೆ.
Also Read: ಸೋಮವಾರ, ಗುರುವಾರ ಮಾತ್ರವಲ್ಲ ಈ 5 ಜನ ಮೊಟ್ಟೆ ತಿನ್ನಲೇಬಾರದು!
ಸೇಬು ಹಣ್ಣು vs ಸೇಬು ಹಣ್ಣಿನ ಜ್ಯೂಸ್
ಆರೋಗ್ಯ ತಜ್ಞರ ಪ್ರಕಾರ ಸೇಬು ಹಣ್ಣು ಅತ್ಯಧಿಕ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ. ಪ್ರತಿದಿನ ಕೆಂಪು ಅಥವಾ ಹಸಿರು ಸೇಬನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸೇಬು ಹಣಿನ ಸಿಪ್ಪೆಗಳಲ್ಲಿರುವ ಪೆಟ್ರಿನ್ ಮತ್ತು ಇತರ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಲಬದ್ಧತೆ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ತಡೆಯುತ್ತದೆ.
ಆದರೆ ಸೇಬು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತ್ವರಿತವಾಗಿ ಹೆಚ್ಚಾಗುತ್ತದೆ, ಇದು ಯಕೃತ್ತಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಅದೇ ಸೇಬು ಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ, ಸೇಬು ಹಣ್ಣಿನ ಜ್ಯೂಸ್ ಕುಡಿಯುವುದಕ್ಕಿಂತ ಸೇಬು ಹಣ್ಣು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ, ಮುಂದಿನ ಬಾರಿ ನೀವು ಸೇಬು ಹಣ್ಣಿನ ಜ್ಯೂಸ್ ಕುಡಿಯಬೇಕೆಂದು ಬಯಸಿದರೆ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೇಬು ಹಣ್ಣನ್ನು ಸೇವಿಸುವುದು ಒಳಿತು ಅಲ್ಲವೇ…