By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಮೊದಲ ಸಿನಿಮಾದಲ್ಲೇ ಹೃತಿಕ್‌ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಮೊದಲ ಸಿನಿಮಾದಲ್ಲೇ ಹೃತಿಕ್‌ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?

Homeಮನರಂಜನೆ

ಮೊದಲ ಸಿನಿಮಾದಲ್ಲೇ ಹೃತಿಕ್‌ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?

Sky Kannada News
Last updated: October 17, 2024 2:57 pm
By Sky Kannada News
7 months ago
Share
2 Min Read
SHARE

Kaho Naa Pyar Hai: ಹೃತಿಕ್ ರೋಷನ್ ಬಾಲಿವುಡ್‌ನ ಸ್ಟಾರ್‌ ಹೀರೋ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಹೃತಿಕ್‌ ತಮ್ಮ ಮೊದಲ ಸಿನಿಮಾದಲ್ಲೇ ಯಶಸ್ಸಿನ ಶಿಖರವನ್ನೇರಿದರು. ಹೃತಿಕ್ ರೋಷನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಗ್ರೀಕ್ ಗಾಡ್ ಎಂದೇ ಕರೆಯುತ್ತಾರೆ. ಪವರ್‌ಫುಲ್ ಆಕ್ಷನ್, ಅದ್ಭುತ ನೃತ್ಯ ಮತ್ತು ಅತ್ಯುತ್ತಮ ನಟನೆಯ ಮೂಲಕ ಹೃತಿಕ್ ಪ್ರತಿಯೊಂದು ಚಿತ್ರದಲ್ಲೂ ತಾವೇನೆಂದು ಸಾಬೀತುಪಡಿಸಿದ್ದಾರೆ. ಆದರೆ ನಿಮಗೆ ಗೊತ್ತಾ… ಹೃತಿಕ್ ತಮ್ಮ ಮೊದಲ ಚಿತ್ರದ ಬಗ್ಗೆಯೇ ತುಂಬಾ ಚಿಂತಿತರಾಗಿದ್ದರು. ಹಾಗೇ ಆತಂಕಗೊಂಡಾಗ ಸಹಾಯಕ್ಕಾಗಿ ತಿರುಗಿ ನೋಡಿದ್ದು ಸಲ್ಮಾನ್ ಖಾನ್ ಕಡೆಗೆ.

ಹೃತಿಕ್ ರೋಷನ್ 2000 ರಲ್ಲಿ ತಮ್ಮ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ ʼಕಹೋ ನಾ ಪ್ಯಾರ್ ಹೈʼ (Kaho Naa… Pyaar Hai) ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಇವರೊಂದಿಗೆ ಅಮೀಷಾ ಪಟೇಲ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದ್ದು ಮಾತ್ರವಲ್ಲದೆ, ಹೃತಿಕ್ ಮತ್ತು ಅಮೀಶಾ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು.

ʼಕಹೋ ನಾ ಪ್ಯಾರ್ ಹೈʼ ಚಿತ್ರದಲ್ಲಿ ನಟಿಸುವಾಗ ಹೃತಿಕ್‌ಗೆ ಕೇವಲ 26 ವರ್ಷ. ಈ ಮೊದಲೇ ಹೇಳಿದ ಹಾಗೆ ತಮ್ಮ ಮೊದಲ ಚಿತ್ರದ ಬಗ್ಗೆ ಹೃತಿಕ್‌ ತುಂಬಾ ಚಿಂತಿತರಾಗಿದ್ದರು. ಆಗ ಅವರು ಆ ಸಮಯದಲ್ಲಿ ತಮಗಿದ್ದ ಸಮಸ್ಯೆಯ ಬಗ್ಗೆ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿದ್ದರಂತೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೃತಿಕ್ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

Also Read: ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   

ಈ ಚಿತ್ರಕ್ಕಾಗಿ ಹೃತಿಕ್ ಧ್ಯಾನ ಮಾಡಿದರು, ಹಾಡಿದರು, ಜಿಮ್‌ಗೆ ಹೋದರು ಮತ್ತು ಆ್ಯಕ್ಟಿಂಗ್ ಕ್ಲಾಸ್ಗೆ ತೆರಳಿದರು. ಏಕೆಂದರೆ ಚಿತ್ರದಲ್ಲಿ ಬರುವ ತಮ್ಮ ಎರಡೂ ಪಾತ್ರಗಳಲ್ಲಿ ಸಂಪೂರ್ಣವಾಗಿ ಫಿಟ್ ಆಗಿ ಕಾಣಿಸಿಕೊಳ್ಳಲು ಬಯಸಿದ್ದರು.

“ʼಕಹೋ ನಾ ಪ್ಯಾರ್ ಹೈʼ  ಚಿತ್ರದಲ್ಲಿ ನನ್ನದು ದ್ವಿಪಾತ್ರ. ವಿಶೇಷವಾಗಿ ದ್ವಿಪಾತ್ರಗಳಿರುವ ಚಿತ್ರಗಳಲ್ಲಿ ಫಿಟ್ ಮತ್ತು ಪರ್ಫೆಕ್ಟ್ ಆಗಿ ಕಾಣುವುದು ಬಹಳ ಮುಖ್ಯವಾಗುತ್ತದೆ. ಸಿನಿಮಾದಲ್ಲಿ ರೋಹಿತ್ ಮತ್ತು ರಾಜ್ ಇಬ್ಬರ ಲುಕ್‌ನಲ್ಲಿಯೂ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲು ನಾನು ಒಂದು ವರ್ಷ ತರಬೇತಿ ತೆಗೆದುಕೊಂಡೆ. ಆದರೆ ಯಾವುದೇ ರಿಸಲ್ಟ್‌ ಕಾಣಿಸಲಿಲ್ಲ. ಇದಾದ ನಂತರ ನೇರವಾಗಿ ಸಲ್ಮಾನ್ ಖಾನ್ ಗೆ ಕರೆ ಮಾಡಿ ದೇಹ ಫಿಟ್ ಆಗಲು ಟಿಪ್ಸ್ ಕೇಳಿದ್ದೆ. ಆಗ ಸಲ್ಮಾನ್‌ಗೆ ನನ್ನ ಪರಿಚಯವೂ ಇರಲಿಲ್ಲ. ಯಾರು ಹೆಚ್ಚು ಫಿಟ್ ಆಗಿ ಕಾಣುತ್ತಾರೆ ಎಂಬ ಪ್ರಶ್ನೆಯನ್ನು ನಾನೇ ಕೇಳಿಕೊಂಡೆ. ಸಲ್ಮಾನ್ ಖಾನ್ ಅವರಿಂದ ಉತ್ತರ ಬಂದಿದ್ದರಿಂದ ನೇರವಾಗಿ ಅವರ ಬಳಿ ಸಲಹೆ ಕೇಳಿದ್ದೆ” ಎಂದು ಹೃತಿಕ್ ತಿಳಿಸಿದ್ದಾರೆ.

 

You Might Also Like

ಅರೆರೆ ಕಾಫಿ ಪುಡಿಯೊಂದಿದ್ದರೆ ಸಾಕು ಮನೆಯೆಲ್ಲಾ ಸಂಪೂರ್ಣ ಸ್ವಚ್ಛ… ಹೇಗೆ ಗೊತ್ತಾ?  

ಈ ದೇವಾಲಯದಲ್ಲಿ ದೇವರನ್ನು ಪೂಜಿಸುವುದಿಲ್ಲ, ವಿಗ್ರಹಗಳೂ ಇಲ್ಲ, ಆದರೂ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..ಹೇಗೆ ಗೊತ್ತಾ?

ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  

Health Tips: ತೂಕ ನಷ್ಟಕ್ಕೆ, ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿ ಕಾಯಿಲೆಗೂ ಪ್ರಯೋಜನಕಾರಿ ಮೆಂತ್ಯ ಕಾಳು… ಯಾವಾಗ ಮತ್ತು ಹೇಗೆ ಸೇವಿಸಬೇಕು?

ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?

TAGGED:BollywoodEntertainmenthrithik roshanSkyKanndaಬಾಲಿವುಡ್‌ಹೃತಿಕ್ ರೋಷನ್
Share This Article
Facebook Email Print
Share
Previous Article ಒಣಗಿದ ಹೂವನ್ನು ಎಸೆಯಬೇಡಿ….ಅದು ಈ ರೀತಿಯೂ ಉಪಯೋಗವಾಗಲಿದೆ!
Next Article ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿದೆ ಎಐ ಕಾರ್ಡ್; ನೋಂದಾಯಿಸಿದ ವಿದ್ಯಾರ್ಥಿಗೆ AI ತರಬೇತಿ, ಸ್ಕಾಲರ್ ಶಿಪ್…ನೋಂದಣಿಗೆ ಅ.31 ಕೊನೆ ದಿನ  
Leave a Comment

Leave a Reply Cancel reply

Your email address will not be published. Required fields are marked *

You Might Also Like

Chandra grahan 2024 horoscope: ಚಂದ್ರಗ್ರಹಣದ ಮೊದಲು ಈ ರಾಶಿಚಕ್ರ ಚಿಹ್ನೆಗಳ ಜನರು ಜಾಗರೂಕರಾಗಿರಬೇಕು..ಯಾರು, ಯಾವ ವಿಷ್ಯದಲ್ಲಿ?  

ಸ್ವರೂಪ ಬದಲಿಸಿದ ಆಕಾಶ ಬುಟ್ಟಿ…ದೀಪಾವಳಿಯಂದು ಇದನ್ನು ಬೆಳಗಿಸುವ ಹಿಂದಿನ ಉದ್ದೇಶ ಮತ್ತು ಮಹತ್ವ

ಎಳನೀರು vs ನಿಂಬೆ ಹಣ್ಣಿನ ನೀರು: ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಗಣೇಶೋತ್ಸವದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಗಣಪತಿಯನ್ನು ನೋಡಿದರೆ ಅದರ ಅರ್ಥವೇನು?

ಮದುವೆಯಲ್ಲಿ ಅದಿತಿ ರಾವ್ ಹೈದರಿ ಧರಿಸಿದ್ದ ಮಹೇಶ್ವರಿ ಟಿಶ್ಯೂ ಲೆಹೆಂಗಾ, ಸುಂದರವಾದ ವಜ್ರಾಭರಣಗಳ ಸ್ಪೆಷಾಲಿಟಿಯೇನು ಗೊತ್ತಾ?

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?