ಓದಿದಾಗ ಸಿನಿಮಾ ಸ್ಟೋರಿ ತರಹ ಕಂಡರೂ ಇದು ನಟಿ ಜೂಹಿ ಚಾವ್ಲಾ ಜೀವನದಲ್ಲಿ ನಡೆದ ರಿಯಲ್ ಲೈಫ್ ಸ್ಟೋರಿ. ಜೂಹಿ ಚಾವ್ಲಾ ಮತ್ತು ಜೈ ಮೆಹ್ತಾ ಅವರ ಮೊದಲ ಭೇಟಿ ಜೂಹಿ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಆಯಿತು. ಮೆಹ್ತಾ ಗ್ರೂಪ್ನ ವಾರಸುದಾರರಾದ ಜೈ ಮೆಹ್ತಾ ಅವರು ಆಗಲೇ ಪ್ರಸಿದ್ಧ ಉದ್ಯಮಿಯಾಗಿದ್ದರು. ಹಾಗೆ ನೋಡಿದರೆ ಜೂಹಿ ಮತ್ತು ಜೈ ಆರಂಭದಲ್ಲಿ ಕೇವಲ ಸ್ನೇಹಿತರಾಗಿದ್ದರು.
ಜೂಹಿ ಚಾವ್ಲಾ ಜೈ ಮೆಹ್ತಾ ಅವರ ಎರಡನೇ ಪತ್ನಿ. ಜೈ ಮೆಹ್ತಾ ಅವರು ಸುಜಾತಾ ಬಿರ್ಲಾ ಅವರನ್ನು ಮೊದಲು ವಿವಾಹವಾಗಿದ್ದರು. ಆದರೆ 1990ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸುಜಾತಾ ಬಿರ್ಲಾ ಸಾವನ್ನಪ್ಪಿದ್ದರು. ಈ ಅಪಘಾತದ ನಂತರ ಜೂಹಿ ತಾಯಿ ಕೂಡ ಲೋಕಕ್ಕೆ ವಿದಾಯ ಹೇಳಿದರು. ಆಗ ಜೂಹಿ ಮತ್ತು ಜೈ ಇಬ್ಬರೂ ಬಹುತೇಕ ಒಂಟಿಯಾಗಿದ್ದರು. ಈ ಅವಧಿಯಲ್ಲಿ ಇಬ್ಬರೂ ಪರಸ್ಪರ ಆಸರೆಯಾದರು. ಇದಾದ ನಂತರ ಜೂಹಿ ಮತ್ತು ಜೈ ಮೆಹ್ತಾ ನಡುವೆ ಆತ್ಮೀಯತೆ ಹೆಚ್ಚಾಗತೊಡಗಿತು. ಅಂತೂ 1995ರಲ್ಲಿ ಇಬ್ಬರೂ ರಹಸ್ಯವಾಗಿ ಮದುವೆಯಾದರು. ಜೂಹಿ ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ತಮ್ಮ ಮದುವೆಯನ್ನು ಮಾಧ್ಯಮಗಳಿಂದ ಮರೆಮಾಡಿದರು. ಕೊನೆಯವರೆಗೂ ಒಳ್ಳೆಯ ಸ್ನೇಹಿತರಾಗಿರುತ್ತೇವೆ ಎಂದೇ ಅಂದುಕೊಂಡಿದ್ದ ಜೂಹಿ-ಜೈ ಮೆಹ್ತಾ ಲೈಫಲ್ಲಿ ನಿಜಕ್ಕೂ ಆಗಿದ್ದಿಷ್ಟು…
Read Also: ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್
ಆದರೆ ಈ ಮದುವೆಗೆ ಸಂಬಂಧಿಸಿದಂತೆ ಜೂಹಿ ಅನೇಕ ವಿಷಯಗಳನ್ನು ಕೇಳಬೇಕಾಗಿ ಬಂತು. ಅನೇಕರು ಜೂಹಿಯನ್ನು ಗೇಲಿ ಮಾಡಿದರು. ಅಸಭ್ಯ ಕಾಮೆಂಟ್ಸ್ ಮಾಡಿದರು. ಅವರ ಪತಿಯನ್ನು ಮುದುಕ ಎಂದು ಕೂಡ ಕರೆದರು. ಜೂಹಿ ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂದೆಲ್ಲಾ ಹೇಳಿದರು.
ಜೂಹಿ ಚಾವ್ಲಾ ಅವರು 1988 ರಲ್ಲಿ ಖಯಾಮತ್ ಸೆ ಕಯಾಮತ್ ತಕ್ ಚಲನಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಭಾರಿ ಹಿಟ್ ಆಯಿತು. ಇದಾದ ನಂತರ ಜೂಹಿ ಹಿಂತಿರುಗಿ ನೋಡಲಿಲ್ಲ. ಆಕೆಯ ವೃತ್ತಿಜೀವನವು ಉತ್ತುಂಗಕ್ಕೇರುತ್ತಿದ್ದಂತೆ ಅವರು ತನಗಿಂತ ಐದು ವರ್ಷ ಹಿರಿಯ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾದರು.
ಮುದ್ದು ಮುಗುಳ್ನಗೆಗೆ ಹೆಸರುವಾಸಿಯಾಗಿರುವ ಜೂಹಿ ಚಾವ್ಲಾ ಅವರು ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 1984 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. 1986 ರಲ್ಲಿ ಸುಲ್ತಾನತ್ ಚಿತ್ರದ ಮೂಲಕ ತನ್ನ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ಜೂಹಿ ಅವರ ವೈಯಕ್ತಿಕ ಜೀವನವು ಸಹ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಜೂಹಿ ವಿವಾದಗಳಿಂದ ದೂರವಿರಲು ಇಷ್ಟಪಡುತ್ತಿದ್ದರೂ, ಅವರ ಮದುವೆ ವಿಷಯ ಮಾತ್ರ ಇಂದಿಗೂ ಗಾಸಿಪ್ ಕಾರಿಡಾರ್ಗಳಲ್ಲಿ ಕೇಳಿಬರುತ್ತಲೇ ಇರುತ್ತದೆ.