ಸಾಮಾನ್ಯವಾಗಿ ಮೂತ್ರ ವಿಸರ್ಜನೆ ತಡೆಯದಂತೆ ವೈದ್ಯರು ಸಲಹೆ ನೀಡುತ್ತಾರೆ. ಆಂಗ್ಲ ಭಾಷೆಯಲ್ಲಿ ಯೂರಿನ್ ಎಂದು ಕರೆಯಲ್ಪಡುವ ಮೂತ್ರ ನಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹಾಗೂ ಕಾಯಿಲೆಗಳ ಮಾಹಿತಿ ನೀಡಲು ಸಹಕಾರಿಯಾಗಿದೆ. ಮೂತ್ರದ ಬಣ್ಣ ನೋಡಿ ಒಬ್ಬ ವ್ಯಕ್ತಿಯು ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆಂದು ಹೇಳಬಹುದು. ಇದೆಲ್ಲಾ ಒಂದೆಡೆಯಾದರೆ ಮೂತ್ರ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮ್ಮಲ್ಲಿದ್ದರೆ ಅಂತಹ ಅಭ್ಯಾಸ ಸರಿಯೋ ತಪ್ಪೋ ಎಂಬುದನ್ನು ಮೊದಲು ತಿಳಿದುಕೊಳ್ಳಿ…
ಏಕೆಂದರೆ ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿದರೆ ಅದರಿಂದ ಅನೇಕ ಅನಾನುಕೂಲತೆಗಳಿವೆ. ಹೌದು, ಮೂತ್ರ ವಿಸರ್ಜನೆಯ ನಂತರ ನೀರನ್ನು ಸೇವಿಸುವುದರಿಂದ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Read Also: ಬೀಟ್ರೂಟ್ ಸಲಾಡ್ ಸೇವಿಸುವುದರಿಂದ ಸಿಗಲಿದೆ 5 ಪ್ರಯೋಜನಗಳು!
ತಕ್ಷಣ ಏಕೆ ನೀರು ಕುಡಿಯಬಾರದು?
ಒಳ್ಳೆಯ, ಸಣ್ಣ ಅಭ್ಯಾಸಗಳೇ ನಮ್ಮನ್ನು ರೋಗಗಳಿಂದ ದೂರವಿಡುವುದು. ಮೂತ್ರ ವಿಸರ್ಜನೆಯ ನಂತರ ತಕ್ಷಣವೇ ನೀರನ್ನು ಕುಡಿಯುವುದು ಒಳ್ಳೆಯದಲ್ಲ. ಇದು ಕೆಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಅಪ್ಪಿ ತಪ್ಪಿ ಕೆಲವೊಮ್ಮೆ ಮೂತ್ರ ವಿಸರ್ಜನೆಯ ನಂತರ ನೀರು ಕುಡಿಯುವುದು ಹಾನಿಕಾರಕವಲ್ಲ. ಆದರೆ ನೀವು ಇದನ್ನು ಪ್ರತಿದಿನ ಮಾಡಿದರೆ ಅದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಇಲ್ಲಿದೆ ನೋಡಿ ಉತ್ತರ
ಮೂತ್ರ ವಿಸರ್ಜನೆಯ ನಂತರ ಮೂತ್ರದ ಚೀಲವು ಖಾಲಿಯಾಗಿರುತ್ತದೆ. ಮೂತ್ರನಾಳದಿಂದ ಹೊರಬರಲು ಸಾಧ್ಯವಾಗದ ಕೆಲವು ಘಟಕಗಳು ಅದರಲ್ಲಿ ಉಳಿಯುತ್ತವೆ. ಅಂತಹ ಸಮಯದಲ್ಲಿ ನೀವು ನೀರು ಕುಡಿದಾಗ ಪದಾರ್ಥಗಳು ಕರಗುವುದಿಲ್ಲ. ಮೂತ್ರಪಿಂಡದಲ್ಲಿ ಕಲ್ಲುಗಳಾಗಲು ಕಾರಣವಾಗುತ್ತದೆ.
ಮೂತ್ರದ ಸೋಂಕಿಗೆ ದಾರಿ
ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ದೇಹಕ್ಕೆ ಹಾನಿಕಾರಕ. ಹೀಗೆ ಮಾಡುವುದರಿಂದ ಮೂತ್ರದ ಸೋಂಕು (UTI) ಉಂಟಾಗಬಹುದು. ವೈದ್ಯರ ಪ್ರಕಾರ, ಮೂತ್ರ ವಿಸರ್ಜನೆ ಮಾಡಿ ಕನಿಷ್ಠ 15 ನಿಮಿಷಗಳ ನಂತರ ನೀರನ್ನು ಕುಡಿಯಬೇಕು. ಇದು ಮೂತ್ರನಾಳದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು
ಮೂತ್ರ ವಿಸರ್ಜನೆಯ ನಂತರ ತಕ್ಷಣ ನೀರನ್ನು ಕುಡಿದರೆ ಇದು ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯವಾಗಿದೆ.
ಯಾವಾಗ ಎಷ್ಟು ಕುಡಿಯಬೇಕು?
ಮೂತ್ರ ವಿಸರ್ಜನೆಯ ನಂತರ ನೀವು ಎಷ್ಟು ಸಮಯದ ನಂತರ ನೀರನ್ನು ಕುಡಿಯಬೇಕು ಮತ್ತು ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಮೂತ್ರ ವಿಸರ್ಜನೆಯ ನಂತರ 15 ರಿಂದ 20 ನಿಮಿಷಗಳ ನಂತರ ನೀರನ್ನು ಸೇವಿಸಬೇಕು ಮತ್ತು ಕೇವಲ 1 ಗ್ಲಾಸ್ ನೀರನ್ನು ಕುಡಿಯಬೇಕು. ಹೆಚ್ಚುವರಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.