ಮಳೆಗಾಲ ಶುರುವಾಗಿದೆ. ಈ ಋತುವಿನಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇನ್ನು ಮಳೆಗಾಲದಲ್ಲಿ ಜನರು ತಮ್ಮ ಬಟ್ಟೆ, ತ್ವಚೆ ಮತ್ತು ಕೂದಲ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆಯೋ ಅದೇ ರೀತಿ ಪಾದರಕ್ಷೆ ಧರಿಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಹೌದು, ಮಳೆಗಾಲದಲ್ಲಿ ಪಾದರಕ್ಷೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಮಳೆಯ ರಭಸಕ್ಕೆ ಜಾರುವ ಪ್ರಸಂಗ ಎದುರಾಗಬಹುದು. ಮಳೆಗಾಲದಲ್ಲಿ ಜಾರುವ ಭಯವಿದ್ದರೆ ಅದಕ್ಕೆ ತಕ್ಕನಾದ ಪಾದರಕ್ಷೆಗಳನ್ನು ಧರಿಸಬೇಕಾಗುತ್ತದೆ. ಹಾಗಾಗಿ ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ಧರಿಸಬಹುದಾದ ವಿಶೇಷ ರೀತಿಯ ಪಾದರಕ್ಷೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಇದನ್ನು ಧರಿಸಿ ನೀವು ಆರಾಮಾಗಿ ಹೊರಗೆ ಹೋಗಬಹುದು.
ಫ್ಲೋಟರ್ಸ್
ಫ್ಲೋಟರ್ಸ್ ಧರಿಸದ ಯಾವುದೇ ವ್ಯಕ್ತಿ ಇರುವುದಿಲ್ಲ ಬಿಡಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅದರ ಟ್ರೆಂಡ್ ಕೂಡ ಸಾಕಷ್ಟು ನಡೆಯುತ್ತಿದೆ. ಬೇಕಿದ್ದರೆ ಮಳೆಗಾಲದಲ್ಲಿ ಫ್ಲೋಟರ್ ಹಾಕಿಕೊಂಡು ಆರಾಮಾಗಿ ಹೊರಗೆ ಹೋಗಬಹುದು ಮತ್ತು ಅವುಗಳನ್ನು ಹಾಕಿಕೊಂಡರೆ ಜಾರಿ ಬೀಳುವ ಭಯವಿರುವುದಿಲ್ಲ.
Must Read: 5 ಸಾವಿರ ಹೂಡಿಕೆ ಮಾಡಿ ಇಂದು ಪ್ರತಿ ತಿಂಗಳು ₹ 5 ಲಕ್ಷ ಸಂಪಾದಿಸುತ್ತಿರುವ ಯುವಕ
ಕ್ರೋಕ್ಸ್
ಯುವಕರ ಬಾಯಿಂದ ನೀವು ಕ್ರೋಕ್ಸ್ ಹೆಸರನ್ನು ಹೆಚ್ಚಾಗಿ ಕೇಳಿರಬೇಕು. ಕ್ರೋಕ್ಸ್ ಹೆಚ್ಚು ಆರಾಮದಾಯಕವಾಗಿದೆ. ಇದನ್ನು ಧರಿಸಿದ ನಂತರ, ನಿಮ್ಮ ಪಾದಗಳಲ್ಲಿ ನೀರು ನಿಲ್ಲುವುದಿಲ್ಲ ಮತ್ತು ನಿಮ್ಮ ಪಾದಗಳು ಬೇಗನೆ ಒಣಗುತ್ತವೆ. ಇವುಗಳು ಸಾಕಷ್ಟು ಆರಾಮದಾಯಕ ಮತ್ತು ಅವುಗಳ ವಿಭಿನ್ನ ವಿನ್ಯಾಸಗಳು ಎಲ್ಲಿ ಬೇಕಾದರೂ ಸುಲಭವಾಗಿ ಲಭ್ಯವಿವೆ.
Read This:
ಸ್ನೀಕರ್ಸ್
ಮಳೆಗಾಲದಲ್ಲಿ ಬೂಟುಗಳನ್ನು ಧರಿಸಬೇಕೆಂದರೆ ಜನರು ಹಿಂದೆ ಸರಿಯುತ್ತಾರೆ, ಆದರೆ ಮಳೆಗಾಲದಲ್ಲಿ ಸ್ನೀಕರ್ಸ್ ಸಾಕಷ್ಟು ಆರಾಮದಾಯಕವಾಗಿದೆ. ಆದರೆ ಸ್ನೀಕರ್ಗಳನ್ನು ಖರೀದಿಸುವಾಗ ಅವುಗಳು ಗಾಢ ಬಣ್ಣದ್ದಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಫ್ಲಿಪ್-ಫ್ಲಾಪ್ಸ್
ನೀವು ಯಾವುದೇ ಬಟ್ಟೆಯೊಂದಿಗೆ ಫ್ಲಿಪ್-ಫ್ಲಾಪ್ಸ್ ಧರಿಸಬಹುದು. ಇವು ಸಾಕಷ್ಟು ಸ್ಟೈಲಿಶ್ ಆಗಿ ಕಾಣುತ್ತವೆ. ಇದನ್ನು ಧರಿಸಿದ ನಂತರ ನಿಮ್ಮ ಪಾದಗಳು ಮಳೆಯಲ್ಲಿ ಒದ್ದೆಯಾದರೂ, ಅವು ಬೇಗನೆ ಒಣಗುತ್ತವೆ.
English Summary: Wearing Shoes in monsoon, Wearing flip flops in monsoon, Monsoon footwear