By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಸರ್ಕಾರಿ ನೌಕರಿ ಬಿಟ್ಟು ಬ್ಯುಸಿನೆಸ್‌ಗೆ ಕೈ ಹಾಕಿದ ದಿಟ್ಟೆ ಕಾಮಿನಿ.. ವಾರ್ಷಿಕ ₹2 ಕೋಟಿ ವಹಿವಾಟು
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಸರ್ಕಾರಿ ನೌಕರಿ ಬಿಟ್ಟು ಬ್ಯುಸಿನೆಸ್‌ಗೆ ಕೈ ಹಾಕಿದ ದಿಟ್ಟೆ ಕಾಮಿನಿ.. ವಾರ್ಷಿಕ ₹2 ಕೋಟಿ ವಹಿವಾಟು

Homeಸಾಧಕರ ಕತೆ

ಸರ್ಕಾರಿ ನೌಕರಿ ಬಿಟ್ಟು ಬ್ಯುಸಿನೆಸ್‌ಗೆ ಕೈ ಹಾಕಿದ ದಿಟ್ಟೆ ಕಾಮಿನಿ.. ವಾರ್ಷಿಕ ₹2 ಕೋಟಿ ವಹಿವಾಟು

Sky Kannada News
Last updated: January 29, 2025 5:12 am
By Sky Kannada News
4 months ago
Share
3 Min Read
SHARE

Motivational Story: ಅದೆಷ್ಟೋ ಮಂದಿ ಸರ್ಕಾರಿ ನೌಕರಿ ಸೇರುವ ಕನಸು ಕಾಣುತ್ತಿರುತ್ತಾರೆ. ಆದರೆ ಕೆಲವರು ಮಾತ್ರ ಅದೇ ಸರ್ಕಾರಿ ಕೆಲಸ ತೊರೆದು ಅಥವಾ ಸರ್ಕಾರಿ ಕೆಲಸ ಸಿಕ್ಕರೂ ಹೋಗದೆ ಸ್ವಂತ ಉದ್ಯಮ ಆರಂಭಿಸಿ ತಾವು ಬೆಳೆದು ಇತರರನ್ನು ಬೆಳೆಸಿ ಸ್ಫೂರ್ತಿಯಾಗುತ್ತಾರೆ.  ಆದರೆ ಇದೆಲ್ಲಾ ಸಿನಿಮಾ, ಕಥೆ, ಕಾದಂಬರಿಗಳಲ್ಲಿ ಕೇಳುವುದಕ್ಕೆ ಚೆನ್ನ, ರಿಯಲ್‌ ಲೈಫ್‌ನಲ್ಲಿ ಆಗದ ಮಾತು ಬಿಡಿ ಎನ್ನುವವರಿಗೆ ಹೀಗೂ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಡಾ ಕಾಮಿನಿ.

ಎಲ್ಲಾ ಸಾವಯವ

ಡಾ. ಕಾಮಿನಿ ಸಾವಯವ ನುಗ್ಗೇಕಾಯಿ (Drumstick) ಕೃಷಿ ಮಾಡುವ ಮೂಲಕ ತಮ್ಮದೇ ಆದೆ ಗುರುತನ್ನು ಗಳಿಸಿಕೊಂಡಿದ್ದಾರೆ. ಮೊರಿಂಗಾ ಎಂದೂ ಕರೆಯಲ್ಪಡುವ ನುಗ್ಗೇಕಾಯಿ ಪೌಷ್ಠಿಕಾಂಶ ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಸಾಂಬಾರ್, ಕರಿ, ಚಹಾ ಮತ್ತು ಇತರ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅಂದಹಾಗೆ ಕಾಮಿನಿ ನುಗ್ಗೇಕಾಯಿಯಿಂದ ಸಾಬೂನು, ಎಣ್ಣೆ, ಸೊಳ್ಳೆ ನಿವಾರಕ ಸ್ಪ್ರೇ, ಮೊರಿಂಗಾ ಪುಡಿ ಮತ್ತು ಕ್ಯಾಪ್ಸುಲ್‌ಗಳಂತಹ ಅನೇಕ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರ ಎಲ್ಲಾ ಉತ್ಪನ್ನಗಳು ಸಾವಯವವಾಗಿರುವುದು ವಿಶೇಷವಾಗಿದೆ.

ವಿಜ್ಞಾನಿಯಿಂದ ಉದ್ಯಮಿ

ಡಾ. ಕಾಮಿನಿ ಅವರು ಲಕ್ನೋದ CISH (ಸೆಂಟ್ರಲ್ ಇನ್ ಸ್ಟಿಟ್ಯೂಟ್ ಫಾರ್ ಸಬ್ಟ್ರೋಪಿಕಲ್ ಹಾರ್ಟಿಕಲ್ಚರ್)ನಲ್ಲಿ ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 7 ವರ್ಷ ಸರ್ಕಾರಿ ಕೆಲಸ ಮಾಡಿದ ನಂತರ ಸಾವಯವ ಕೃಷಿಯತ್ತ ಒಲವು ಹೆಚ್ಚಾಯಿತು. ಆದ್ದರಿಂದ ಅವರು 2015 ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಮೊರಿಂಗಾದಲ್ಲಿ ಸಂಶೋಧನೆ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕೃಷಿ ಕಂಪನಿಯಲ್ಲಿ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದರು. ಅಲ್ಲಿ ರೈತರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಸಿಕ್ಕಿತು. ಆ ನಂತರ ಮೊರಿಂಗಾ ಕೃಷಿಯನ್ನು ಪ್ರಾರಂಭಿಸುವ ದೃಢ ನಿರ್ಧಾರವನ್ನು ತೆಗೆದುಕೊಂಡೆ ಎಂದು ಕಾಮಿನಿ ಅವರು ತಿಳಿಸಿದ್ದಾರೆ.

2017 ರಲ್ಲಿ ಪ್ರಾರಂಭ

2017 ರಲ್ಲಿ ಡಾ.ಕಾಮಿನಿ ರೈತರ ಸಹಯೋಗದೊಂದಿಗೆ ಮೊರಿಂಗಾ ಕೃಷಿಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದರು. ಇದನ್ನು ಪ್ರತಿ ಋತುವಿನಲ್ಲಿಯೂ ಬೆಳೆಯಬಹುದು ಮತ್ತು ಯಾವುದೇ ರಾಸಾಯನಿಗಳ ಅಗತ್ಯವಿಲ್ಲದ ಕಾರಣ ಮೊರಿಂಗಾ ಕೃಷಿ  ಆಯ್ಕೆ ಮಾಡಿಕೊಂಡರಂತೆ ಕಾಮಿನಿ. ಅಷ್ಟೇ ಅಲ್ಲ, ಮೊರಿಂಗಾದ ಎಲೆಗಳು, ಬೇರುಗಳು ಮತ್ತು ಹಣ್ಣುಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.

Also Read: ಪೊರಕೆಯಿಂದ ಬಡತನ ನಿವಾರಣೆ..! ₹ 25,000ದಿಂದ ವ್ಯಾಪಾರ ಆರಂಭಿಸಿ, ಈಗ ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಹೆಣ್ಮಗಳ ಯಶೋಗಾಥೆ 

ವ್ಯಾಪಾರಕ್ಕೆ ಸಿಕ್ಕ ಮನ್ನಣೆ

ಕಾಮಿನಿ 2019 ರಲ್ಲಿ ತನ್ನ ಸಂಸ್ಥೆಯ ಅಡಿಪಾಯವನ್ನು ಹಾಕಿದರು ಮತ್ತು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಮೊರಿಂಗಾ ಪುಡಿ, ಸಾಬೂನು, ಎಣ್ಣೆ ಮತ್ತು ಕ್ಯಾಪ್ಸುಲ್‌ಗಳಂತಹ ಉತ್ಪನ್ನಗಳನ್ನು ಉತ್ಪಾದಿಸಲು ರೈತರೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡಿದರು. ಆರಂಭದಲ್ಲಿ ಅವರು ಸ್ಥಳೀಯ ಮಾರುಕಟ್ಟೆಯಲ್ಲಿ ಪೌಚ್‌ ಪ್ಯಾಕಿಂಗ್‌ನಲ್ಲಿ ಪುಡಿಯನ್ನು ಮಾರಾಟ ಮಾಡುತ್ತಿದ್ದರು. ನಂತರ ಅವರು IIT (BHU) ನ ಅಗ್ರಿ-ಬ್ಯುಸಿನೆಸ್ ಇನ್ಕ್ಯುಬೇಟರ್ ಸಹಾಯ ಪಡೆದರು. ಇಲ್ಲಿ ಅವರು 25 ಲಕ್ಷ ರೂ. ಬೆಲೆಯ ಯಂತ್ರವನ್ನು ತೈಲವನ್ನು ಹೊರತೆಗೆಯಲು ಮತ್ತು ಕ್ಯಾಪ್ಸುಲ್ ತುಂಬಲು ಖರೀದಿಸಿದರು. ಇದರಿಂದ ಅವರ ಉತ್ಪಾದನೆ ಹೆಚ್ಚಾಯಿತು.

ಕೋಟಿಗಟ್ಟಲೇ ವ್ಯಾಪಾರ

ಡಾ. ಕಾಮಿನಿ ಈಗ 50 ರಿಂದ 100 ರೈತರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಮೊರಿಂಗಾ ಬೆಳೆಯಲು ತರಬೇತಿ ನೀಡುವುದಲ್ಲದೆ, ಅವರ ಬೆಳೆಯನ್ನು ಖರೀದಿಸುತ್ತಾರೆ. ಇದರಿಂದ ರೈತರಿಗೆ ಉತ್ತಮ ಆದಾಯವೂ ದೊರೆಯುತ್ತಿದೆ. ಇಂದು ಅವರ ವಾರ್ಷಿಕ ಆದಾಯವು ಸುಮಾರು 1.75 ಕೋಟಿ ರೂ.ಗಳಾಗಿದ್ದು, 2025 ರ ಆರ್ಥಿಕ ವರ್ಷದ ವೇಳೆಗೆ 2.50 ಕೋಟಿ ರೂ. ಪಡೆಯುವ ಗುರಿಯನ್ನು ಹೊಂದಿದ್ದಾರೆ. ಅವರ ಉತ್ಪನ್ನಗಳು ಆನ್‌ಲೈನ್ ಪ್ಲಾಟ್‌ಫಾರ್ಮ್ಗಳಲ್ಲಿಯೂ ಲಭ್ಯವಿದೆ. ಇದರಿಂದಾಗಿ ದೇಶಾದ್ಯಂತ ಅವರ ಉತ್ಪನ್ನಗಳ ಮಾರಾಟ ಸುಲಭವಾಗಿದೆ.

Join our WhatsApp Channel

You Might Also Like

ನಟಿ ಕಂ ರಾಜಕಾರಣಿ ಜೊತೆ ಡೇಟ್ ಮಾಡಲು ಬಯಸಿದ್ದರು ಈ ನಟ! 49ನೇ ವಯಸ್ಸಿನಲ್ಲೂ ಬ್ರಹ್ಮಚಾರಿ…ಯಾರೆಂದು ಗುರುತಿಸುವಿರಾ?   

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಒಳ್ಳೆಯದು…ಅನುಕೂಲವೆಷ್ಟು, ಅನಾನುಕೂಲವೆಷ್ಟು?

ಲಡ್ಡು ವಿವಾದದ ನಡುವೆಯೇ ಚರ್ಚೆಯಾಗುತ್ತಿರುವ ವಿಷಯ ತಿರುಪತಿ ದೇವಸ್ಥಾನದ ನಾಲ್ಕು ಅರ್ಚಕ ಕುಟುಂಬಗಳು: ಇಲ್ಲಿದೆ ಇವರ ವೇತನ, ಸೌಲಭ್ಯಗಳ ವಿವರ  

ಶಾರುಖ್ ಧರಿಸಿರುವ ಈ ಜೀನ್ಸ್‌ ಪ್ಯಾಂಟ್ ಬೆಲೆ ಕೇಳಿ ಹೌಹಾರಿದ ನೆಟ್ಟಿಗರು..”ಕಿಂಗ್ ಈಸ್‌ ಆಲ್‌ವೇಸ್‌ ಕಿಂಗ್‌” ಎಂದ ಫ್ಯಾನ್ಸ್‌

ಸ್ವರೂಪ ಬದಲಿಸಿದ ಆಕಾಶ ಬುಟ್ಟಿ…ದೀಪಾವಳಿಯಂದು ಇದನ್ನು ಬೆಳಗಿಸುವ ಹಿಂದಿನ ಉದ್ದೇಶ ಮತ್ತು ಮಹತ್ವ

TAGGED:BusinessdrumstickMotivational StorySky Kannadaನುಗ್ಗೇಕಾಯಿವ್ಯವಹಾರಸ್ಫೂರ್ತಿದಾಯಕ ಕಥೆ
Share This Article
Facebook Email Print
Share
Previous Article Health Tips: ತೂಕ ನಷ್ಟಕ್ಕೆ, ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿ ಕಾಯಿಲೆಗೂ ಪ್ರಯೋಜನಕಾರಿ ಮೆಂತ್ಯ ಕಾಳು… ಯಾವಾಗ ಮತ್ತು ಹೇಗೆ ಸೇವಿಸಬೇಕು?
Next Article ಶ್ರೀದೇವಿ-ಮಾಧುರಿಗೇ ಸರಿಯಾಗಿ ಪೈಪೋಟಿ ನೀಡಿದ, ಕನ್ನಡದಲ್ಲಿಯೂ ನಟಿಸಿರುವ ಈ ಸುಂದರವಾದ ನಟಿ ಯಾರೆಂದು ಬಲ್ಲಿರಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಈ 3 ರಾಶಿಯವರ ಮೇಲಿರಲಿದೆ ಬುಧ, ಶುಕ್ರ ಮತ್ತು ಸೂರ್ಯನ ದಯೆ…ಅಕ್ಟೋಬರ್ 17 ರವರೆಗೆ ರಾಜರಂತೆ ಬದುಕುತ್ತಾರೆ!

Shri Krishna: ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದ ರಾಶಿಗಳಿವು…ಇವರು ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಆಶೀರ್ವಾದ ಪಡೆಯುತ್ತಾರೆ

5 ಸಾವಿರ ಹೂಡಿಕೆ ಮಾಡಿ ಇಂದು ಪ್ರತಿ ತಿಂಗಳು ₹ 5 ಲಕ್ಷ ಸಂಪಾದಿಸುತ್ತಿರುವ ಯುವಕ

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್‌ ಹೇಳ್ತಾರೆ ನೋಡಿ…

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?