Nita Ambani’s Saree Collection: ನೀತಾ ಅಂಬಾನಿಯವರ ಸೀರೆಗಳನ್ನು ನೋಡಿ ಫಿದಾ ಆಗದ ಹೆಣ್ಮಕ್ಕಳೇ ಇಲ್ಲ ಬಿಡಿ. ನಿಮಗೆಲ್ಲರಿಗೂ ತಿಳಿದಿರುವಂತೆ ವಿಶೇಷವಾಗಿ ನೀತಾ ಬಳಿಯಿರುವ ಸೀರೆಗಳ ವಿಶಿಷ್ಟ ಸಂಗ್ರಹವು ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಪ್ರತಿಬಿಂಬಿಸುತ್ತದೆ. ಅವರ ಸೀರೆ ಸಂಗ್ರಹ ಗಮನಿಸಿದಾಗ ಭಾರತೀಯ ನೇಯ್ಗೆ ಮತ್ತು ವಿನ್ಯಾಸಗಳ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ನೀತಾ ಅಂಬಾನಿಯವರ ಈ ಸೀರೆಗಳಿಂದ ಸ್ಫೂರ್ತಿ ಪಡೆದು ನೀವೂ ಸಹ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶೇಷವಾದ ಮತ್ತು ಸುಂದರವಾದ ಸೀರೆಗಳನ್ನು ಸಂಗ್ರಹಿಸಬಹುದು.
ಬನಾರಸಿ ಸೀರೆ
ಈ ಸೀರೆಗಳನ್ನು ಬನಾರಸ್‌ನಲ್ಲಿ ತಯಾರಿಸಲಾಗುತ್ತದೆ. ಅವುಗಳನ್ನು ರೇಷ್ಮೆ ದಾರಗಳಿಂದ ನೇಯುವ ಮೂಲಕ ತಯಾರಿಸಲಾಗುತ್ತದೆ. ಈ ಸೀರೆಗಳ ಜಟಿಲವಾದ ನೇಯ್ಗೆ ಮತ್ತು ಚಿನ್ನದ ಜರಿ ಕೆಲಸವು ಸೀರೆ ಬಹಳ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಕಾಂಜೀವರಂ ಸೀರೆ
ತಮಿಳುನಾಡಿನ ಕಾಂಜೀವರಂ ಸೀರೆಗಳು ಗಾಢವಾದ ಬಣ್ಣ ಮತ್ತು ದಪ್ಪ ರೇಷ್ಮೆಗೆ ಹೆಸರುವಾಸಿಯಾಗಿದೆ. ಈ ಸೀರೆಗಳಲ್ಲಿ ಸಾಂಪ್ರದಾಯಿಕ ವಿನ್ಯಾಸ ಮತ್ತು ಗೋಲ್ಡನ್ ಬಾರ್ಡರ್ ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ.
ಪಟೋಲ ಸೀರೆ
ಗುಜರಾತ್‌ನ ಪಟೋಲ ಸೀರೆಗಳನ್ನು ಡಬಲ್ ಇಕಾತ್ ನೇಯ್ಗೆ ತಂತ್ರದಿಂದ ತಯಾರಿಸಲಾಗುತ್ತದೆ. ಇದು ಈ ಸೀರೆಗಳನ್ನು ತುಂಬಾ ವಿಶೇಷ ಮತ್ತು ದುಬಾರಿಯನ್ನಾಗಿ ಮಾಡುತ್ತದೆ. ಅದರ ರೋಮಾಂಚಕ ಬಣ್ಣಗಳು ಮತ್ತು ಸಂಕೀರ್ಣ ಮಾಡೆಲ್ ಅದನ್ನು ಅದ್ಭುತಗೊಳಿಸುತ್ತವೆ.
ಪೈಥಾನಿ ಸೀರೆ
ಮಹಾರಾಷ್ಟ್ರದ ಪೈಥಾನಿ ಸೀರೆಗಳನ್ನು ಮಲ್ಬರಿ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ರೇಷ್ಮೆ ಮತ್ತು ಜರಿ ಕೆಲಸವನ್ನು ಹೊಂದಿದ್ದು, ನವಿಲು ಮತ್ತು ಕಮಲದ ಸುಂದರ ವಿನ್ಯಾಸಗಳನ್ನು ಒಳಗೊಂಡಿದೆ.
ಚಂದೇರಿ ಸೀರೆ
ಮಧ್ಯಪ್ರದೇಶದ ಚಂದೇರಿ ಸೀರೆಗಳನ್ನು ರೇಷ್ಮೆ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ಹಗುರವಾಗಿದ್ದು ಗೋಲ್ಡನ್ ಮತ್ತು ಸಿಲ್ವರ್ ಜರಿ ವರ್ಕ್ ಹೊಂದಿವೆ.
ಬಾಂಧನಿ ಸೀರೆ
ರಾಜಸ್ಥಾನ ಮತ್ತು ಗುಜರಾತ್‌ನ ಬಾಂಧನಿ ಸೀರೆಗಳನ್ನು ಟೈ-ಡೈ ತಂತ್ರದಿಂದ ತಯಾರಿಸಲಾಗುತ್ತದೆ. ಈ ಸೀರೆಗಳು ಗಾಢವಾದ ಬಣ್ಣಗಳು ಮತ್ತು ಅವುಗಳ ವಿಶೇಷ ಮಾಡೆಲ್‌ಗೆ ಹೆಸರುವಾಸಿಯಾಗಿದೆ.
ಲಿನಿನ್ ಸೀರೆ
ಈ ಸೀರೆಗಳು ನೈಸರ್ಗಿಕ ಫೈಬರ್‌ನಿಂದ ಮಾಡಲ್ಪಟ್ಟಿದೆ. ಇದರಿಂದ ಇವು ಹಗುರವಾಗಿ ಮತ್ತು ಆರಾಮದಾಯಕವಾಗಿರುತ್ತದೆ. ನೀತಾ ಅಂಬಾನಿ ಅವರ ಸಂಗ್ರಹದಲ್ಲಿ ಲಿನಿನ್ ಸೀರೆಗಳಿಗೂ ವಿಶೇಷ ಸ್ಥಾನವಿದೆ, ಇದು ಅವರ ಸ್ಟೈಲ್ ಅನ್ನು ಮತ್ತಷ್ಟು ಹೆಚ್ಚಿಸಿದೆ.
ರಂಗ್‌ಕಟ್
ರಂಗ್‌ಕಟ್ ಮಾದರಿಯು ಒಂದೇ ಬಟ್ಟೆಯಲ್ಲಿ ಬಹು ಬಣ್ಣಗಳನ್ನು ಸಂಯೋಜಿಸುತ್ತದೆ, ಇದು ವಿಶೇಷವಾಗಿದೆ.
Keywords: Nita Ambani’s Saree Collection