Is ice cream good for you to eat?: ವಿಶೇಷವಾಗಿ ಬೇಸಿಗೆಯಲ್ಲಿ ಐಸ್ ಕ್ರೀಮ್ ಅನ್ನು ಇಷ್ಟಪಟ್ಟು ತಿನ್ನುವ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೆನೆಸಿಕೊಂಡರೆ ಆನ್ ಲೈನ್‌ನಲ್ಲಿ ಬುಕ್ ಮಾಡುತ್ತೇವೆ ಅಥವಾ ಹತ್ತಿರದ ಹೋಟೆಲ್‌ಗೆ ಹೋಗುತ್ತೇವೆ. ಅಷ್ಟೇ ಅಲ್ಲ, ಯಾವುದೇ ಪಾರ್ಟಿ, ಫಂಕ್ಷನ್ ಇರಲಿ ಅಲ್ಲಿ ನಿಮಗೆ ಕೊನೆಯಲ್ಲಿ ಕೊಡುವುದು ಐಸ್ ಕ್ರೀಮ್ ಅನ್ನೇ…ಅದೆಲ್ಲಾ ಬಿಡಿ ಯೂಟ್ಯೂಬ್ ತೆಗೆದು ನೋಡಿದರೆ ಮನೆಯಲ್ಲಿಯೇ ಹತ್ತು ನಿಮಿಷದಲ್ಲಿ ಐಸ್ ಕ್ರೀಮ್ ತಯಾರಿಸುವ ವಿಧಾನ ಎಂಬ ನೂರಾರು ವಿಡಿಯೋಗಳನ್ನು ನೋಡಬಹುದು. ಆದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟಪಟ್ಟು ತಿನ್ನುವ ಈ ಐಸ್ ಕ್ರೀಮ್ ನಿಜಕ್ಕೂ ಒಳ್ಳೆಯದೇ? ಬನ್ನಿ ನೋಡೋಣ…
ಯಾರೇ ಆಗಲಿ ಬಿಸಿಲಿನಲ್ಲಿ ಸ್ವಲ್ಪ ಸಮಯ ಓಡಾಡಿದರೆ ಎಳನೀರಿಗಿಂತ ಹೆಚ್ಚು ಐಸ್ ಕ್ರೀಂ ತಿನ್ನುವ ಆಸೆಯನ್ನು ವ್ಯಕ್ತಪಡಿಸುತ್ತಾರೆ. ನಾವು ಮಾಡುವುದನ್ನೇ ನಮ್ಮ ಮಕ್ಕಳು ಸಹ ಅನುಸರಿಸುತ್ತಾರೆ. ಐಸ್ ಕ್ರೀಮ್ ಶಾಖದಿಂದ ನಮ್ಮನ್ನು ರಕ್ಷಿಸುತ್ತದೆ ಎಂದೇ ಜನರು ನಂಬುತ್ತಾರೆ. ಆದರೆ ನೀವು ಸಂತೋಷದಿಂದ ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?, ಹೌದು, ಐಸ್ ಕ್ರೀಂ ಅನ್ನು ಸಂರಕ್ಷಿಸಲು ಹಲವಾರು ರೀತಿಯ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
ಐಸ್ ಕ್ರೀಮ್ ತಿನ್ನುವುದರಿಂದ ಸಿಗುವ ಪ್ರಯೋಜನಗಳು
ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ಫ್ರೆಶ್‌ನೆಸ್ ಸಿಗುತ್ತದೆ. ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ. ಮಾಹಿತಿಯ ಪ್ರಕಾರ, ಐಸ್ ಕ್ರೀಮ್ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಇದು ಆಯಾಸವನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಐಸ್ ಕ್ರೀಂನಲ್ಲಿ ಹಲವಾರು ಫ್ಲೇವರ್ಸ್‌ಗಳಿದ್ದು, ಜನರು ತಮ್ಮ ಆಯ್ಕೆಯ ಪ್ರಕಾರ ಸೇವಿಸುತ್ತಾರೆ. ಇದು ವಿಭಿನ್ನ ರುಚಿಯನ್ನು ಹೊಂದಿರುವ ಕಾರಣಕ್ಕಾಗಿಯೇ ಮಕ್ಕಳು ಮತ್ತು ವಯಸ್ಕರಿಗೆ ನೆಚ್ಚಿನ ಸಿಹಿತಿಂಡಿಯಾಗಿದೆ. ಐಸ್ ಕ್ರೀಮ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಹಲವರು ನಂಬುತ್ತಾರೆ. ಇದು ಮೆದುಳಿನಲ್ಲಿ ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.
Read Also: ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!
ಐಸ್ ಕ್ರೀಮ್‌ನ ಅನಾನುಕೂಲಗಳು
ತೂಕ ಹೆಚ್ಚಳ
ಐಸ್ ಕ್ರೀಂ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು.
ಹಲ್ಲಿನ ಸಮಸ್ಯೆ
ಐಸ್ ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ಹಲ್ಲುಗಳಲ್ಲಿ ಕುಳಿಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೃದಯಾಘಾತ ರೋಗಿಗಳು ದೂರವಿರಿ
ಐಸ್ ಕ್ರೀಂನ ಅತಿಯಾದ ಸೇವನೆಯು ಹೃದಯಾಘಾತ ರೋಗಿಗಳಿಗೆ ಹಾನಿಕಾರಕವಾಗಿದೆ. ಏಕೆಂದರೆ ಐಸ್ ಕ್ರೀಂ ಸಂರಕ್ಷಿಸಲು ಇದರಲ್ಲಿ ಅನೇಕ ರೀತಿಯ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಹೃದಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಜೀರ್ಣಕ್ರಿಯೆ ಸಮಸ್ಯೆ ಇದ್ರೆ ತಿನ್ನಲೇಬೇಡಿ
ಮಾಹಿತಿ ಪ್ರಕಾರ ಐಸ್ ಕ್ರೀಂ ತಿಂದರೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ನೀವು ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಬೇಕು.