By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: Inspiring Story: “ಮಗಳಿಗಾಗಿ ಕೆಲಸ ಬಿಟ್ಟೆ, ಸ್ಟಾರ್ಟ್ಅಪ್ ಆರಂಭಿಸಿದೆ…” ಶಿಕ್ಷಕಿ ಯಶಸ್ವಿ ಉದ್ಯಮಿಯಾದ ಕಥೆಯಿದು
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | Inspiring Story: “ಮಗಳಿಗಾಗಿ ಕೆಲಸ ಬಿಟ್ಟೆ, ಸ್ಟಾರ್ಟ್ಅಪ್ ಆರಂಭಿಸಿದೆ…” ಶಿಕ್ಷಕಿ ಯಶಸ್ವಿ ಉದ್ಯಮಿಯಾದ ಕಥೆಯಿದು

Homeಸಾಧಕರ ಕತೆ

Inspiring Story: “ಮಗಳಿಗಾಗಿ ಕೆಲಸ ಬಿಟ್ಟೆ, ಸ್ಟಾರ್ಟ್ಅಪ್ ಆರಂಭಿಸಿದೆ…” ಶಿಕ್ಷಕಿ ಯಶಸ್ವಿ ಉದ್ಯಮಿಯಾದ ಕಥೆಯಿದು

Sky Kannada News
Last updated: April 13, 2025 4:56 am
By Sky Kannada News
1 month ago
Share
2 Min Read
SHARE
ಉತ್ತರ ಪ್ರದೇಶದ ಗಾಜಿಯಾಬಾದ್‌ನ ರೇಣು ಶರ್ಮಾ ತಮ್ಮ ಶಿಕ್ಷಕ ವೃತ್ತಿಯನ್ನು ಹೊರೆದು 'ಸಿಯಾ ಕಿಚನ್ ಮತ್ತು ಕೆಫೆ'ಯನ್ನು ಪ್ರಾರಂಭಿಸಿದರು. ಅವರು ತಮ್ಮ ಮಗಳ ಪಾಲನೆಗಾಗಿ ಈ ನಿರ್ಧಾರವನ್ನು ತೆಗೆದುಕೊಂಡರು. ಈಗ ಅವರ ನವೋದ್ಯಮವು ಯಶಸ್ವಿ ವ್ಯವಹಾರವಾಗಿ ಮಾರ್ಪಟ್ಟಿದ್ದು, ಇಂದು ಅವರ ಸ್ಪೂರ್ತಿದಾಯಕ ಕಥೆಯನ್ನು ತಿಳಿಯೋಣ…

ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಶಿಕ್ಷಕಿಯಾಗಿದ್ದ ರೇಣು ಶರ್ಮಾ ತಮ್ಮ ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಇಂದು ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಶಿಕ್ಷಕ ವೃತ್ತಿಯನ್ನು ತೊರೆದು ತಮ್ಮದೇ ಆದ ‘ಸಿಯಾ ಕಿಚನ್ ಮತ್ತು ಕೆಫೆ’ ಎಂಬ ನವೋದ್ಯಮವನ್ನು ಪ್ರಾರಂಭಿಸಿದರು. ಆದರೆ ಈ ಪ್ರಯಾಣ ಎಲ್ಲರಂದುಕೊಂಡಷ್ಟು ಸುಲಭವಾಗಿರಲಿಲ್ಲ, ಆದರೆ ಇಂದು ಅವರು ಯಶಸ್ವಿ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ.

Contents
ಮಗಳಿಗಾಗಿ ಕೆಲಸ ಬಿಟ್ಟ ರೇಣು ಶರ್ಮಾಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲಮುಂದೇನು…?ರೇಣು ಶರ್ಮಾ ಯಶಸ್ಸಿನ ಮಂತ್ರ

ಮಗಳಿಗಾಗಿ ಕೆಲಸ ಬಿಟ್ಟ ರೇಣು ಶರ್ಮಾ

ರೇಣು ಶರ್ಮಾ ಶಾಲಾ ಶಿಕ್ಷಕಿಯಾಗಿದ್ದರು. ಆದರೆ ಲಾಕ್‌ಡೌನ್ ಸಮಯದಲ್ಲಿ ಅವರ ಜೀವನ ಬದಲಾಯಿತು. ತಮ್ಮ ಮಗಳು ಸಿಯಾಗೆ ಜನ್ಮ ನೀಡಿದಾಗ, ಮನೆ ಕೆಲಸ ಮತ್ತು ಶಿಕ್ಷಕ ವೃತ್ತಿ ಎರಡೂ ಬ್ಯಾಲೆನ್ಸ್‌ ಮಾಡುವುದು ಮತ್ತು ಮಗಳನ್ನು ಬೆಳೆಸುವುದು ಬಹಳ ಕಷ್ಟವಾಯಿತು. ಈ ಸಮಯದಲ್ಲಿ ಅವರು ತಮ್ಮ ಮಗಳಿಗೆ ಪೂರ್ಣ ಸಮಯ ನೀಡಲು ತಮ್ಮ ಕೆಲಸವನ್ನು ಬಿಡಲು ನಿರ್ಧರಿಸಿದರು. ಆದರೆ ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ನಿರ್ಧರಿಸಿದರು. ಈ ಆಲೋಚನೆಯೊಂದಿಗೆ, ಅವರು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿ, “ಸಿಯಾ ಕಿಚನ್ ಮತ್ತು ಕೆಫೆ”ಗೆ ಅಡಿಪಾಯ ಹಾಕಿದರು.

Also Read: ಸರ್ಕಾರಿ ನೌಕರಿ ಬಿಟ್ಟು ಬ್ಯುಸಿನೆಸ್‌ಗೆ ಕೈ ಹಾಕಿದ ದಿಟ್ಟೆ ಕಾಮಿನಿ.. ವಾರ್ಷಿಕ ₹2 ಕೋಟಿ ವಹಿವಾಟು

ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ

ಆರಂಭಿಕ ಹಂತದಲ್ಲಿ ರೇಣು ಶರ್ಮಾ ತನ್ನ ಕುಟುಂಬ ಮತ್ತು ಸಮಾಜದಿಂದ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ವ್ಯವಹಾರವನ್ನು ಯಶಸ್ವಿಗೊಳಿಸಲು ಅವರು ಪ್ರತಿದಿನ 14 ರಿಂದ 16 ಗಂಟೆಗಳ ಕಾಲ ಕೆಲಸ ಮಾಡಿದರು. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು ಮತ್ತು ಕ್ರಮೇಣ ಅವರ ಕೆಫೆ ಜನರಲ್ಲಿ ಪ್ರಸಿದ್ಧವಾಗಲು ಪ್ರಾರಂಭಿಸಿತು. ಇಂದು, ಸಿಯಾ ಕಿಚನ್ & ರೆಫೆ 4*9 ರೇಟಿಂಗ್‌ ಪಡೆದು ಗಾಜಿಯಾಬಾದ್‌ನಲ್ಲಿ ಜನಪ್ರಿಯ ಸ್ಥಳವಾಗಿದೆ. ಇಲ್ಲಿನ ರುಚಿಕರವಾದ ಪೇಸ್ಟ್ರಿಗಳು, ಕೇಕ್‌ಗಳು ಮತ್ತು ಇತರ ಖಾದ್ಯಗಳನ್ನು ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

ಮುಂದೇನು…?

ರೇಣು ಶರ್ಮಾ ತಮ್ಮ ಉದ್ಯಮವನ್ನು ಇಷ್ಟಕ್ಕೆ ಸೀಮಿತಗೊಳಿಸದೆ ವಿಸ್ತರಿಸಲು ಮತ್ತು ಒಂದು ಬ್ರಾಂಡ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದಾರೆ. ಇವರ ಕಥೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ರೇಣು ಶರ್ಮಾ ಯಶಸ್ಸಿನ ಮಂತ್ರ

ನಿಮ್ಮಲ್ಲಿ ಉತ್ಸಾಹ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಇಚ್ಛಾ ಶಕ್ತಿ ಇದ್ದರೆ, ಯಾವುದೇ ಕನಸು ಅಸಾಧ್ಯವಲ್ಲ ಎಂಬುದಕ್ಕೆ ರೇಣು ಶರ್ಮಾ ಅವರ ಕಥೆ ಸಾಕ್ಷಿಯಾಗಿದೆ. ಕೆಲಸದ ಬದಲು ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಕನಸು ಕಾಣುವ ಮಹಿಳೆಯರಿಗೆ ಇವರ ಯಶಸ್ಸು ಸ್ಫೂರ್ತಿಯಾಗಿದೆ.

You Might Also Like

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿದೆ ಎಐ ಕಾರ್ಡ್; ನೋಂದಾಯಿಸಿದ ವಿದ್ಯಾರ್ಥಿಗೆ AI ತರಬೇತಿ, ಸ್ಕಾಲರ್ ಶಿಪ್…ನೋಂದಣಿಗೆ ಅ.31 ಕೊನೆ ದಿನ  

” Expiry Date ಮುಗಿದಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ…ಮತ್ತೇ?; ಸಂಪೂರ್ಣ ಮಾಹಿತಿ ಹಂಚಿಕೊಂಡ Gazal Babel Kothari

Sun transit in Scorpio 2024: ನವೆಂಬರ್ 16 ರಿಂದ ಈ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ…ವರ್ಷ ಕಳೆದಂತೆ ಬರಲಿದೆ ಹಣ

ಈ 4 ರಾಶಿಚಕ್ರದ ಜನರು ರಿಸ್ಕ್ ತೆಗೆದುಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ..ಕೆಲವೊಮ್ಮೆ ಅವರು ಇತರರನ್ನು ತೊಂದರೆಗೆ ಸಿಲುಕಿಸುತ್ತಾರೆ!  

ಸೋಮವಾರ, ಗುರುವಾರ ಮಾತ್ರವಲ್ಲ ಈ 5 ಜನ ಮೊಟ್ಟೆ ತಿನ್ನಲೇಬಾರದು!

TAGGED:BusinessInspiring StoryMotivational StorySkyKanndateacherಮಹಿಳೆಶಿಕ್ಷಕಿಸ್ಪೂರ್ತಿದಾಯಕ ಕಥೆ
Share This Article
Facebook Email Print
Share
Previous Article ಬಿರುಕು ಬಿಟ್ಟ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ರಾಮಬಾಣ  
Next Article RRB ALP Vacancy 2025: ಸಹಾಯಕ ಲೋಕೋ ಪೈಲಟ್’ಗೆ ಸಂಬಳವೆಷ್ಟು?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಯೂರಿನ್ ಇನ್ಫೆಕ್ಷನ್ ಗೆ ಕಾರಣಗಳೇನು…ಆ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು… ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ, ಪಿತ್ರಾರ್ಜಿತ ಆಸ್ತಿಯಿಲ್ಲ, 50 ರೂ. ಸಂಬಳ ಪಡೆಯುತ್ತಿದ್ದ ಪಾಕಿಸ್ತಾನದ ಸಾಮಾನ್ಯ ಹುಡುಗ ಭಾರತದ ಹೋಟೆಲ್‌ ಉದ್ಯಮಿಯಾಗಿದ್ದು ಹೇಗೆ?

Hair Oiling Tips: ಕೂದಲಿಗೆ ಎಣ್ಣೆ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ…ನಂತರ  ನೋಡಿ ಮ್ಯಾಜಿಕ್‌

ಲಡ್ಡು ವಿವಾದದ ನಡುವೆಯೇ ಚರ್ಚೆಯಾಗುತ್ತಿರುವ ವಿಷಯ ತಿರುಪತಿ ದೇವಸ್ಥಾನದ ನಾಲ್ಕು ಅರ್ಚಕ ಕುಟುಂಬಗಳು: ಇಲ್ಲಿದೆ ಇವರ ವೇತನ, ಸೌಲಭ್ಯಗಳ ವಿವರ  

Shri Krishna: ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದ ರಾಶಿಗಳಿವು…ಇವರು ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಆಶೀರ್ವಾದ ಪಡೆಯುತ್ತಾರೆ

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?