ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಸಾಕಷ್ಟು ಎಂಜಾಯ್ ಮಾಡಿದರು, ನೃತ್ಯ ಮಾಡಿದರು.. ಆ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ರಾಧಿಕಾ ಮರ್ಚೆಂಟ್ ನೃತ್ಯದ ವಿಡಿಯೋ
ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ತಮ್ಮ ಲುಕ್ನಿಂದ…ಮತ್ತೆ ಕೆಲವೊಮ್ಮೆ ಸರಳತೆಯಿಂದ ಜನಪ್ರಿಯರಾಗುತ್ತಾರೆ. ರಾಧಿಕಾ ಮರ್ಚೆಂಟ್ ಅವರ ಫ್ಯಾನ್ಸ್ ಪೇಜ್ನಲ್ಲಿ ಹಲವು ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಹಾಗಾಗಿಯೇ ರಾಧಿಕಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಸದ್ಯ ಆಕೆಯ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತಿದ್ದು, ಈ ವಿಡಿಯೋ ಎಲ್ಲರಿಗೂ ಇಷ್ಟವಾಗುತ್ತಿದೆ.
ಸ್ನೇಹಿತರೊಂದಿಗೆ ನೃತ್ಯ ಮಾಡಿದ ರಾಧಿಕಾ
ರಾಧಿಕಾ ಮರ್ಚೆಂಟ್ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಸ್ನೇಹಿತರೊಂದಿಗೆ ನೃತ್ಯ ಮಾಡಿದರು. ವಿಡಿಯೋದಲ್ಲಿ ರಾಧಿಕಾ ಸಿಕ್ಕಾಪಟ್ಟೆ ಖುಷಿಯಾಗಿ ಕಾಣಿಸಿಕೊಂಡಿದ್ದು, ಎಂದಿನಂತೆ ಈ ಬಾರಿಯೂ ರಾಧಿಕಾ ತಮ್ಮ ನೃತ್ಯದ ಮೂಲಕ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. ವಿಡಿಯೋದಲ್ಲಿ, ರಾಧಿಕಾ ತನ್ನ ಸ್ನೇಹಿತರೊಂದಿಗೆ ‘ಅನಾರ್ಕಲಿ ಡಿಸ್ಕೋ ಚಾಲಿ’ಗೆ ನೃತ್ಯ ಮಾಡುವುದನ್ನು ಕಾಣಬಹುದು.
Also Read: Video: ಸಿಂಪಲ್ಲಾಗಿ ಕಾಣಿಸಿಕೊಂಡ ಅಂಬಾನಿ ಸೊಸೆಯ ಲುಕ್ ಕಂಡು ಜನ ಏನಂದ್ರು ನೋಡಿ…
ಸುಂದರಿ ರಾಧಿಕಾ
ವೈರಲ್ ಆಗಿರುವ ವಿಡಿಯೋದಲ್ಲಿ, ರಾಧಿಕಾ ಮರ್ಚೆಂಟ್ ಹೊಳೆಯುವ ಬೆಳ್ಳಿ ಬಣ್ಣದ ಲೆಹೆಂಗಾ ಮತ್ತು ಹಾಲ್ಟರ್ನೆಕ್ ಚೋಲಿ ಧರಿಸಿರುವುದು ಕಂಡುಬರುತ್ತದೆ. ಹಗುರವಾದ ಕಿವಿಯೋಲೆ ಹಾಕಿ, ಲೈಟ್ ಮೇಕಪ್ ಮಾಡಿ, ಫ್ರೀ ಹೇರ್ ಸ್ಟೈಲ್ ಮಾಡಿರುವ ರಾಧಿಕಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಅವರ ಈ ಸ್ಟೈಲ್ ಅನ್ನು ಸಖತ್ ಇಷ್ಟಪಡುತ್ತಿದ್ದಾರೆ. ಬಳಕೆದಾರರು ವಿಡಿಯೋಗೆ ಅದ್ಭುತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ರಾಧಿಕಾ ಅವರ ಡಾನ್ಸ್ ಸ್ಟೆಪ್ಸ್ ನೋಡಿ ಶ್ಲಾಘಿಸುತ್ತಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಏನಂದ್ರು ನೆಟ್ಟಿಗರು?
ವಿಡಿಯೋ ಬಗ್ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ‘ರಾಧಿಕಾ ನೀವು ತುಂಬಾ ಸುಂದರವಾಗಿದ್ದೀರಿ, ರಾಧಿಕಾ ಅವರ ಮುಖದಲ್ಲಿ ಮುಗ್ಧತೆ ಇದೆ.’ ʼಮೊದಲನೆಯದಾಗಿ ಅವರು ತುಂಬಾ ಮುದ್ದಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ಅದ್ಭುತವಾಗಿ ನೃತ್ಯ ಮಾಡುತ್ತಾರೆ, ‘ಇಷ್ಟು ಶ್ರೀಮಂತರಾಗಿದ್ದರೂ ಯಾವುದೇ ಅಹಂಕಾರವಿಲ್ಲ.’ ರಾಧಿಕಾ ತುಂಬಾ ಸರಳ ಸ್ವಭಾವದವರುʼ ಎಂದೆಲ್ಲಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚುತ್ತಿರುವ ರಾಧಿಕಾ ಮರ್ಚೆಂಟ್ ಜನಪ್ರಿಯತೆ
ರಾಧಿಕಾ ಮರ್ಚೆಂಟ್ ಆಗಾಗ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಹೊಸ ವರ್ಷದ ಆಚರಣೆಯಲ್ಲಿ ಸುದ್ದಿಯಲ್ಲಿದ್ದರು. ತಮ್ಮ ಕುಟುಂಬ ಮತ್ತು ಸೆಲೆಬ್ರಿಟಿ ಸ್ನೇಹಿತರೊಂದಿಗೆ ಮೊದಲು ಕ್ರಿಸ್ಮಸ್. ನಂತರ ಹೊಸ ವರ್ಷವನ್ನು ಆಚರಿಸಿದರು. ಇದಾದ ನಂತರ ಮೊದಲ ಮಕರ ಸಂಕ್ರಾಂತಿಯನ್ನು ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬದೊಂದಿಗೆ ಆಚರಿಸಿದರು. ಇತ್ತೀಚೆಗೆ, ಅವರ ರಜೆಯ ಫೋಟೋಗಳು ಸಹ ಸುದ್ದಿಯಾಗಿದ್ದವು.