By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

Homeಮನರಂಜನೆ

ಇಂಗ್ಲಿಷ್‌ನಲ್ಲಿ ಎಷ್ಟು ವ್ಯಂಜನಗಳಿವೆ?, ಎಷ್ಟು ಅಕ್ಷರಮಾಲೆಗಳಿವೆ?… ಈ ಪ್ರಶ್ನೆಗಳಿಗೆ ಕರೀನಾ, ಆಲಿಯಾ ಕೊಟ್ಟ ಉತ್ತರ ಹೀಗಿತ್ತು…

Sky Kannada News
Last updated: August 24, 2024 5:29 am
By Sky Kannada News
10 months ago
Share
3 Min Read
SHARE

ಬಾಲಿವುಡ್‌ನಲ್ಲಿ ಸ್ಟಾರ್‌ ನಾಯಕಿಯರಿಗೇನೂ ಕೊರತೆಯಿಲ್ಲ. ಸೌಂದರ್ಯದ ವಿಷಯದಲ್ಲಿಯೂ ಒಬ್ಬರಿಗಿಂತ ಒಬ್ಬರು ಚೆನ್ನ. ನಟನೆಯಲ್ಲಿಯೂ ಸಹ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಆದರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ತಬ್ಬಿಬ್ಬಾಗುತ್ತಾರೆ. ಈಗ್ಯಾಕೆ ಈ ವಿಷಯ ಅಂತೀರಾ, ಸದ್ಯ ವಿಡಿಯೋವೊಂದು ವೈರಲ್‌ ಆಗಿದೆ. ಇದರಲ್ಲಿ ತಮ್ಮ ನಟನೆ ಮಾತ್ರವಲ್ಲದೆ, ಸೌಂದರ್ಯದಿಂದ ಜನಮನ ಗೆದ್ದಿರುವ ಆಲಿಯಾ ಭಟ್ (Alia Bhatt) ಮತ್ತು ಕರೀನಾ ಕಪೂರ್ (Kareena Kapoor) ಅವರಿಗೆ ಇಂಗ್ಲಿಷ್‌ ವರ್ಣಮಾಲೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ ಅವರು ಸರಿಯಾಗಿ ಉತ್ತರಿಸಿದ್ರಾ?, ಮುಂದೆ ಓದಿ…

ಆಲಿಯಾ ಈ ಹಿಂದೆ ಕೆಲವು ಪ್ರಶ್ನೆಗಳಿಗೆ ವಿಚಿತ್ರ ಉತ್ತರ ನೀಡಿ ಸಿಕ್ಕಿಹಾಕಿಕೊಂಡ ಹಲವು ಸಂದರ್ಭಗಳಿವೆ. ಆಕೆ ‘ಕಾಫಿ ವಿತ್ ಕರಣ್’ (Koffee With Karan) ಸಂಚಿಕೆಯಲ್ಲಿ ಭಾರತದ ರಾಷ್ಟ್ರಪತಿಯ ಹೆಸರನ್ನು ಹೇಳಲು ಸಾಧ್ಯವಾಗಲಿಲ್ಲ. ತಪ್ಪು ಉತ್ತರ ನೀಡಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿಯೂ ಆಲಿಯಾ ತಪ್ಪಾಗಿ ಉತ್ತರಿಸಿದ್ದಾರೆ. ಆದರೆ ಈಗ ಆಲಿಯಾ ಮಾತ್ರವಲ್ಲದೆ, ಕರೀನಾ ಕಪೂರ್ ಅವರ ವಿಡಿಯೋ ಕಾಣಿಸಿಕೊಂಡಿದೆ. ಇದರಲ್ಲಿ ಇಬ್ಬರೂ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರಿಂದ ಟ್ರೋಲ್‌ ಆಗಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ನಟಿಯರು  

ಕೆಲವು ಸಮಯದ ಹಿಂದೆ, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಕೋಮಲ್ ನಹತಾಗೆ ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ಕೋಮಲ್ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ಇಬ್ಬರೂ ನಟಿಯರು ಉತ್ತರಿಸಲು ವಿಫಲರಾದರು. ಹಾಗಾದರೆ ಈ ಪ್ರಶ್ನೆ ಏನು ಮತ್ತು ಅವರು ನೀಡಿದ ಉತ್ತರವೇನು ನೋಡೋಣ.

Read also: ಮೈಬಣ್ಣ ಕಪ್ಪು ಎನ್ನುವ ಒಂದೇ ಕಾರಣಕ್ಕೆ ಎಲ್ಲರಿಂದಲೂ ಟೀಕೆಗೊಳಗಾಗಿದ್ದ ಈಕೆ ಇಂದು ಸ್ಟಾರ್‌ ನಟಿ…ಇವರು ಧರಿಸುವ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತಾ? 

ವಿಡಿಯೋದಲ್ಲಿ ಕರೀನಾ ಕಪೂರ್ ಅವರಿಗೆ ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ ಎಂದು ಕೇಳಿರುವುದನ್ನು ನೀವು ನೋಡಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಕರೀನಾ ಒಂಬತ್ತು ಎಂದಿದ್ದಾರೆ. ಆದರೆ ಈ ಉತ್ತರವು ತಪ್ಪು. ಇಂಗ್ಲಿಷ್ ಭಾಷೆಯಲ್ಲಿ 21 ವ್ಯಂಜನಗಳಿವೆ. ಆದರೆ ಆಲಿಯಾ ಭಟ್ ಅವರಿಗೆ ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಳಲಾಯಿತು? ಇದಕ್ಕೆ ಉತ್ತರವಾಗಿ ಆಲಿಯಾ ಇಪ್ಪತ್ತರ ಆಸುಪಾಸಿನಲ್ಲಿ…! ಎಂದರು. ಅವರ ಉತ್ತರವೂ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ ಇಂಗ್ಲಿಷ್‌ನಲ್ಲಿ ಒಟ್ಟು 26 ಅಕ್ಷರಗಳಿವೆ. ಅವುಗಳಲ್ಲಿ 21 ವ್ಯಂಜನಗಳು ಮತ್ತು 5 ಸ್ವರಗಳು.‌

ವಿಡಿಯೊವನ್ನು ಇಲ್ಲಿ ವೀಕ್ಷಿಸಿ…

ನೆಟ್ಟಿಗರ ಪ್ರತಿಕ್ರಿಯೆ

ಈಗ ಈ ವಿಡಿಯೋವನ್ನು ನೋಡಿದ ನಂತರ, ಜನರು ಇಬ್ಬರ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ‘ಅವರ ಸ್ಟೇಟಸ್ ಏನು, ಸೀರಿಯಸ್‌ ಆಗಿದ್ದಾರಾ, ಎಂದಿಗೂ ಶಾಲೆಗೆ ಹೋಗಲಿಲ್ಲವೇ?ʼ ಹೀಗೆ ಹತ್ತು ಹಲವು ಪ್ರಶ್ನೆಗಳಿಂದ ಟ್ರೋಲ್‌ಗಳಿಂದ ತುಂಬಿ ಹೋಗಿದೆ ಕಾಮೆಂಟ್ ವಿಭಾಗ.

ಮುಂದಿನ ಪ್ರಾಜೆಕ್ಟ್‌

ಕರೀನಾ ಕಪೂರ್ ಅವರು ಶೀಘ್ರದಲ್ಲೇ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ (The Buckingham Murders) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರ ಪಟ್ಟಿಯಲ್ಲಿ ‘ಸಿಂಗಮ್ ಎಗೇನ್’ (Singham Again) ಕೂಡ ಸೇರಿದೆ. ಎರಡೂ ಚಿತ್ರಗಳ ಅವರ ಲುಕ್ ರಿವೀಲ್ ಆಗಿದೆ. ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ಮರ್ಡರ್ ಮಿಸ್ಟರಿ ಆಗಿದ್ದರೆ, ‘ಸಿಂಗಮ್ ಎಗೇನ್’ ನಲ್ಲಿ ಅವರ ಆಕ್ಷನ್ ಅವತಾರವನ್ನು ನೋಡಬಹುದು. ಇದಕ್ಕೂ ಮುನ್ನ ಕರೀನಾ ಕಪೂರ್ ‘ಕ್ರೂ’ (Crew) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕರೀನಾ ಕಪೂರ್ ಫ್ಲೈಟ್ ಅಟೆಂಡೆಂಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ ಅವರ ‘ಜಾನೆ ಜಾನ್’ (Jaane Jaan) ಪಾತ್ರವೂ ವೀಕ್ಷಕರಿಗೆ ತುಂಬಾ ಇಷ್ಟವಾಯಿತು.

ಆಲಿಯಾ ಭಟ್ ಕೂಡ ಒಂದರ ಹಿಂದೆ ಒಂದರಂತೆ ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಲಿಯಾ ಕೈಯ್ಯಲ್ಲಿ ಅನೇಕ ಚಿತ್ರಗಳಿವೆ. ಆಲಿಯಾ ಭಟ್ ಈ ವರ್ಷ ‘ಜಿಗ್ರಾ’ (Jigra) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೇದಾಂಗ್ ರೈನಾ ಈ ಚಿತ್ರದಲ್ಲಿ ನಟಿಯೊಂದಿಗೆ ಇದ್ದಾರೆ. ಇದಲ್ಲದೆ, ಅವರ ಖಾತೆಯಲ್ಲಿ ‘ಲವ್ ಅಂಡ್ ವಾರ್’ (Love & War) ಇದೆ. ಇದರಲ್ಲಿ ಮತ್ತೊಮ್ಮೆ ಅವರು ರಣಬೀರ್ ಕಪೂರ್ (Ranbir Kapoor) ಅವರೊಂದಿಗೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ (Vicky Kaushal) ಕೂಡ ಕಾಣಿಸಿಕೊಳ್ಳಲಿದ್ದಾರೆ.

You Might Also Like

ಬಿರುಕು ಬಿಟ್ಟ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ರಾಮಬಾಣ  

ವಿಚಿತ್ರ ಲವ್‌ಸ್ಟೋರಿ.. ಬೊಂಬೆಯನ್ನು ಮದುವೆಯಾದ ವ್ಯಕ್ತಿ, ಏನಿದು ‘Fictosexual’?

ಶಾರುಖ್ ಧರಿಸಿರುವ ಈ ಜೀನ್ಸ್‌ ಪ್ಯಾಂಟ್ ಬೆಲೆ ಕೇಳಿ ಹೌಹಾರಿದ ನೆಟ್ಟಿಗರು..”ಕಿಂಗ್ ಈಸ್‌ ಆಲ್‌ವೇಸ್‌ ಕಿಂಗ್‌” ಎಂದ ಫ್ಯಾನ್ಸ್‌

Astrology: ಈ ರಾಶಿಯ ಹುಡುಗಿಯರು ಕಾಲಿಗೆ ಕಪ್ಪು ದಾರ ಕಟ್ಟಬಾರದು…

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿದೆ ಎಐ ಕಾರ್ಡ್; ನೋಂದಾಯಿಸಿದ ವಿದ್ಯಾರ್ಥಿಗೆ AI ತರಬೇತಿ, ಸ್ಕಾಲರ್ ಶಿಪ್…ನೋಂದಣಿಗೆ ಅ.31 ಕೊನೆ ದಿನ  

Share This Article
Facebook Email Print
Share
Previous Article Personality Test: ಬಣ್ಣಗಳ ಮೂಲಕ ವ್ಯಕ್ತಿತ್ವವನ್ನು ಗುರುತಿಸಿ, ಗಾಢ ಬಣ್ಣಗಳನ್ನು ಇಷ್ಟಪಡುವವರ ಸ್ವಭಾವ ಹೇಗಿರುತ್ತದೆ ಗೊತ್ತಾ?
Next Article Hair Oiling Tips: ಕೂದಲಿಗೆ ಎಣ್ಣೆ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ…ನಂತರ  ನೋಡಿ ಮ್ಯಾಜಿಕ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಸೂಪರ್‌ಸ್ಟಾರ್‌ ಶಾರುಖ್ ಜೊತೆ ಕೆಲಸ ಮಾಡಲು ಈ ನಟಿಯರು ನಿರಾಕರಿಸಿದರು… ದಕ್ಷಿಣದ ಪ್ರಸಿದ್ಧ ನಟಿಯ ಹೆಸರೂ ಇದರಲ್ಲಿದೆ

RRB ALP Vacancy 2025: ಸಹಾಯಕ ಲೋಕೋ ಪೈಲಟ್’ಗೆ ಸಂಬಳವೆಷ್ಟು?

ಸೇಬು ಹಣ್ಣು VS ಸೇಬು ಹಣ್ಣಿನ ಜ್ಯೂಸ್: ಆರೋಗ್ಯಕ್ಕೆ ಯಾವುದು ಉತ್ತಮ?

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಒಳ್ಳೆಯದು…ಅನುಕೂಲವೆಷ್ಟು, ಅನಾನುಕೂಲವೆಷ್ಟು?

ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?