ನಟಿ ದಿವ್ಯಾ ಭಾರತಿ ಬಹಳ ಕಡಿಮೆ ಸಮಯದಲ್ಲಿ ಬಾಲಿವುಡ್ನಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದರು. ತನ್ನ ಅಪ್ರತಿಮ ಸೌಂದರ್ಯ, ಲವಲವಿಕೆಯ ಮ್ಯಾನರಿಸಂ ಮತ್ತು ಅದ್ಭುತ ನಟನೆಯಿಂದ ಎಲ್ಲರ ಮನ ಗೆದ್ದಿದ್ದರು. ಆದರೆ, ದಿವ್ಯಾ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು. 1993 ರಲ್ಲಿ ನಿಧನರಾದ ದಿವ್ಯಾ ಸಾ*ವು ಇನ್ನೂ ನಿಗೂಢವಾಗಿಯೇ ಉಳಿದಿದೆ. ದಿವ್ಯಾ ಭಾರತಿ ಹೇಗೆ ಸತ್ತರು ಎಂದು ಆಕೆಯ ಅಭಿಮಾನಿಗಳು ತಿಳಿದುಕೊಳ್ಳಲು ಬಯಸುತ್ತಾರೆ. ಇದೀಗ ಸುಮಾರು 31 ವರ್ಷಗಳ ನಂತರ ನಟಿ ಗುಡ್ಡಿ ಮಾರುತಿ ಈ ಕರಾಳ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್ ನಡೆಸಿದ ಸಂದರ್ಶನದಲ್ಲಿ ಗುಡ್ಡಿ, “ದಿವ್ಯಾ ಭಾರತಿ ಯಾವಾಗಲೂ ಚಿಂತಿತರಾಗಿರುತ್ತಿದ್ದರು. ಸಾಯುವ ಮುನ್ನವೂ ಆಕೆ ಗೊಂದಲದಲ್ಲಿದ್ದರು” ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ತನ್ನ ತಪ್ಪಿನಿಂದಾಗಿಯೇ ದಿವ್ಯಾ ಭಾರತಿ ಟೆರೆಸ್ನಿಂದ ಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಆಕೆಯನ್ನು ಕೊಲೆ ಮಾಡಿಲ್ಲ. ಆದರೆ, ಇವತ್ತಿನವರೆಗೂ ದಿವ್ಯಾ ಭಾರತಿ ಅವರನ್ನು ಕೊ*ಲೆ ಮಾಡಲಾಗಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ ಎಂದು ವದಂತಿಗಳಿಗೆ ತೆರೆ ಎಳೆದ ಗುಡ್ಡಿ ಮಾರುತಿ, ದಿವ್ಯಾ ಭಾರತಿಯನ್ನು ಕೊ*ಲೆ ಮಾಡಲು ಸಾಧ್ಯವಿಲ್ಲ. ಆದರೆ ತನ್ನ ತಪ್ಪಿನಿಂದ ಟೆರೆಸ್ನಿಂದ ಬಿದ್ದರು ಎಂದು ತಿಳಿಸಿದ್ದಾರೆ.
ಮತ್ತೊಂದು ವಿಚಾರವನ್ನು ಗುಡ್ಡಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದು, “ದಿವ್ಯಾ ಯಾವಾಗಲೂ ಗೊಂದಲದಲ್ಲಿ ಇರುತ್ತಿದ್ದರು. ಆಕೆಯ ಬಾಲ್ಯದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಯಾವಾಗಲೂ ತೊಂದರೆಯಲ್ಲಿರುವಂತೆ ಕಾಣಿಸುತ್ತಿದ್ದರು. ಪ್ರತಿ ದಿನವೂ ತನ್ನ ಕೊನೆಯ ದಿನ ಎಂಬಂತೆ ಬದುಕುತ್ತಿದ್ದರು. ಆಗ ಎಲ್ಲರೂ ಹೊರಾಂಗಣ ಶೂಟಿಂಗ್ಗೆ ಹೋಗುತ್ತಿದ್ದರು. ಆದರೆ ಅವರಿಗೆ ಅದು ಇಷ್ಟವಾಗುತ್ತಿರಲಿಲ್ಲ.
Also Read: ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್ ಮಾಡೊಲ್ಲ!
ಎತ್ತರಕ್ಕೆ ಹೆದರದ ಧೈರ್ಯವಂತ ಹುಡುಗಿ. ಒಂದು ರಾತ್ರಿ, ಜುಹುವಿನಲ್ಲಿರುವ ದಿವ್ಯಾಳ ಕಟ್ಟಡದ ಬಳಿ ಐಸ್ ಕ್ರೀಮ್ ಅಂಗಡಿಗೆ ಹೋಗುತ್ತಿದ್ದಾಗ, ಯಾರೋ ತನ್ನ ಹೆಸರನ್ನು ಕರೆಯುತ್ತಿರುವುದನ್ನು ಕೇಳಿದಂತಾಯಿತು. ತಲೆ ಎತ್ತಿ ನೋಡಿದಾಗ ದಿವ್ಯಾ ಐದನೇ ಮಹಡಿಯ ಪ್ಯಾರಪೆಟ್ ಮೇಲೆ ಕಾಲುಗಳನ್ನು ತೂಗಾಡುತ್ತಾ ಕುಳಿತಿರುವುದು ಕಂಡಿತು. ತಕ್ಷಣವೇ ಹಾಗೆ ಕೂರುವುದು ಸೇಫ್ ಅಲ್ ಎಂದು ಹೇಳಿದಾಗ ದಿವ್ಯಾ “ಕುಚ್ ನಹಿ ಹೋತಾ” (ಏನೂ ಆಗುವುದಿಲ್ಲ) ಎಂದು ನಿಧಾನವಾಗಿ ಪ್ರತಿಕ್ರಿಯಿಸಿದರು. ಆದರೆ ಆಕೆಯನ್ನು ಹಾಗೆ ನೋಡುವಾಗ ಭಯವಾಯಿತು” ಎಂದು ವಿವರಿಸಿದ್ದಾರೆ.
ದಿವ್ಯಾ ಭಾರತಿ ಟೆರೇಸ್ನಿಂದ ಬಿದ್ದಿದ್ದು ಹೇಗೆ ಎಂದು ಹೇಳಿರುವ ಗುಡ್ಡಿ ಮಾರುತಿ, ದಿವ್ಯಾ ಭಾರತಿ ತನ್ನ ಪತಿ ಸಾಜಿದ್ ನಾಡಿಯಾಡ್ವಾಲಾಗಾಗಿ ಟೆರೇಸ್ನಲ್ಲಿ ಕಾಯುತ್ತಿದ್ದರು. ಸಾಜಿದ್ ಕಾರು ಬಂದ ಕೂಡಲೇ ದಿವ್ಯಾ ಕೆಳಗೆ ಇಣುಕಿ ನೋಡಲು ಯತ್ನಿಸಿದರು. ಈ ಸಮಯದಲ್ಲಿ, ಆಕೆ ಬ್ಯಾಲೆನ್ಸ್ ತಪ್ಪಿ ಬಿದ್ದರು. ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ದಿವ್ಯಾ ಭಾರತಿ ಬೀಳುವುದನ್ನು ನೋಡಿದರು. ಇದರಲ್ಲಿ ಯಾವುದೇ ಸುಳ್ಳಿಲ್ಲ. ಅದೊಂದು ಅಪಘಾತ ಎಂದಿದ್ದಾರೆ.