Fitness Tips: ಸಿನಿಮಾಗಳಲ್ಲಿ ನಟಿಯರನ್ನು ನೋಡಿದಾಗಲೆಲ್ಲ ಆಕೆ ಎಷ್ಟು ಫಿಟ್ ಆಗಿದ್ದಾಳೆ, ನಾವು ಯಾವಾಗ ಆ ರೀತಿ ಆಗುವುದು ಎಂದು ಮನಸ್ಸಿನಲ್ಲಿಯೇ ಹೊಟ್ಟೆಕಿಚ್ಚುಪಡುತ್ತೇವೆ ಅಲ್ಲವೇ, ಹಾಗಾದರೆ ಅಷ್ಟೊಂದು ಗ್ಲಾಮರಸ್ ಆಗಿ ಕಾಣಲು ಈ ನಟಿಯರು ಏನು ಆಹಾರ ತೆಗೆದುಕೊಳ್ಳುತ್ತಾರೆ? ಅವರು ಫಿಟ್ ಆಗಿರುವುದರ ಹಿಂದಿನ ರಹಸ್ಯವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ…
ನಟಿಯರು ಫಿಟ್ ಆಗಿರಲು ಹಲವು ರೀತಿಯ ವರ್ಕೌಟ್ ಮಾಡುತ್ತಾರೆ. ಯಾವುದೇ ಸಂದರ್ಭಗಳು ಇರಲಿ, ವ್ಯಾಯಾಮವನ್ನು ಮಾತ್ರ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಇದರೊಂದಿಗೆ ತನ್ನ ಆಹಾರ ಕ್ರಮದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಕಾಲಕಾಲಕ್ಕೆ ತಮ್ಮ ಫಿಟ್ನೆಸ್ ದಿನಚರಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅನೇಕ ನಟಿಯರು ಇದ್ದಾರೆ. ಅಂದಹಾಗೆ ಇಂದು ನಾವು ಬಿ ಟೌನ್ ನಟಿಯರು ಫಿಟ್ ಆಗಿರಲು ಅನುಸರಿಸುವ ಆ ಐದು ವರ್ಕೌಟ್ಗಳ ಬಗ್ಗೆ ಹೇಳಲಿದ್ದೇವೆ. ಅವುಗಳನ್ನು ಅನುಸರಿಸುವ ಮೂಲಕ ನೀವು ನಟಿಯರ ತರಹ ಕಾಣಬಹುದು.
ಯೋಗ
ಯೋಗ ಎನ್ನುವುದು ಅನೇಕ ನಟಿಯರ ದಿನಚರಿಯಲ್ಲಿ ಒಳಗೊಂಡಿರುವ ವ್ಯಾಯಾಮವಾಗಿದೆ. ಶಿಲ್ಪಾ ಶೆಟ್ಟಿ ಅಥವಾ ಮಲೈಕಾ ಅರೋರಾ ಯಾರೇ ಆಗಿರಲಿ, ಈ ಎಲ್ಲಾ ನಟಿಯರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯೋಗ ಮಾಡುವ ವಿಡಿಯೊಗಳು ಮತ್ತು ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಹಾಗೆಂದು ನೀವು ಗಂಟೆಗಟ್ಟಲೇ ಯೋಗ ಮಾಡುವ ಅಗತ್ಯವಿಲ್ಲ. ದಿನಕ್ಕೆ ಕೇವಲ ಹತ್ತು ನಿಮಿಷ ಯೋಗ ಮಾಡುವುದರಿಂದ ಪರಿಹಾರ ಪಡೆಯಬಹುದು ಎನ್ನುವುದು ಅವರ ಅಭಿಪ್ರಾಯ.
ಪೈಲೇಟ್ಸ್ ವರ್ಕ್ ಔಟ್
ಕತ್ರಿನಾ ಕೈಫ್ನಿಂದ ಹಿಡಿದು ಅಲಿಯಾ ಭಟ್ವರೆಗೆ ಎಲ್ಲರೂ ಫಿಟ್ ಆಗಿರಲು ಪೈಲೇಟ್ಸ್ನ ಸಹಾಯ ಪಡೆಯುತ್ತಾರೆ. ಈ ವ್ಯಾಯಾಮವು ದೇಹಕ್ಕೆ ನಮ್ಯತೆಯನ್ನು ತರುತ್ತದೆ. ಕೊಬ್ಬನ್ನು ಸುಡಲು ಇದು ಪರಿಪೂರ್ಣ ತಾಲೀಮಾಗಿದೆ.
Read Also: ಗುರುತೇ ಸಿಗದಷ್ಟು ಬದಲಾದ ಈ ಚಾಕೊಲೇಟ್ ಹೀರೋ ಯಾರೆಂದು ಗೆಸ್ ಮಾಡಿ?
ಬಾಕ್ಸಿಂಗ್
ಚಿತ್ರರಂಗದಲ್ಲಿ ಅನೇಕ ನಟಿಯರು ತಮ್ಮ ಕೊಬ್ಬು ಕರಗಿಸಲು ಮತ್ತು ದೇಹವನ್ನು ಬಲಪಡಿಸಲು ಬಾಕ್ಸಿಂಗ್ ಮಾಡುತ್ತಾರೆ. ಈ ಸಾಲಿನಲ್ಲಿ ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ರಾಕುಲ್ ಪ್ರೀತ್ ಸಿಂಗ್ ಸೇರಿದ್ದಾರೆ. ಬಾಕ್ಸಿಂಗ್ ಕ್ಯಾಲೊರಿಗಳನ್ನು ಸುಡುವುದು ಮಾತ್ರವಲ್ಲದೆ ಸ್ನಾಯುಗಳನ್ನು ಬಲಪಡಿಸುತ್ತದೆ.
ವೇಟ್ ಲಿಫ್ಟಿಂಗ್
ವೇಟ್ ಲಿಫ್ಟಿಂಗ್ ಮೂಲಕ ಫಿಟ್ ಆಗಿರುವ ಅನೇಕ ನಟಿಯರಿದ್ದಾರೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಇದು ಪರಿಣಾಮಕಾರಿಯಾಗಿದೆ.
ಈಜು
ಬಹುತೇಕ ನಟಿಯರು ಫಿಟ್ ಆಗಿರಲು ಈಜಿನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತೂಕ ಕಡಿಮೆಯಾಗುವುದಲ್ಲದೆ ದೇಹಕ್ಕೆ ಶಕ್ತಿಯೂ ಸಿಗುತ್ತದೆ.