Hacks To Store Bananas For A Week: ಕಡಿಮೆ ವೆಚ್ಚದಲ್ಲಿ ಹೆಚ್ಚು ಆರೋಗ್ಯವನ್ನು ನೀಡುವ ಹಣ್ಣೆಂದರೆ ಅದು ಬಾಳೆಹಣ್ಣು. ಎಲ್ಲಾ ಸೀಸನ್ನಲ್ಲೂ ಲಭ್ಯವಿರುವ ಕಾರಣ, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ಅನೇಕ ಜನರು ಬಾಳೆಹಣ್ಣು ಖರೀದಿಸಿ ಸೇವಿಸುತ್ತಾರೆ. ಕೊಳ್ಳುವುದೇನೋ ಸರಿ, ಆದರೆ ಇವುಗಳನ್ನು ಶೇಖರಿಸಿಡುವುದು ಸಮಸ್ಯೆಯಾಗಬಹುದು. ಮಾರುಕಟ್ಟೆಯಿಂದ ಮನೆಗೆ ತರುವವರೆಗೆ ಫ್ರೆಶ್ ಆಗಿಯೇ ಕಾಣುವ ಹಣ್ಣುಗಳು, ನಂತರ ತಮ್ಮ ಬಣ್ಣವನ್ನೇ ಬದಲಾಯಿಸುತ್ತವೆ. ಬೇಗನೆ ಹಾಳಾಗುತ್ತವೆ. ಆದ್ದರಿಂದ ಬಾಳೆಹಣ್ಣನ್ನು ದೀರ್ಘಕಾಲ ಸಂಗ್ರಹಿಸಲು ಕೆಲವು ಟಿಪ್ಸ್ ಇಲ್ಲಿವೆ ನೋಡಿ…
ಮೊದಲು ಪ್ರತ್ಯೇಕವಾಗಿಡಿ
ಅನೇಕರು ಬಾಳೆಹಣ್ಣುಗಳನ್ನು ಮಾರುಕಟ್ಟೆಯಿಂದ ತಂದವರು, ಕವರ್ನಿಂದ ತೆಗೆಯದೆ ಅದರಲ್ಲಿಯೇ ಇಟ್ಟುಬಿಡುತ್ತಾರೆ. ಆದರೆ ಹಾಗೆ ಮಾಡದೆ ಅವುಗಳನ್ನು ತಂದ ತಕ್ಷಣ, ಬೇರ್ಪಡಿಸಬೇಕು. ಅಲ್ಲದೆ, ಬಾಳೆಹಣ್ಣುಗಳನ್ನು ಖರೀದಿಸಿದ ನಂತರ, ಅವುಗಳನ್ನು ಪ್ರತ್ಯೇಕವಾಗಿಡಿ. ನಂತರ ಬಾಳೆಹಣ್ಣಿನ ತುದಿಗೆ ಚಿತ್ರದಲ್ಲಿ ತೋರಿಸಿರುವ ಹಾಗೆ ಸುತ್ತಲೂ ಸಿಲ್ವರ್ ಫಾಯಿಲ್ ಅಥವಾ ಪ್ಲಾಸ್ಟಿಕ್ ಕವರ್ ಅನ್ನು ಸಂಪೂರ್ಣವಾಗಿ ಸುತ್ತಿ ರಬ್ಬರ್ ಹಾಕಿಡಿ.
ಬಟ್ಟೆಯಲ್ಲಿ ಸುತ್ತಿ
ಬಾಳೆಹಣ್ಣುಗಳು ಸೂರ್ಯನ ಬೆಳಕಿನಲ್ಲಿ ಬೇಗನೆ ಕೆಡುತ್ತವೆ. ಆದ್ದರಿಂದ ಅವುಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಯಿರುವ ಜಾಗದಲ್ಲಿ ಸಂಗ್ರಹಿಸಬೇಡಿ. ಮನೆಯಲ್ಲಿ ಶೇಖರಿಸಿಟ್ಟಾಗ ಬಟ್ಟೆಯಲ್ಲಿ ಸುತ್ತಿದರೆ ಹೆಚ್ಚು ದಿನ ಫ್ರೆಶ್ ಆಗಿರುತ್ತದೆ.
Read Also: ಶೇವಿಂಗ್ ಕ್ರೀಮ್ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ, ನೀವು ಹೀಗೂ ಬಳಸಬಹುದು!
ನೇತು ಹಾಕಿ
ಬಾಳೆಹಣ್ಣುಗಳನ್ನು ಹಣ್ಣಿನ ಬುಟ್ಟಿಯಲ್ಲಿ ಒಂದರ ಮೇಲೊಂದರಂತೆ ಜೋಡಿಸಿದರೆ ಬೇಗನೆ ಹಾಳಾಗುತ್ತದೆ. ಅಲ್ಲದೆ ಅದರ ಸಿಪ್ಪೆ ಕಪ್ಪಾಗುತ್ತದೆ. ಹಾಗಾಗಿ ಬಾಳೆಹಣ್ಣುಗಳನ್ನು ಯಾವಾಗಲೂ ಚೆನ್ನಾಗಿ ಗಾಳಿ ಇರುವ ಜಾಗದಲ್ಲಿ ನೇತು ಹಾಕಿ. ಅದಕ್ಕಾಗಿಯೇ ಈ ಹಣ್ಣುಗಳನ್ನು ಅಂಗಡಿಗಳಲ್ಲಿ ನೇತಾಕುವುದನ್ನು ನಾವು ನೋಡಬಹುದು.
ಸೋಡಾ-ನೀರು
ಬಾಳೆಹಣ್ಣುಗಳನ್ನು ಕೆಲವು ದಿನಗಳವರೆಗೆ ತಾಜಾವಾಗಿಡಲು, ಅವುಗಳನ್ನು ಮಾರುಕಟ್ಟೆಯಿಂದ ತಂದ ತಕ್ಷಣ 10 ನಿಮಿಷಗಳ ಕಾಲ ನೀರು ಮತ್ತು ಸೋಡಾ ಮಿಶ್ರಣದಲ್ಲಿ ನೆನೆಸಿಡಿ.
ವಿನೆಗರ್
ಬಾಳೆಹಣ್ಣಿನ ಮೇಲೆ ಸ್ವಲ್ಪ ನ್ಯಾಚುರಲ್ ವಿನೆಗರ್ ಸ್ಪ್ರೇ ಮಾಡಿದರೆ ಬಾಳೆಹಣ್ಣುಗಳು ಹೆಚ್ಚು ದಿನಗಳವರೆಗೆ ಕೆಡದಂತೆ ಇರುತ್ತವೆ.
ಏನು ಮಾಡಬಾರದು?
ಫ್ರಿಜ್ ನಲ್ಲಿ ಇಡಬೇಡಿ
ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡಲೇಬಾರದು. ಏಕೆಂದರೆ ಎಥಿಲೀನ್ ಅನಿಲವು ಬಾಳೆಹಣ್ಣಿನ ಕಾಂಡಗಳಿಂದ ವೇಗವಾಗಿ ಬಿಡುಗಡೆಯಾಗುತ್ತದೆ. ಈ ಕಾರಣದಿಂದಾಗಿ, ಬಾಳೆ ಹಣ್ಣಿನ ಸಿಪ್ಪೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಹಾನಿಗೊಳಗಾಗುತ್ತದೆ.
ಇತರ ಹಣ್ಣುಗಳಿಂದ ದೂರವಿರಲಿ
ನಮ್ಮಲ್ಲಿ ಹೆಚ್ಚಿನವರು ಇತರ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಬಾಳೆಹಣ್ಣುಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ ಬಾಳೆಹಣ್ಣುಗಳನ್ನು ತಾಜಾವಾಗಿಡಲು, ಅವುಗಳನ್ನು ಇತರ ಹಣ್ಣುಗಳಿಂದ ದೂರವಿಡಬೇಕು. ವಿಶೇಷವಾಗಿ ಅವುಗಳನ್ನು ಅವಕಾಡೊ, ಕಿವಿ, ಸೇಬುಗಳು ಮತ್ತು ಟೊಮೆಟೊಗಳ ಬಳಿ ಇಡಬಾರದು. ಏಕೆಂದರೆ ಇವುಗಳಿಂದ ಬಿಡುಗಡೆಯಾಗುವ ಎಥಿಲೀನ್ ಅನಿಲವು ಬಾಳೆಹಣ್ಣುಗಳನ್ನು ಬೇಗನೆ ಕೆಡುವಂತೆ ಮಾಡುತ್ತದೆ.
ಬಿಡಿ ಬಿಡಿಯಾಗಿದ್ದರೆ…
ಬಾಳೆಹಣ್ಣಿನ ಗೊಂಚಲಿನಲ್ಲಿ ಏನಾದರೂ ಹಾನಿಯಾಗಿದ್ದರೆ ತಕ್ಷಣವೇ ಬೇರ್ಪಡಿಸಿ. ಇಲ್ಲದಿದ್ದರೆ ಉಳಿದ ಹಣ್ಣುಗಳು ಹಾಳಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಬಿಡಿಯಾಗಿ ಮಾರಾಟವಾಗುವ ಬಾಳೆ ಹಣ್ಣುಗಳನ್ನು ಖರೀದಿಸಬೇಡಿ. ಇವು ಬೇಗ ಹಾಳಾಗುತ್ತವೆ.